ಕನ್ನಡ ವಾರ್ತೆಗಳು

ಹೋಂ ಸ್ಟೇ ದಾಳಿ ಪ್ರಕರಣದ ಆರೋಪಿ ಎನ್ನಲಾಗಿರುವ ಯುವಕನ ಮೇಲೆ ತಲವಾರು ದಾಳಿ

Pinterest LinkedIn Tumblr

ಮಂಗಳೂರು, ಮೇ 13: 2008ರ ಹೋಂ ಸ್ಟೇ ದಾಳಿ ಪ್ರಕರಣದ ಆರೋಪಿ ಎಂದು ಹೇಳಲಾಗಿರುವ ಯುವಕನ ಮೇಲೆ ಅಪರಿಚಿತರ ತಂಡವೊಂದು ಬಜಾಲ್ ಬಳಿ ತಲವಾರಿನಿಂದ ದಾಳಿ ನಡೆಸಿ ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ.

ದಾಳಿಯಿಂದಹಲ್ಲೆಗೊಳಗಾದ ಯುವಕನನ್ನು ಬಜಾಲ್ ಕಲ್ಲಕಟ್ಟೆ ನಿವಾಸಿ ಶ್ರೇಯಸ್ (26) ಎನ್ನಲಾಗಿದೆ.

ಈತನ ಮೇಲೆ ಈ ಹಿಂದೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಲ್ಕೈದು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶುಕ್ರವಾರ ಮಧ್ಯಾಹ್ನ ವೇಳೆ ಸುಮಾರು 5 ಮಂದಿಯ ತಂಡವೊಂದು ಈತನ ಮೇಲೆ ಬಜಾಲ್ ಬಳಿ ತಲವಾರಿನಿಂದ ದಾಳಿ ನಡೆಸಿದ್ದು, ಗಾಯಗೊಂಡ ಈತನನ್ನು ಕಂಕನಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ..

ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment