ಕನ್ನಡ ವಾರ್ತೆಗಳು

ರೂ.230 ಕೋಟಿ ವೆಚ್ಚದ ಬಂಟ ಸಮಾಜದ ಶತಮಾನೋತ್ಸವ ಕಟ್ಟಡಗಳ ಸಂಕೀರ್ಣ ನಿರ್ಮಾಣಕ್ಕೆ ಶಿಲಾನ್ಯಾಸ

Pinterest LinkedIn Tumblr

Bunts_Shilanyasa_1

ವರದಿ / ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು, ಮೇ.13 : ಬಂಟರ ಯಾನೆ ನಾಡವರ ಮಾತೃಸಂಘದ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಶ್ರೀ ಮಾಲಾಡಿ ಅಜಿತ್ ಕುಮಾರ್ ರೈ ಅವರ ನೇತ್ರತ್ವದಲ್ಲಿ ರೂ. 230 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುವ ಸಂಘದ ಶತಮಾನೋತ್ಸವ ಕಟ್ಟಡಗಳ ಸಂಕೀರ್ಣ ನಿರ್ಮಾಣದ ಶಿಲಾನ್ಯಾಸ ಸಮಾರಂಭವು ಬುಧವಾರದಂದು ಸಂಜೆ ಬಂಟ್ಸ್ ಹಾಸ್ಟೆಲ್ ವಠಾರದಲ್ಲಿ ಬಹಳ ಅದ್ಧೂರಿಯಾಗಿ ಜರಗಿತು.

ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಶ್ರೀ ಓಂಪ್ರಕಾಶ್ I.P.S. (ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲೀಸ್, ಕರ್ನಾಟಕ,) ಇವರು ದೀಪ ಪ್ರಜ್ವಲನಗೊಳಿಸುವ ಮೂಲಕ ಸಮಾರಂಭವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು.ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ||ಎನ್ ವಿನಯ ಹೆಗ್ಡೆ ಹಾಗೂ ಎ.ಜೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ|| ಎ.ಜೆ ಶೆಟ್ಟಿ ಇವರು ಶಿಲಾನ್ಯಾಸ ಸಮಾರಂಭದ ನಾಮಫಲಕ ಅನಾವರಣ ಮಾಡಿದರು.

Bunts_Building_Press_2

Bunts_Shilanyasa_2 Bunts_Shilanyasa_3 Bunts_Shilanyasa_4 Bunts_Shilanyasa_5 Bunts_Shilanyasa_6 Bunts_Shilanyasa_7 Bunts_Shilanyasa_8 Bunts_Shilanyasa_9 Bunts_Shilanyasa_10 Bunts_Shilanyasa_11 Bunts_Shilanyasa_12 Bunts_Shilanyasa_13 Bunts_Shilanyasa_14 Bunts_Shilanyasa_15

ಸಮಾರಂಭದಲ್ಲಿ ಶ್ರೀ ಬಿ. ರಮಾನಾಥ್ ರೈ, ಅರಣ್ಯ ಮತ್ತು ದ.ಕ ಜಿಲ್ಲಾ ಉಸ್ತುವಾರಿ ಸಚಿವರು, ಶ್ರೀ ನಳಿನ್ ಕುಮಾರ್ ಕಟೀಲ್, ಲೋಕಸಭಾ ಸದಸ್ಯರು ಮಂಗಳೂರು, ಶ್ರೀಮತಿ ಶಕುಂತಳಾ ಶೆಟ್ಟಿ, ವಿಧಾನಸಭಾ ಸದಸ್ಯರು ಪುತ್ತೂರು, ಶ್ರೀ ಪ್ರತಾಪ್ ಚಂದ್ರ ಶೆಟ್ಟಿ ವಿಧಾನ ಪರಿಷತ್ ಸದಸ್ಯರು, ಶ್ರೀ ನಾಗರಾಜ್ ಶೆಟ್ಟಿ ಮಾಜಿ ಸಚಿವರು, ಕೆ. ಪಕಾಶ್ ಶೆಟ್ಟಿ. ಚೆಯರ್‌ಮೆನ್ ಮತ್ತು ಎಮ್.ಡಿ ಎಮ್.ಆರ್.ಜಿ ಗ್ರೂಪ್, ಡಾ||. ಎಮ್. ಮೋಹನ್ ಆಳ್ವ. ಅಧ್ಯಕ್ಷರು ಆಳ್ವಾಸ್ ಶಿಕ್ಷಣ ಸಂಸ್ಥೆಗಳು, ವಿಶ್ವನಾಥ ಶೆಟ್ಟಿ ನಿಕರೆ. ಅಧ್ಯಕ್ಷರು ಬಂಟರ ಸಂಘ ಮುಂಬಯಿ, ಶೇಖರ್ ಶೆಟ್ಟಿ. ಅಧ್ಯಕ್ಷರು ಬಂಟ್ಸ್ ಎಸೋಸಿಯೇಶನ್ ಮುಂಬಯಿ, ಪ್ರಭಾಕರ್ ಎಲ್. ಶೆಟ್ಟಿ. ಉಪಾಧ್ಯಕ್ಷರು ಬಂಟರ ಸಂಘ ಮುಂಬಯಿ, ಬ್ರಿಗೇಡಿಯರ್ ಐ.ಎನ್.ರೈ, ಮೇರ್ಕಳ ತ್ಯಾಂಪಣ್ಣ ಶೆಟ್ಟಿ. ಮಾಜಿ ಅಧ್ಯಕ್ಷರು ಬಂಟರ ಸಂಘ ಮುಂಬಯಿ, ಬಿ. ಅಪ್ಪಣ್ಣ ಹೆಗ್ಡೆ. ಮಾಜಿ ಆಡಳಿತ ಮೊಕ್ತೇಸರರು ಶ್ರೀ ಮೂಕಾಂಬಿಕ ದೇವಸ್ಥಾನ ಕೊಲ್ಲೂರು, ಪದ್ಮನಾಭ ಪಯ್ಯಡೆ. ಉದ್ಯಮಿಗಳು ಮುಂಬಯಿ, ಶ್ರೀಮತಿ ಪ್ರೇಮಲತಾ ಸತೀಶ್ಚಂದ್ರ ಹೆಗ್ಡೆ. ಅಧ್ಯಕ್ಷರು, ಸತೀಶ್‌ಚಂದ್ರ ಹೆಗ್ಡೆ ಫ್ಯಾಮಿಲಿ ಟ್ರಸ್ಟ್, ಶ್ರೀಮತಿ ಲತಾ ಜಯರಾಮ ಶೆಟ್ಟಿ. ಅಧ್ಯಕ್ಷರು ಮಹಿಳಾ ವಿಭಾಗ ಬಂಟರ ಸಂಘ ಮುಂಬಯಿ, ಶ್ರೀಮತಿ ಆಶಾ ಮನೋಹರ ಹೆಗ್ಡೆ. ಮಾಜಿ ಅಧ್ಯ್ಯಕ್ಷರು ಮಹಿಳಾ ವಿಭಾಗ ಬಂಟರ ಸಂಘ ಮುಂಬಯಿ, ಶ್ರೀಮತಿ ಮಂಜುಳಾ ಶೆಟ್ಟಿ. ಜೊತೆ ಕಾರ್ಯದರ್ಶಿಗಳು ಬಂಟರ ಸಂಘ ಬೆಂಗಳೂರು, ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮೇಘನಾಥ್ ಶೆಟ್ಟಿ,ಕೋಶಾಧಿಕಾರಿ ಸಿ ಎ. ಮನಮೋಹನ್ ಶೆಟ್ಟಿ, ಮೊದಲಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Bunts_Shilanyasa_16 Bunts_Shilanyasa_17 Bunts_Shilanyasa_19 Bunts_Shilanyasa_20 Bunts_Shilanyasa_21 Bunts_Shilanyasa_22 Bunts_Shilanyasa_23 Bunts_Shilanyasa_24 Bunts_Shilanyasa_25 Bunts_Shilanyasa_26

ಸ್ವಾಗತಿಸಿ, ಪ್ರಸ್ತಾವನೆಗೈದ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಶ್ರೀ ಮಾಲಾಡಿ ಅಜಿತ್ ಕುಮಾರ್ ರೈ ಅವರು, ಸಮಾಜದ ಶ್ರೇಯೋಭಿವೃದ್ದಿಯನ್ನು ಮಾಡುವ ಸದುದ್ದೇಶದಿಂದ ಹಾಗೂ ಸಂಘವು ಶತಮಾನೋತ್ಸವವನ್ನು ಪೂರೈಸಿದ ಸವಿನೆನಪಿಗಾಗಿ ನಿರ್ಮಿಸುವ ಶತಮಾನೋತ್ಸವ ಕಟ್ಟಡಗಳಲ್ಲಿ 2000 ಆಸನ ವ್ಯವಸ್ಥೆ ಇರುವ ಸುಸಜ್ಜಿತ ಸಭಾಭವನ, ಸಭೆ, ಸಮಾರಂಭಗಳನ್ನು ಏರ್ಪಡಿಸಲು ಎರಡು ಸಭಾಭವನಗಳು, 1250ರಷ್ಟು ವಾಹನ ನಿಲುಗಡೆಗೆ ವಿಸ್ತಾರವಾದ ಅವಕಾಶ, ಮೂರು ಪ್ರತ್ಯೇಕ ಲಾಬಿಗಳು, 4ನೇ ಮಹಡಿಯಲ್ಲಿ 50.000 ಚದರ ಅಡಿಯಷ್ಟು ಓಪನ್ ಟೆರೆಸ್, ಸುಮಾರು 6 ಲಕ್ಷ ಚದರ ಅಡಿ ವಾಣಿಜ್ಯ ಸಂಕೀರ್ಣ ಹಾಗೂ ವಿಶ್ವ ದರ್ಜೆಯ ಜಿಮ್ ಮತ್ತು ಕ್ಲಬ್ ಮೊದಲಾದವುಗಳನ್ನು ಒಳಗೊಂಡಿರುವ ಮಾತೃಸಂಘದ ಶತಮಾನೋತ್ಸವ ಕಟ್ಟಡಗಳ ಸಂಕೀರ್ಣವನ್ನು ಸಮಾಜ ಬಾಂಧವರ ಸಹಕಾರದೊಂದಿಗೆ ರೂ. 230 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದರು.

Bunts_Shilanyasa_27 Bunts_Shilanyasa_28 Bunts_Shilanyasa_29 Bunts_Shilanyasa_30 Bunts_Shilanyasa_31 Bunts_Shilanyasa_32 Bunts_Shilanyasa_33 Bunts_Shilanyasa_34 Bunts_Shilanyasa_35 Bunts_Shilanyasa_36 Bunts_Shilanyasa_37 Bunts_Shilanyasa_38 Bunts_Shilanyasa_39 Bunts_Shilanyasa_40 Bunts_Shilanyasa_41 Bunts_Shilanyasa_42 Bunts_Shilanyasa_43 Bunts_Shilanyasa_44 Bunts_Shilanyasa_45 Bunts_Shilanyasa_46 Bunts_Shilanyasa_47 Bunts_Shilanyasa_48 Bunts_Shilanyasa_49 Bunts_Shilanyasa_50 Bunts_Shilanyasa_51

ಸಮಾರಂಭದ ಉದ್ಘಾಟನಕ್ಕೂ ಮುನ್ನ ಗಾನನೃತ್ಯ ಅಕಾಡೆಮಿ ಮಂಗಳೂರು ಇವರ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಬಂಟರ ಯಾನೆ ನಾಡವರ ಮಾತೃಸಂಘದ ಜೊತೆ ಕಾರ್ಯದರ್ಶಿ ಕಾವು ಹೇಮನಾಥ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಹಾಗೂ ಶ್ರೀಮತಿ ರಾಜೇಶ್ವರಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Write A Comment