ಕನ್ನಡ ವಾರ್ತೆಗಳು

ಅಜ್ಜಿ ಮನೆಗೆಂದು ತೆರಳಿದ ಯುವತಿ ಮನೆಗೆ ಬಾರದೆ ನಾಪತ್ತೆ

Pinterest LinkedIn Tumblr

ಕುಂದಾಪುರ: ಅಜ್ಜಿ ಮನೆಗೆಂದು ತೆರಳಿದ ಯುವತಿಯೋರ್ವಳು ಪುನಃ ಮನೆಗೆ ಬಾರದೇ ಕಾಣೆಯಾಗಿರುವ ಘಟನೆ ಕುಂದಾಪುರದ ಕನ್ಯಾನ ಎಂಬಲ್ಲಿ ನಡೆದಿದೆ.

Kundapura_Kanyana_Kaveri Missing

ಇಲ್ಲಿನ ನಿವಾಸಿ ಕಾವೇರಿ (21) ಕಾಣೆಯಾದ ಯುವತಿ.

ಕಾವೇರಿ ಅವರು ಮಂಗಳವಾರ ಬೆಳಿಗ್ಗೆ ಕುಂದಾಪುರ ತಾಲೂಕು ಕನ್ಯಾನ ಗ್ರಾಮದ ಗುಬ್ಕೋಣುನಲ್ಲಿರುವ ಆಕೆಯ ಅಜ್ಜಿಯ ಮನೆಗೆ ಹೋಗಿದ್ದಾರೆ. ಬಳಿಕ ಅಂದು ಮಧ್ಯಾಹ್ನ 1:30 ಗಂಟೆಗೆ ಅಜ್ಜಿಮನೆಯವರ ಬಳಿ ತನ್ನ ಮನೆಗೆ ಹೋಗುವುದಾಗಿ ಹೇಳಿ ಹೋದ ಕಾವೇರಿ ಈವರೆಗೆ ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ.

ಮನೆಯವರು ಸತತ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ.

ಈ ಬಗ್ಗೆ ಕಾವೇರಿ ಅವರ ಸಹೋದರಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Write A Comment