ಕನ್ನಡ ವಾರ್ತೆಗಳು

ಪುತ್ತೂರು : ನಗರಸಭೆಯ ಕಟ್ಟಡದ ಸುತ್ತಮುತ್ತ ವಾಮಾಚಾರ

Pinterest LinkedIn Tumblr

Black magic

ಪುತ್ತೂರು, ಮೇ 11:  ನಗರ ಸಭೆಯಲ್ಲಿ ವಾಮಾಚಾರ ನಡೆಯುತ್ತಿದ್ದು, ಕಟ್ಟಡದ ಸುತ್ತ ಅಲ್ಲಲ್ಲಿ ಕುಂಕುಮ, ಲಿಂಬೆ, ತಗಡುಗಳು ಸಿಕ್ಕಿವೆ. ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಅಧ್ಯಕ್ಷರಾಗಿದ್ದಾಗ ಕಚೇರಿಯಲ್ಲೇ ತಗಡು ಸಿಕ್ಕಿತ್ತು. ಆದರೆ ಅದನ್ನು ಬಯಲು ಮಾಡಿಲ್ಲ. ಅದಾದ ಬಳಿಕ ಕಟ್ಟಡದ ಸುತ್ತಲು ಕುಂಕುಮ, ಲಿಂಬೆ, ತಗಡು ಸಿಕ್ಕಿವೆ. ಮಹಮ್ಮದ್ ಆಲಿಯವರ ತಂಡದವರು ವಾಮಾಚಾರ ಮಾಡಿ ಎಂದು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಇಸಾಕ್ ಸಾಲ್ಮರ್ ಆರೋಪಿಸಿದ್ದಾರೆ.

ಮಧ್ಯಾಹ್ನದ ಹೊತ್ತು ನಗರಸಭೆಯಲ್ಲಿ ಹೊರಗಿನ ವ್ಯಕ್ತಿಗಳು ಕಡತ ಪರಿಶೀಲನೆ ಮಾಡುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತೆಗೆ ಸೂಚನೆ ನೀಡಿದ್ದಾರೆ. ಆದರೆ ಕಡತಗಳನ್ನು ನೋಡಲು ಸಾರ್ವಜನಿಕರಿಗೆ ಅವಕಾಶವಿದೆ. ರಾಜಕೀಯ ಪಕ್ಷ ಅಥವಾ ಸಂಘಟನೆ ಕಾರ್ಯಕರ್ತರು ಕಚೇರಿಗೆ ಬರುವುದು ಸ್ವಾಭಾವಿಕ. ಆದರೆ ಕಚೇರಿ ಸಮಯ ಹೊರತು ಪಡಿಸಿ ಮೀಟಿಂಗ್ ನಡೆಸುವುದು ಯಾಕೆ? ಇದು ಸೀಕ್ರೆಟ್ ಅಜೆಂಡಾವಾ ಅಥವಾ ಡೀಲಿಂಗಾ? ಇದು ಯಾಕೆ ಸಿಸಿ ಕ್ಯಾಮರಾದಲ್ಲಿ ಕಾಣುತ್ತಿಲ್ಲ ಎಂದು ನಿನ್ನೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

ನಗರಸಭೆ ಅಧ್ಯಕ್ಷೆಗೆ ಬಾಡಿಗಾರ್ಡ್ ಆಗಿ ಮಹಮ್ಮದ್ ಆಲಿ ಮತ್ತು ಶಕ್ತಿ ಸಿನ್ಹಾ ಅಕ್ಕಪಕ್ಕದಲ್ಲಿ ಇರುತ್ತಾರೆ. ಪ್ರತೀ ಬಾರಿ ಕಚೇರಿಗೆ ಹೋದರು ಅಕ್ಕ-ಪಕ್ಕದಲ್ಲಿ ಕುಳಿತಿರುತ್ತಾರೆ. ಹಿಂದಿನ ಆಡಳಿತದ ಸಂದರ್ಭ ನಿರ್ಮಾಣಗೊಂಡ ಉಪ್ಪಿನಂಗಡಿ ಡ್ಯಾಮ್ ಕಾಮಗಾರಿ ಕಳಪೆ ಎಂದು ಆರೋಪಿಸಿದ್ದಾರೆ. ಸೂತ್ರಬೆಟ್ಟು ಜಗನ್ನಾಥ ರೈ ಅಧ್ಯಕ್ಷರಾಗಿದ್ದಾಗ ಕಾಮಗಾರಿ ಆರಂಭಗೊಂಡಿದ್ದು, ಸಾಲದ ಹೊರೆ ಎಂದು ಬೊಬ್ಬೆ ಹೊಡೆದಿದ್ದರು. ಆದರೆ ಇಂದು ಅದೇ ನೀರನ್ನು ಉಪಯೋಗಿಸುತ್ತಾರೆ. ಕಾಮಗಾರಿ ಪೂರ್ಣಗೊಂಡಿದ್ದರಿಂದ ನಗರಸಭೆಗೆ ಇಂದು ನೀರಿನ ಸಮಸ್ಯೆಯಾಗಿಲ್ಲ ಎಂದು ತಿಳಿಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಯೂಸುಪ್ ತಾರಿಗುಡ್ಡೆ, ನಗರಸಭೆ ಆಶ್ರಯ ಸಮಿತಿ ಸದಸ್ಯ ರಾಮಕೃಷ್ಣ ಕೇಪುಳು ಉಪಸ್ಥಿತರಿದ್ದರು.

Write A Comment