ಕನ್ನಡ ವಾರ್ತೆಗಳು

ಮಂಗಳೂರು ತಾಲೂಕು ಪಂಚಾಯತ್‌ : ನೂತನ ಅಧ್ಯಕ್ಷರಾಗಿ ಮುಹಮ್ಮದ್ ಮೋನು ಹಾಗೂ ಉಪಾಧ್ಯಕ್ಷರಾಗಿ ಪೂರ್ಣಿಮಾ ಗಣೇಶ್ ಪೂಜಾರಿ ಆಯ್ಕೆ

Pinterest LinkedIn Tumblr

Tp_elction_winer_1

ಮಂಗಳೂರು, ಮೇ 7: ಮಂಗಳೂರು ತಾಲೂಕು ಪಂಚಾಯತ್‌ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ತಾ.ಪಂ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮುಹಮ್ಮದ್ ಮೋನು ಹಾಗೂ ಉಪಾಧ್ಯಕ್ಷರಾಗಿ ಪೂರ್ಣಿಮಾ ಗಣೇಶ್ ಪೂಜಾರಿ ಆಯ್ಕೆ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಭಾಗವಹಿಸಿದ ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತ ಡಾ.ಅಶೋಕ್ ಅವರ ಸಮ್ಮುಖದಲ್ಲಿ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಗೋಪಾಲ ಕೃಷ್ಣ ಭಟ್ ಅವರ ಉಪಸ್ಥಿತಿಯಲ್ಲಿ ನಡೆದ ಚುನಾವಣೆಯಲ್ಲಿ ತಾ.ಪಂ. ಸದಸ್ಯರು ಕೈ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಮುಹಮ್ಮದ್ ಮೋನು ಅವರು 20 ಮತಗಳನ್ನು ಪಡೆದರೆ ರಾಮಚಂದ್ರ ಕುಂಪಲ ಅವರ ಪರ 19 ಮತಗಳು ಮಾತ್ರ ಲಭಿಸಿದವು. ಈ ಹಿನ್ನೆಲೆಯಲ್ಲಿ ಒಂದು ಮತ ಹೆಚ್ಚು ಪಡೆದ ಮುಹಮ್ಮದ್ ಮೋನುರನ್ನು ಅಧ್ಯಕ್ಷರಾಗಿ ಘೋಷಿಸಲಾಯಿತು.

Tp_elction_winer_2 Tp_elction_winer_3 Tp_elction_winer_4 Tp_elction_winer_5 Tp_elction_winer_6 Tp_elction_winer_7 Tp_elction_winer_8 Tp_elction_winer_9 Tp_elction_winer_10 Tp_elction_winer_11

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪೂರ್ಣಿಮಾ ಶೆಟ್ಟಿ ಪರ 20 ಮತಗಳು ಚಲಾವಣೆಯಾದವು. ವಜ್ರಾಕ್ಷಿ ಪಿ. ಶೆಟ್ಟಿ 19 ಮತಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾದರು. ಈ ಈ ಹಿನ್ನೆಲೆಯಲ್ಲಿ ಒಂದು ಮತ ಹೆಚ್ಚು ಪಡೆದ ಪೂರ್ಣಿಮಾ ಶೆಟ್ಟಿ ಅವರನ್ನು ಉಪಾಧ್ಯಕ್ಷರನ್ನಾಗಿ ಘೋಷಿಸಲಾಯಿತು.

Write A Comment