ಕನ್ನಡ ವಾರ್ತೆಗಳು

ರಾಜಧಾನಿ ಜುವೆಲ್ಲರ್ಸ್ ಶೂಟೌಟ್ ಪ್ರಕರಣ : ಮತ್ತೋರ್ವ ಆರೋಪಿ ಸೆರೆ.

Pinterest LinkedIn Tumblr

putter_shootout_photo

ಪುತ್ತೂರು, ಏ.26 : ರಾಜಧಾನಿ ಜುವೆಲ್ಲರ್ಸ್ ಶೂಟೌಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೋರ್ವ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಅನ್ವರ್(20) ಬಂಧಿತ ಆರೋಪಿ. ಈತನನ್ನು ಕನ್ಯಾನ ಬಸ್ ನಿಲ್ದಾಣದ ಪರಿಸರದಿಂದ ವಶಕ್ಕೆ ಪಡೆಯಲಾಗಿದೆ

ಅ.೬ರಂದು ಪುತ್ತೂರಿನಲ್ಲಿ ಘಟನೆ ನಡೆದಿದ್ದು, ಕುಖ್ಯಾತ ಕ್ರಿಮಿನಲ್ ಕಾಲಿಯಾ ರಫೀಕ್‌ನಿಂದ ಶೂಟೌಟ್‌ಗೆ 50,000 ರೂ. ಸುಪಾರಿ ಪಡೆದು ಆರೋಪಿಗಳು ಈ ಕೃತ್ಯ ಎಸಗಿದ್ದರು. ಆರೋಪಿ ಅಬ್ದುಲ್ ಆಸೀರ್‌ನನ್ನು ಈಗಾಗಲೇ ಪೊಲೀಸರು ಬಂದಿಸಿದ್ದು, ಕಾಲಿಯಾ ರಫೀಕ್ ಬೇರೆ ಪ್ರಕರಣದಲ್ಲಿ ಕೇರಳ ಪೊಲೀಸರಿಂದ ಬಂಧಿತನಾಗಿದ್ದು, ಕೇರಳ ಜೈಲಿನಲ್ಲಿದ್ದಾನೆ.

ಈ ಪ್ರಕರಣದ ಪ್ರಧಾನ ಸೂತ್ರಧಾರ ಕುಖ್ಯಾತ ಭೂಗತ ಪಾತಕಿ ಕಲಿ ಯೋಗೀಶ್ ಆತ ಹಫ್ತಾ ಕೇಳಿ ಜುವೆಲ್ಲರ್ಸ್ ಮಾಲೀಕರಿಗೆ ಫೋನ್ ಮಾಡಿದ್ದು, ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ಗುಂಡು ಹಾರಿಸಿ ಬೆದರಿಕೆ ಹುಟ್ಟಿಸುವ ತಂತ್ರ ರೂಪಿಸಿದ್ದಾನೆ.

Write A Comment