ಕನ್ನಡ ವಾರ್ತೆಗಳು

ಏಪ್ರಿಲ್ 25ರಿಂದ 30 “ಪಿಲಿಕುಳ ರಜಾ-ಮಜಾ” ಬೇಸಿಗೆ ಶಿಬಿರ

Pinterest LinkedIn Tumblr

pilikula_summer_camp

ಮಂಗಳೂರು,ಎ.23: ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಆಶ್ರಯದಲ್ಲಿ ಜರಗುವ “ಪಿಲಿಕುಳ ರಜಾ-ಮಜಾ” ಮಕ್ಕಳ ಬೇಸಿಗೆ ಶಿಬಿರ ಏಪ್ರಿಲ್ 25ರಂದು ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಮಾನ್ಯ ಜಿಲ್ಲಾಧಿಕಾರಿಯವರಿಂದ ಉದ್ಘಾಟನೆಗೊಳ್ಳಲಿದೆ. ಏಪ್ರಿಲ್ 25ರಿಂದ 30ರ ತನಕ ನಡೆಯುವ ಈ ಶಿಬಿರದಲ್ಲಿ ಜಿಲ್ಲೆಯ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ಭಾಗಿಯಾಗಲಿದ್ದಾರೆ.

ಬೆಳಿಗ್ಗೆ 9.30ಕ್ಕೆ ರಿಂದ ಸಂಜೆ 4.30ರವರೆಗೆ ಶಿಬಿರ ಜರುಗಲಿದೆ.ಕ್ರಿಯಾತ್ಮಕಚಿತ್ರಕಲೆ, ಸ್ವರಾನುಕರಣೆ, ನೆನಪಿಗೆ ಚಿಕಿತ್ಸೆ, ಮೈಮ್, ಜಾದೂ, ರಂಗಕ್ರಿಯೆ, ಸಂಗೀತ, ನಾಟಕ, ಗೊಂಬೆತಯಾರಿ, ಪತ್ರಿಕೆತಯಾರಿ, ಕೊಲಾಜ್, ವರ್ಲಿ‌ಆರ್ಟ್, ಕ್ಲೆಮೋಡಲ್, ಆಟಗಳು, ವಿಜ್ಞಾನಮಾದರಿ, ವಿನೋದ ಗಣಿತ, ಒರಿಗಾಮಿ, ಫೇಸ್ ಪೈಂಟಿಂಗ್, ಟ್ಯಾಟೂ ಮೊದಲಾದ ಕ್ರಿಯಾಶೀಲ ಚಟುವಟಿಕೆಗಳನ್ನು ಕಾರ್ಯಾಗಾರ ಒಳಗೊಂಡಿದೆ. ಜೊತೆಗೆ ಔಷಧಿ ಸಸ್ಯಗಳ ಪರಿಚಯ, ಮೃಗಾಲಯ, ಕುಶಲಕರ್ಮಿ ಗ್ರಾಮ, ವಿಜ್ಞಾನ ಕೇಂದ್ರ, ಸಂಸ್ಕೃತಿ ಗ್ರಾಮ, ಗುತ್ತುಮನೆ ಭೇಟಿಯ ವಿಶೇಷ ಅವಕಾಶವನ್ನು ಈ ಶಿಬಿರ ಹೊಂದಿದೆ.

6 ದಿನಗಳ ಕಾಲ ಶಿಬಿರಕ್ಕೆ ಅಗತ್ಯವಿರುವ ಎಲ್ಲಾ ಪರಿಕರಗಳನ್ನು ಸಂಘಟಕರು ಒದಗಿಸಲಿದ್ದು ಬೆಳಿಗ್ಗೆ ಮತ್ತು ಸಂಜೆ ಲಘುಪಹಾರ, ಪಾನೀಯ, ಮಧ್ಯಾಹ್ನದ ಊಟ ಒದಗಿಸಲಾಗುವುದು. ಜೊತೆಗೆ ಮಂಗಳೂರು ನಗರದ ಬಂಟ್ಸ್‌ಹಾಸ್ಟೆಲ್‌ನಿಂದ ಪಿಲಿಕುಳಕ್ಕೆ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದ್ದು ಬೇಸಿಗೆ ಶಿಬಿರದ ಸಂಪೂರ್ಣ ಮಾಹಿತಿಯನ್ನು ಡಾ. ನಿತಿನ್ ಎನ್.ಕೆ 9686673237 ಇವರಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

Write A Comment