ಕನ್ನಡ ವಾರ್ತೆಗಳು

ಸೌದಿಯಲ್ಲಿ ಮೃತ ಪಟ್ಟ್ ಯುವಕನ ಮೃತ ದೇಹ ಹುಟ್ಟೂರಿಗೆ

Pinterest LinkedIn Tumblr

saudi_arebi+dead

ಬೆಳ್ತಂಗಡಿ: ಸೌದಿ ಅರೇಬಿಯಾದ ರೆಡ್ ಟ್ಯಾಗ್ ಕಂಪೆನಿಯ ಉದ್ಯೋಗಿಯಾಗಿದ್ದು, ಎರಡು ತಿಂಗಳ ಹಿಂದೆ ಮಲಗಿದ್ದ ವೇಳೆ ಹೃದಯಾಘಾತದಿಂದ ಸಾವಪ್ಪಿದ್ದ ಮದ್ದಡ್ಕ ಅಹ್ಮದ್ ಇಬ್ರಾಹಿಂ ಪುತ್ರ ಫಕ್ರುದ್ದೀನ್ ಅಹ್ಮದ್ ಅವರ ಶವವನ್ನು ಸೋಮವಾರ ಬೆಳಿಗ್ಗೆ ಹುಟ್ಟೂರಿಗೆ ತರಲಾಗುತ್ತಿದೆ.

ಸೌದಿ ಅರೇಬಿಯಾದ ಪೊಲೀಸರು ತನಿಖೆ ಪೂರ್ಣಗೊಳ್ಳುವ ತನಕ ಮೃತ ದೇಹವನ್ನು ಕುಟುಂಬಸ್ತರಿಗೆ ನೀಡಿರಲಿಲ್ಲ. ಯುವಕ ಫಕ್ರುದ್ದೀನ್ ಹೃದಯಾಘಾತದಿಂದಲೇ ಸಾವಪ್ಪಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಶವವನ್ನು ಕುಟುಂಬಕ್ಕೆ ನೀಡಲಾಗಿದೆ.

ಭಾರತೀಯ ರಾಯಭಾರ ಕಛೇರಿಯ ಸಹಕಾರದಿಂದ ಸಮಾಜ ಸೇವಕರಾದ ಅಬ್ದುಸ್ಸಮದ್ ಬಜ್ಪೆ, ಹನೀಫ್ ಮಂಜೇಶ್ವರ, ಸಲೀಂ ಗುರುವಾಯನಕೆರೆ, ಬಾವಾಕ ಮೊದಲಾದವರ ಸಹಾಯದಿಂದ ಮೃತದೇಹವನ್ನು ಹುಟ್ಟೂರಿಗೆ ತರಲಾಗುತ್ತಿದೆ.

Write A Comment