ಕನ್ನಡ ವಾರ್ತೆಗಳು

ಬಂಟರ ಸಂಘದ ಸ್ನೇಹ ಮಿಲನ – ಸಾಧಕರಿಗೆ ಪ್ರಶಸ್ತಿ ಪ್ರದಾನ

Pinterest LinkedIn Tumblr

mumbai_shnha_milana_1

ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್

ಮುಂಬಯಿ: ಬಂಟರ ಸಂಘ ಮುಬಯಿಯ ವಾರ್ಷಿಕ ಸ್ನೇಹ ಮಿಲನ ಸಮಾರಂಭವು ಎ. 14ರಂದು ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಕುರ್ಲಾ ಪೂರ್ವ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಿತು.

ರಮಾನಾಥ ಎಸ್. ಪಯ್ಯಡೆ ಸ್ಮರಣಾರ್ಥ ವರ್ಷದ ಶ್ರೇಷ್ಥ ಬಂಟ ಸಾಧಕ ಪ್ರಶಸ್ತಿಯನ್ನು ಪ್ರಶಸ್ತಿಯನ್ನು ಖ್ಯಾತ ಉದ್ಯಮಿ ಚರಿಸ್ಮಾ ಬಿಲ್ಡರ್ಸ್ ನ ಸಿ.ಎಂ.ಡಿ. ಸುಧೀರ್ ಶೆಟ್ಟಿಯವರಿಗೆ ಪ್ರಧಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುಧೀರ್ ಶೆಟ್ಟಿಯವರು ತನ್ನ ಬಾಲ್ಯದ ದಿನವನ್ನು ಸ್ಮರಿಸುತ್ತಾ ತನ್ನ ಸಾಧನೆ ಬಗ್ಗೆ ಮಾತನಾಡಿದರು. ಪ್ರಶಸ್ತಿಯೊಂದಿಗೆ ತನಗೆ ಕೊಡಮಾಡಿದ ಒಂದು ಲಕ್ಷ ರೂಪಾಯಿಯನ್ನು ಸಂಘದ ಮಹಿಳಾ ವಿಭಾಗದ ಸಾಮಾಜಿಕ ಚಟುವಟಿಕೆಗೆ ನೀಡಿದರು.

mumbai_shnha_milana_2 mumbai_shnha_milana_3 mumbai_shnha_milana_4 mumbai_shnha_milana_5

ಡಾ. ಮನೋಹರ್ ಹೆಗ್ಡೆ ಮತ್ತು ಆಶಾ ಎಂ. ಹೆಗ್ಡೆ ಕೊಡಮಾಡಿದ ವರ್ಷದ ಶ್ರೇಷ್ಥ ಬಂಟ ಸಾಧಕಿ ಪ್ರಶಸ್ತಿಯನ್ನು ಪುಷ್ಫಾ ಕುಶಲ ಹೆಗ್ಡೆ ಪುಣೆ ಅವರಿಗೆ ನೀಡಲಾಗಿದ್ದು ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ ಶೆಫಾಲಿ ಹೆಗ್ಡೆಯವರ ಹೆಸರಲ್ಲಿ ಈ ಪ್ರಶಸ್ತಿಯನ್ನು ತನಗೆ ನೀಡಲಾಗಿದೆ. ಹೆಣ್ಣೊಬ್ಬಳ ಯಶಸ್ಸಿಗೆ ಪುರುಷರ ಬೆಂಬಲ ಮುಖ್ಯವಾಗಿದ್ದು ನನ್ನ ತಂದೆಯಿಂದ ಸಮಾಜ ಸೇವೆಯನ್ನು ಕಲಿಯುವಂತಾಗಿದೆ ಎನ್ನುತ್ತಾ ತನಗೆ ದೊರೆತ ಒಂದು ಲಕ್ಷ ನಿಧಿಯನ್ನು ಮೂವರು ಅನಾರೋಗ್ಯ ಪೀಡಿತ ಮಹಿಳೆಯರಿಗೆ ನೀಡಿದರು.

ಚಿತ್ರ ನಟ ಸುನಿಲ್ ಶೆಟ್ಟಿ, ಡಾ. ಮೋಹನ್ ಆಳ್ವ, ಎಂ. ಎಂ. ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ ದಂಪತಿ ಹಾಗೂ ಇನ್ನಿತರ ಗಣ್ಯರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಈ ಎಲ್ಲಾ ಗಣ್ಯರಲ್ಲದೆ ಸಂಘದ ಇತರ ಪದಾಧಿಕಾರಿಗಳಾದ ಪ್ರಭಾಕರ ಎಲ್. ಶೆಟ್ಟಿ, ಉಳ್ತೂರು ಮೋಹನ್ ದಾಸ್ ಶೆಟ್ಟಿ, ಸಿಎ ಐ. ಆರ್. ಶೆಟ್ಟಿ, ಕಿಶೋರ್ ಕುಮಾರ್ ಕುತ್ಯಾರ್, ಪೊವಾಯಿ ಮಹೇಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ವಿವೇಕ್‌ವಿ. ಶೆಟ್ಟಿ, ಜಯರಾಂ ಎನ್. ಶೆಟ್ಟಿ, ಚಂದ್ರಹಾಸ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಅಶೋಕ ಪಕ್ಕಳ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಮುಂಡ್ಕೂರು ರತ್ನಾಕರ ಶೆಟ್ಟಿ ಮತ್ತು ಕವಿತಾ ಐ. ಆರ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು.

Write A Comment