ಕನ್ನಡ ವಾರ್ತೆಗಳು

ಸಂದರ್ಶ್ ಶೆಟ್ಟಿ ಮತ್ತು ಡಾ. ನಿಶಾ ಶೆಟ್ಟಿ ಮಿಸ್ಟರ್ ಮತ್ತು ಮಿಸ್ ಬಂಟ್

Pinterest LinkedIn Tumblr

mumbai_missmstr_buna_1

ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್
ಮುಂಬಯಿ: ಬಂಟರ ಸಂಘ ಮುಬಯಿಯ ಯುವ ವಿಭಾಗದ ಅತಿಯಿಂದ ಎ. 16ರಂದು ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಿದ ಆಕಾಂಕ್ಷಾ 2016 ಮಿಸ್ಟರ್ ಬಂಟ್ ಮತ್ತು ಮಿಸ್ ಬಂಟ್ ಸ್ಪರ್ಧೆಯಲ್ಲಿ ಮಿಸ್ಟರ್ ಬಂಟ್ ಆಗಿ ಸಂದರ್ಶ್ ಶೆಟ್ಟಿ ಮತ್ತು ಮಿಸ್ ಬಂಟ್ ಆಗಿ ಡಾ. ನಿಶಾ ಶೆಟ್ಟಿ ಆಯ್ಕೆಯಾಗಿದ್ದಾರೆ.

ಮಿಸ್ಟರ್ ಬಂಟ್ ಪ್ರಥಮ ರನ್ನರ್ ಅಪ್ ಆಗಿ ರಜತ್ ಶೆಟ್ಟಿ ಮತ್ತು ದ್ವಿತೀಯ ರನ್ನರ್ ಆಪ್ ಮತ್ತು ಮಿಸ್ಟರ್ ಪೊಪ್ಯುಲರ್ ಆಗಿ ಧೀರಜ್ ರೈ ಆಯ್ಕೆಯಾಗಿರುವರು.

mumbai_missmstr_buna_5 mumbai_missmstr_buna_2 mumbai_missmstr_buna_6 mumbai_missmstr_buna_3

ಮಿಸ್ ಬಂಟ್ ಪ್ರಥಮ ರನ್ನರ್ ಅಪ್ ಆಗಿ ಕೃಶ್ಮಿತಾ ಶೆಟ್ಟಿ ಮತ್ತು ದ್ವಿತೀಯ ರನ್ನರ್ ಆಪ್ ಆಗಿ ಡಾ. ರಚನಾ ಶೆಟ್ಟಿ ಆಯ್ಕೆಯಾಗಿರುವರು. ರಿಷಿಕಾ ವಿಶ್ವನಾಥ ಶೆಟ್ಟಿ ಕರ್ನಿರೆ ವಿಜೇತರ ಯಾದಿಯನ್ನು ಪ್ರಕಟಿಸಿದರು.

ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ವಿವೇಕ್‌ ವಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ವಿಜೇತರಿಗೆ ಕಿರೀಟ ತೊಡಿಸಿ, ನಗದು ಬಹುಮಾನ, ಸ್ಮರಣಿಕೆ, ಪುಷ್ಪಗುಚ್ಚ ನೀಡಿ ಗೌರವಿಸಿ ಅಭಿನಂದಿಸಿದರು.

Write A Comment