ಕನ್ನಡ ವಾರ್ತೆಗಳು

ಬಂಟರ ಭವನದಲ್ಲಿ ಬಿಸುಪರ್ಬ ಹಾಗೂ ಬಂಟರ ದಿನಾಚರಣೆ

Pinterest LinkedIn Tumblr

mumbai_bisu_parbha_2

ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್

ಮುಂಬಯಿ: ತುಳುನಾಡಿನ ಸಂಸ್ಕೃತಿ, ಸಂಪ್ರ ದಾಯ, ಆಚಾರ-ವಿಚಾರಗಳು ಇಂದು ತುಳು ಮಣ್ಣಿಗಿಂತಲೂ ಮುಂಬಯಿ ಮಣ್ಣಿನಲ್ಲಿ ಹೆಚ್ಚಾಗಿ ಬೇರು ಬಿಟ್ಟಿರುವುದು ಸಂತೀಷದ ವಿಚಾರವಾಗಿದೆ ಎಂದು ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅಭಿಪ್ರಾಯಿಸಿದರು.

ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಿದ ಬಿಸುಪರ್ಬ ಹಾಗೂ ಬಂಟರ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಊರಿನ ನಮ್ಮವರಿಗೆ ಬೇಸಾಯದ ಬಗೆಗಿನ ಆಸಕ್ತಿ ಕಡಿಮೆಯಾಗಿದೆ. ಬದಲಾದ ಈ ಪರಿಸ್ಥಿತಿ ಯನ್ನು ಸರಿಯಾಗಿ ಅರ್ಥೈಸಿಕೊಂಡು ಊರಿ ನಲ್ಲಿ ಒಂದು ಸಾಗುವಳಿಯನ್ನಾದರೂ ಮಾಡಲು ಪ್ರಯತ್ನಿಸುವ ಅಗತ್ಯವಿದೆ ಎಂಧರು. ಬಂಟರ ಸಂಘದ ನೂತನ ಆಸ್ಪತ್ರೆಯೊಂದನ್ನು ತೆರೆಯಲು ಪ್ರಯತ್ನಿಸುವುದಾಗಿ ತಿಳಿಸಿದರು.

ಈ ಕಾರ್ಯಕ್ರಮಗಳನ್ನು ಆಯೋಜಿಸಿದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ ಅವರನ್ನು ಅಭಿನಂದಿಸಿದರು.

mumbai_bisu_parbha_1 mumbai_bisu_parbha_3

ಮುಖ್ಯ ಅತಿಥಿಯಾಗಿ ಜವಾಬ್‌ನ ಅಧ್ಯಕ್ಷ ಶಿವರಾಮ ನಾಯ್ಕ ಮಾತನಾಡಿ, ಗೌರವ ಅತಿಥಿಯಾಗಿ ಪಾಲ್ಗೊಂಡ ಎಡಿಷನಲ್‌ ಡೆಪ್ಯೂಟಿ ಕಮಿಷನರ್‌ ಆಫ್‌ ಪೊಲೀಸ್‌ ಪ್ರಕಾಶ್‌ ಭಂಡಾರಿ ಉಪಸ್ಥಿತರಿದ್ದು ಮಾತನಾಡಿದರು.

ಯಕ್ಷ ಕಲಾವಿದ ಕಣಂಜಾರು ಆನಂದ ಶೆಟ್ಟಿ ಸ್ಮರಣಾರ್ಥ ಅವರ ಕುಟುಂಬಿಕರಾದ ಸಂಘದ ಮಾಜಿ ಅಧ್ಯಕ್ಷ ಸುಧಾಕರ ಎಸ್‌. ಹೆಗ್ಡೆ ಪರಿವಾರ ಪ್ರತಿವರ್ಷ ಕೊಡಮಾಡುವ ಕಣಂಜಾರು ಆನಂದ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಪ್ರಶಸ್ತಿಯನ್ನು ತೆಂಕು-ಬಡಗುತಿಟ್ಟಿನ ಭಾಗವತ ದೇವಲ್ಕುಂದ ಭಾಸ್ಕರ್‌ ಶೆಟ್ಟಿ ಅವರಿಗೆ ಗಣ್ಯರು ಹಾಗೂ ಕಣಂಜಾರು ಆನಂದ ಶೆಟ್ಟಿ ಕುಟುಂಬದ ಸುಧಾಕರ ಎಸ್‌. ಹೆಗ್ಡೆ, ರಂಜನಿ ಸುಧಾಕರ ಹೆಗ್ಡೆ ದಂಪತಿ ಪ್ರದಾನಿಸಿದರು.

ಸಂಘದ ಮಹಿಳಾ ವಿಭಾಗದ ಸದಸ್ಯೆ ಜ್ಯೋತಿ ಆರ್‌. ಎನ್‌. ಶೆಟ್ಟಿ ಮಹಿಳಾ ವಿಭಾಗದ ಮೂಲಕ ಪ್ರತಿವರ್ಷ ಅತ್ಯುತ್ತಮ ಮಹಿಳೆಯರಿಗಾಗಿ ನೀಡುತ್ತಿರುವ ಪ್ರೇಮಾ ನಾರಾಯಣ ರೈ ಪ್ರಶಸ್ತಿಯನ್ನು ಲೇಖಕಿ ಲತಾ ಸಂತೋಷ್‌ ಶೆಟ್ಟಿ ಅವರಿಗೆ ಪ್ರದಾನಿಸಿದರು.

ಸಂಘದ ಒಂಭತ್ತು ಪ್ರಾದೇಶಿಕ ಸಮಿತಿಗಳ ಆಶ್ರಯದಲ್ಲಿ ನಡೆದ ಬೃಹತ್‌ ರಕ್ತದಾನ ಶಿಬಿರವು ಯಶಸ್ವಿಯಾಗಲು ಕಾರಣಕರ್ತರಾದ ಬಂಟ್ಸ್‌ ಹೆಲ್ತ್‌ ಕೇರ್‌ ಸೆಂಟರ್‌ನ ಕಾರ್ಯಾಧ್ಯಕ್ಷ ಡಾ| ರತ್ನಾಕರ ಶೆಟ್ಟಿ, ಥಿಂಕ್‌ ಫೌಂಡೇಷನ್‌ನ ವಿನಯ ಶೆಟ್ಟಿ, ಸಂಘದ ಒಂಭತ್ತು ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳು, ಪಶ್ಚಿಮ ಹಾಗೂ ಮಧ್ಯ ಪ್ರಾಂತೀಯ ಸಮನ್ವಯಕರುಗಳನ್ನು ಗೌರವಿಸಲಾಯಿತು.

ದಾನಿಗಳಾದ ಪ್ರವೀಣ್‌ ಭೋಜ ಶೆಟ್ಟಿ, ರಘುರಾಮ ಶೆಟ್ಟಿ ಅವೆನ್ಯೂ, ಬಂಟ್ಸ್‌ ನ್ಯಾಯ ಮಂಡಳಿಯ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ಬಾಬಾಸ್‌ನ ಮಹೇಶ್‌ ಎಸ್‌. ಶೆಟ್ಟಿ, ಮುಂಡಪ್ಪ ಎಸ್‌. ಪಯ್ಯಡೆ, ಆನಂದ ಪಿ. ಶೆಟ್ಟಿ, ಬೊಳ್ನಾಡುಗುತ್ತು ಚಂದ್ರಹಾಸ ರೈ, ಹರೀಶ್‌ ಶೆಟ್ಟಿ ರಮಾಡಾ, ಶಿವರಾಮ ಕೆ. ಶೆಟ್ಟಿ ಸತ್ಕಾರ್‌ ರೆಸಿಡೆನ್ಸಿ, ದಿವಾಕರ ಶೆಟ್ಟಿ ಮುದ್ರಾಡಿ ಅವರನ್ನು ಗೌರವಿಸಲಾಯಿತು.

ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ ಸಮಾರಂಭದ ಯಶಸ್ಸಿಗೆ ಸಹಕರಿಸಿದ ಮಹಿಳಾ ವಿಭಾಗದ ಪದಾಧಿಕಾರಿಗಳನ್ನು ಗೌರವಿಸಿದರು. ಯಕ್ಷಗುರು ಬಾಲಕೃಷ್ಣ ಶೆಟ್ಟಿ ಅಜೆಕಾರು, ನೂತನ ವೇಷಭೂಷಣಗಳ ವಿನ್ಯಾಸಗಾರ ದೇವಕಾನ ಕೃಷ್ಣ ಭಟ್‌ ಅವರನ್ನು ಗೌರವಿಸಲಾಯಿತು. ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ ನಿರೂಪಿಸಿದರು.

ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಸುಧಾಕರ ಎಸ್‌. ಹೆಗ್ಡೆ, ಉಪಾಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಐ. ಆರ್‌. ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್‌ ಕುಮಾರ್‌ ಕುತ್ಯಾರ್‌, ಜತೆ ಕೋಶಾಧಿಕಾರಿ ಮಹೇಶ್‌ ಎಸ್‌. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ವಿವೇಕ್‌ ವಿ. ಶೆಟ್ಟಿ ಉಪಸ್ಥಿರಿದ್ದರು. ಬಳಿಕ ಸಂಘದ ಪದಾಧಿಕಾರಿಗಳು ಮತ್ತು ಶ್ರೀ ಬಂಟ ಯಕ್ಷಕಲಾ ವೇದಿಕೆ ಕಲಾವಿದರುಗಳಿಂದ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡಿತು

Write A Comment