ಕನ್ನಡ ವಾರ್ತೆಗಳು

ಕಬಡ್ಡಿ ಪಂದ್ಯಾಟ : ಗ್ಯಾಲರಿ ಕುಸಿದು 20ಕ್ಕೂ ಅಧಿಕ ಮಂದಿಗೆ ಗಾಯ.

Pinterest LinkedIn Tumblr

Pro_kabadi_colaps_1

ಮಂಗಳೂರು,ಏ.16: ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬ್ಬಡಿ ಅಸೋಸಿಯೇಶನ್ ಮತ್ತು ದ.ಕ ಜಿಲ್ಲಾ ಜಯ ಕರ್ನಾಟಕ ಸಂಘಟನೆಯ ಅಶ್ರಯದಲ್ಲಿ ಪಣಂಬೂರು ಬೀಚ್ ನಲ್ಲಿ ಶುಕ್ರವಾರ ಸಂಝೆ ಆರಂಭಗೊಂಡಾ ರಾಷ್ಟ್ರ ಮಟ್ಟದ ಆಹ್ವಾನಿತರ ಕಬಡ್ಡಿ ಪಂದ್ಯಾವಳಿಯ ಸಂಧರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿ ಕುಸಿದು 20ಕ್ಕೂ ಅಧಿಕ ಮಂದಿ ಗಾಯಗೊಂಡ ಘಟಬೆ ನಡೆದಿದೆ.

Pro_kabadi_colaps_2 Pro_kabadi_colaps_3 Pro_kabadi_colaps_4 Pro_kabadi_colaps_5 Pro_kabadi_colaps_6 Pro_kabadi_colaps_7 Pro_kabadi_colaps_8 Pro_kabadi_colaps_9 Pro_kabadi_colaps_10 Pro_kabadi_colaps_11 Pro_kabadi_colaps_12 Pro_kabadi_colaps_13 Pro_kabadi_colaps_14 Pro_kabadi_colaps_15 Pro_kabadi_colaps_16

ಅಮೇಚೂರು ಕಬಡ್ಡಿ ಅಸೋಸಿಯೇಷನ್ ಆಯೋಜಿಸಿದ್ದ ಮೂರು ದಿನಗಳ ಕಾಲ ಹೊನಲು ಬೆಳಕಿನ ಮೊದಲ ಬೀಚ್ ಪ್ರೊ ಕಬಡಿ ಪಂದ್ಯಾಟ ಇದಾಗಿತ್ತು. ಕಬ್ಬಡಿ ಕೋರ್ಟ್‌ನ ಉದ್ಘಾಟನೆಯ ಬಳಿಕ ಸಭಾ ಕಾರ್ಯಕ್ರಮ ನಡೆಯಿತು.ಸಭಾ ಕಾರ್ಯಕ್ರಮದ ಕೆಲವೇ ಹೊತ್ತಿನಲ್ಲಿ ಪಂದ್ಯಾಟವನ್ನು ಆರಂಭಿಸಾಗಿತ್ತು. ಈ ಸಂಧರ್ಭದಲ್ಲಿ ಗ್ಯಾಲರಿಯು ಹಠಾತ್ ಕುಸಿದು ಬಿದ್ದ ಪರಿಣಾಮ ಸುಮಾರು 20 ಕ್ಕೂ ಅಧಿಕ ಪೇಕ್ಷಕರು ಹಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಈ ಘಟನೆಯಿಂದ ಕಬ್ಬಡಿ ಆಯೋಜಕರು ಪಂದ್ಯಾಟವನ್ನು ಸ್ಥಗಿತಗೊಳಿಸಿ, ಗಾಯಳುಗಳನ್ನು ಅಸ್ಪತ್ರೆಗೆ ಸಾಗಿಸುವಲ್ಲಿ ನೆರೆವಾದರು. ಶಾಸಕ ಮೊಹಿದ್ದೀನ್ ಬಾವ ರವರು ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದರು.

Write A Comment