ಕನ್ನಡ ವಾರ್ತೆಗಳು

ರಾಷ್ಟ್ರೀಯ ಮಟ್ಟದ ಪುಟ್ಭಾಲ್ ಟೂರ್ನಮೆಂಟ್‌ಗೆ ಅದ್ದೂರಿ ಚಾಲನೆ .

Pinterest LinkedIn Tumblr

Football_match_photo_1

ಮಂಗಳೂರು,ಏ.15 : ಮಂಗಳೂರು ಸ್ಪೋರ್ಟಿಂಗ್ ಕ್ಲಬ್ ಇದರ ವತಿಯಿಂದ ನಡೆಯುವ ರಾಷ್ಟ್ರೀಯ ಮಟ್ಟದ ಆಹ್ವಾನಿತ ಎಂ.ಎಸ್.ಸಿ. ಕಪ್ ಪುಟ್ಭಾಲ್ ಟೂರ್ನಮೆಂಟ್ ಗೆ ಕ್ರೀಡಾ ಸಚಿವ ಅಭಯ ಚಂದ್ರ ಜೈನ್ ಆದ್ದೂರಿಯ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ನೆಹರು ಮೈದಾನದಲ್ಲಿರುವ ಪುಟ್ಭಾಲ್ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 1ಕೋಟಿ ರೂ ನೀಡಲಾಗುವುದು . ಈಗಾಗಲೇ 25 ಲಕ್ಷ ರೂ ಜಿಲ್ಲಾಧಿಕಾರಿಗಳ ಖಾತೆಗೆ ಜಮಾವಣೆಗೊಂಡಿದೆ ಎಂದು ಹೇಳಿದರು.

Football_match_photo_2 Football_match_photo_3 Football_match_photo_4 Football_match_photo_5 Football_match_photo_6 Football_match_photo_7 Football_match_photo_8 Football_match_photo_9 Football_match_photo_10

ಎಮ್ಮೆಕೆರೆಯಲ್ಲಿ ಸುಮಾರು 5.50 ಕೋಟಿ ವೆಚ್ಚದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಈಜುಕೊಳ ನಿರ್ಮಾಣ ಮಾಡಲು ಈಗಾಗಲೇ 2ಕೋಟಿ ರೂ ಒದಗಿಸಲಾಗಿದೆ. ಜಿಲ್ಲೆಗೆ ಅಗಮಿಸಲಿರುವ ಮುಖ್ಯ ಮಂತ್ರಿಗಳು ಇದರ ಶಂಕು ಸ್ಥಾಪನೆ ನಡೆಸಲಿದ್ದಾರೆ, ಅಲ್ಲದೆ ಕ್ರಿಕೆಟ್ ಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೊಟ್ಟಾರದ ಬಳಿ 8 ಎಕರೆ ಜಾಗ ಕ್ರೀಡಾ ಇಲಾಖೆಗೆ ಹಸ್ತಾಂತರವಾಗಲಿದ್ದು ಇದರಲ್ಲಿ ಟರ್ಫ್ ಕ್ರಿಕೆಟ್ ಪಿಚ್ ನಿರ್ಮಾಣವಾಗಲಿದೆ ಎಂದರು.

ಈ ಪುಟ್ಭಾಲ್  ಪಂದ್ಯಾವಳಿಯಲ್ಲಿ ತಮಿಳುನಾಡು, ಕೇರಳ, ಗೋವಾ ಸೇರಿದಂತೆ 18 ತಂಡಗಳು ಭಾಗವಹಿಸಲಿವೆ.

ಶಾಸಕ ಮೊಯಿದಿನ್ ಬಾವಾ, ಮೇಯರ್ ಹರಿನಾಥ್, ಶ್ರೀದೇವಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಸದನಾಂದ ಶೆಟ್ಟಿ, ಮಾಜಿ ಮೇಯರ್ ಕೆ.ಶ್ರಫ್, ಡಿಕೆ.ಏಫ್ ಎ ಅಧ್ಯಕ್ಷ ಡಿ.ಏಂ ಅಸ್ಲಂ, ಕಾರ್ಪೋರೇಟರ್ ಅಬ್ದುಲ್ ಲತೀಫ್, ಅಂತರಾಷ್ಟ್ರೀಯ ಅತ್ಲೀಟ್ ಅನಿಲ್ ಶೆಟ್ಟಿ, ಉದ್ಯಮಿಗಳಾದ ನಿಯಾಝ್, ಎ.ಕೆ, ಮನ್ಸೂ ಅಹ್ಮದ್, ಮೋಹನ್ ಬೆಂಗ್ರೆ, ಸ್ಪೋರ್ಟೀಂಗ್ ಕ್ಲಬ್‌ನ ಅಧ್ಯಕ್ಷ ಎಂ.ಫಯಾಝ್, ಕಾರ್ಯದರ್ಶಿ ಕೆ.ಎಂ ಅಶ್ರಫ್, ಖಜಾಂಜಿ ಅನಿಲ್ ಪಿವಿ , ಸಂಚಾಲಕ ಜೀವನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಥಮ ಬಹುಮಾನ 50 ಸಾವಿರ ರೂ., ದ್ವಿತೀಯ ಬಹುಮಾನ 25 ಸಾವಿರ ರೂ. ಹಾಗೂ ಸವ್ಯಸಾಚಿ, ಶಿಸ್ತು ತಂಡ, ಉತ್ತಮ ಆಟಗಾರ, ಉತ್ತಮ ಗೋಲ್ ಕೀಪರ್ ಬಹುಮಾನವನ್ನು ನೀಡಲಾಗುವುದು.

Write A Comment