ಕನ್ನಡ ವಾರ್ತೆಗಳು

ರಾಜ್ಯ ಹಿಂದೂ ಮಹಾಸಭಾದ ಪದ ಗ್ರಹಣ ಕಾರ್ಯಕ್ರಮ ಅನಧಿಕೃತ : ಅಖಿಲ ಭಾರತ ಹಿಂದೂ ಮಹಾಸಭಾ ಆರೋಪ

Pinterest LinkedIn Tumblr

ಮಂಗಳೂರು,ಎ.13: ಎ.10ರಂದು ಹಿಂದೂ ಮಹಾಸಭಾ ಹೆಸರಿನಲ್ಲಿ ನಗರದ ಕದ್ರಿಯಲ್ಲಿರುವ ಕದಳಿ ಯೋಗೇಶ್ವರ ಮಠದಲ್ಲಿ ಪಕ್ಷದ ಹೆಸರಿನಲ್ಲಿ ದೇಣಿಗೆಯನ್ನು ಪಡೆದು ನಡೆದ ರಾಜ್ಯ ಸಮಾವೇಶ ಹಾಗೂ ಪದ ಗ್ರಹಣ ಕಾರ್ಯಕ್ರಮ ಅನಧಿಕೃತವಾಗಿದ್ದು, ಈ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ ರಾಜ್ಯ ಕಾರ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದೂ ಮಹಾಸಭಾದ ಹೆಸರಿನಲ್ಲಿ ಅಂಬಿಕಾ ನಾಯಕ್, ಚಂದ್ರಪ್ರಕಾಶ್ ಕೌಶಿಕ್, ರಾಕೇಶ್ ರಂಜನ್, ನವೀನ್ ನೀರುಮಾರ್ಗ, ಶ್ರವರ್ಣ ಮಂಗಳೂರು ಎಂಬವರು ಕಾರ್ಯಕ್ರಮವನ್ನು ಆಯೋಜಿಸಿ ಪಕ್ಷದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಅಖಿಲ ಭಾರತ ಹಿಂದೂ ಮಹಾಸಭಾ 4 ಗುಂಪಾಗಿ ವಿಭಜನೆಯಾಗಿದ್ದು, ಈ ವಿವಾದ ನ್ಯಾಯಾ ಲಯದಲ್ಲಿದೆ. ನ್ಯಾಯಾಲಯದ ನಿರ್ದೇಶನದಂತೆ ಉನ್ನತ ಮಟ್ಟದ ಸಮಿತಿಯೊಂದು ಮಾತ್ರವಿದು,್ದ ಇದಕ್ಕೆ ಯಾವುದೇ ಪದಾಧಿಕಾರಿಗಳು ಇಲ್ಲ. ಆದರೆ ಎ.10ರಂದು ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷರೆಂದು ಚಂದ್ರಪ್ರಕಾಶ್ ಕೌಶಿಕ್‌ರನ್ನ್ನು ಕರೆತರಲಾಗಿತ್ತು. ಪದಾಧಿಕಾರಿಗಳೆ ಇಲ್ಲದ ಪಕ್ಷದಿಂದ ಅಧ್ಯಕ್ಷರೆಂದು ಕರೆಸಿಕೊಂಡು ಕಾರ್ಯಕ್ರಮ ಮಾಡ ಲಾಗಿದೆ. ವಿವಿಧ ಚಟಗಳಿದ್ದ ಪ್ರಣಾವನಂದರನ್ನು ಪಕ್ಷದಿಂದ ಉಚ್ಚಾಟಿಸಲಾಗಿದ್ದು, ಇವರ ಅಭಿಮಾನಿಗಳು ಈ ಅನಧಿಕೃತ ಕಾರ್ಯಕ್ರಮವನ್ನು ಆಯೋಜಿಸಿದ್ದರು ಎಂದು ತಿಳಿಸಿದರು.

ಈ ಕಾರ್ಯಕ್ರಮ ನಡೆಯದಂತೆ ದಾಳಿ ಮಾಡಲು ಚಿಂತಿಸಲಾಗಿತ್ತಾದರೂ ಪಕ್ಷದ ಮೇಲ್ಮಟ್ಟದ ನಾಯಕರ ನಿರ್ದೇಶನದಂತೆ ಕಾರ್ಯಕ್ರಮ ನಡೆಯಲು ಅವಕಾಶ ನೀಡಲಾಯಿತು. ಈ ಅನಧಿಕೃತ ಕಾರ್ಯಕ್ರಮದ ಬಗ್ಗೆ ಸಾಕ್ಷವನ್ನು ನಾವು ಸಂಗ್ರಹಿಸಿದ್ದು, ನ್ಯಾಯಾಲಯದಲ್ಲಿ ಈ ಬಗ್ಗೆ ಪ್ರಶ್ನಿಸಲಾಗುವುದು ಎಂದು ತಿಳಿಸಿದರು.

ಹಿಂದೂ ಮಹಾಸಭಾದಲ್ಲಿ ಸಾಕಷ್ಟು ಆಸ್ತಿಯಿದ್ದು , ಇವರು ಈ ಆಸ್ತಿಯನ್ನು ಲಪಟಾಯಿಸಲು ಈ ರೀತಿ ಮಾಡುತ್ತಿದ್ದಾರೆಯೆ? ವಿನಃ ಇವರಿಗೆ ಹಿಂದೂಗಳ ಮೇಲೆ ಪ್ರೀತಿಯಿಲ್ಲ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಲೋಹಿತ್ ಕುಮಾರ್ ಸುವರ್ಣ, ಮಂಜುನಾಥ್ ನೋಟೆಗಾರ್, ಯುವಸಭಾ ರಾಜ್ಯಧ್ಯಕ್ಷ ಶ್ರೀಲತಾ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು

Write A Comment