ಕನ್ನಡ ವಾರ್ತೆಗಳು

ಜಗತ್ತಿನ ಅತೀ ಉದ್ದದ ಸೆಲ್ಫಿ ಸ್ಟಿಕ್ ತಯಾರಿಸಿದ ಮಣಿಪಾಲ ಎಂ.ಐ.ಟಿ. ವಿದ್ಯಾರ್ಥಿ; ಅದರ ಉದ್ದ ಎಷ್ಟು ಗೊತ್ತಾ?

Pinterest LinkedIn Tumblr

ಉಡುಪಿ: ಕಳೆದ ಒಂದೆರಡು ವರ್ಷಗಳಿಂದ ಸೆಲ್ಫಿ ಕ್ರೇಜ್ ಜನರಲ್ಲಿ ಹೆಚ್ಚಾಗಿದೆ. ಮೊದಮೊದಲು ಮೊಬೈಲ್ ಫೋನಿನಲ್ಲಿ ಒದ್ದಾಟಮಾಡಿ ಸೆಲ್ಫಿ ತೆಗೆದುಕೊಳ್ಳಬೇಕಿತ್ತು. ಆದರೇ ಇಂದು ತರಹೇವಾರಿ ಸೆಲ್ಫಿ ಸ್ಟಿಕ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ವಿಸ್ತೀರ್ಣವಾದ ಮತ್ತು ಅಗಲವಾದ ಜಾಗದ ಫೋಟೋ ತೆಗೆಯಲು ಸೆಲ್ಫಿ ಸ್ಟಿಕ್ ಸಹಕಾರಿ. ಆದರೇ ಜಗತ್ತಿನ ಅತೀ ಉದ್ದದ ಸೆಲ್ಫಿ ಸ್ಟಿಕ್ ಈಗ ತಯಾರುಗೊಂಡು ಗಿನ್ನೆಸ್ ದಾಖಲೆಯತ್ತ ಸಾಗುತ್ತಿದೆ.

Udupi_Selpfie_Stick

ಹೌದು..ಮಣಿಪಾಲದ ಎಂ.ಐ.ಟಿ. ಕಾಲೇಜಿನ ವಿದ್ಯಾರ್ಥಿಯ ಬಹುದಿನಗಳ ಕನಸು ನನಸಾಗುವ ಸಂದರ್ಭವಿದು. ಎಂ.ಐ.ಟಿ. ಕಾಲೇಜಿನ ಇಲೆಕ್ಟ್ರಿಕಲ್ ಆಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿ ಮಂಗಳೂರಿನ ನಿವಾಸಿ ಅರ್ಮಾನ್ (21) ನಿರ್ಮಿಸಿದ ಅತೀ ಉದ್ದದ ಸೆಲ್ಫಿ ಸ್ಟಿಕ್ ಬರೋಬ್ಬರಿ 10.39 ಮೀಟರ್ ಇದೆ.

ಅಲುಮಿನಿಯಂ ವಸ್ತುವಿನ ಮೂಲಕ ನಿರ್ಮಿಸಿದ ಈ ಸ್ಟಿಕ್ ಇಷ್ಟು ಉದ್ದವಾಗಿದ್ದರೂ ಕೂಡ ಯಾವುದೇ ಕಾರಣಕ್ಕೂ ಭಾಗುವುದಿಲ್ಲ. ಸ್ಟಿಕ್ ಕೆಳಭಾಗಕ್ಕೆ ಅಳವಡಿಸಿದ ಬಟನ್ ಒತ್ತಿದರೇ ಎತ್ತರದ ಫೋಟೋವನ್ನು ಸೆಲ್ಫಿಯಲ್ಲಿ ತೆಗೆಯಬಹುದು. ಇದರಿಂದಾಗಿ ಹೆಚ್ಚಿನ ಸ್ಥಳ ಫೋಟೋದಲ್ಲಿ ಕವರ್ ಆಗಲಿದೆ. ಈವರೆಗೆ ದಾಖಲೆ ಇರುವ ಸೆಲ್ಫಿ ಸ್ಟಿಕ್ ಉದ್ದ ಅಮೆರಿಕದ ಹಾಲಿವುಡ್ ನಟ ಬೆನ್ ಸ್ಟಿಲ್ಲರ್ ನಿರ್ಮಿಸಿದ 8.56 ಮೀ ಉದ್ದವಾಗಿದೆ.

ಅರ್ಮಾನ್ ತಯಾರಿಸಿದ ಸೆಲ್ಫಿ ಸ್ಟಿಕ್ ಅನಾವರಣ ಕಾರ್ಯ ಮಣಿಪಾಲದಲ್ಲಿ ಸೋಮವಾರ ನಡೆಯಿತು.ಹಲವು ಗಣ್ಯರು ಕಾಲೇಜುನ ಪ್ರಮುಖರು ಈ ಸಮಾರಂಭಕ್ಕೆ ಸಾಕ್ಷಿಯಾದರು.

Write A Comment