ಕನ್ನಡ ವಾರ್ತೆಗಳು

ಕೆ‌ಎಸ್‌ಆರ್‌ಟಿಸಿ ಮಂಗಳೂರು-ಪೂನಾ ಬಸ್ ಸಂಚಾರ

Pinterest LinkedIn Tumblr

KSRTC_Volvo_Airavat_

ಮ೦ಗಳೂರು ಏ.08: ಕೆ‌ಎಸ್‌ಆರ್‌ಟಿಸಿ ವತಿಯಿಂದ ಮಂಗಳೂರಿನಿಂದ ಉಡುಪಿ, ಕುಂದಾಪುರ, ಭಟ್ಕಳ, ಕುಮಟಾ,ಅಂಕೋಲಾ, ಹುಬ್ಬಳ್ಳಿ, ಬೆಳಗಾವಿ, ಕೊಲ್ಲಾಪುರ, ಸತಾರ, ಮಾರ್ಗವಾಗಿ ಪೂನಾಕ್ಕೆ ಹಾಗೂ ಪೂನಾದಿಂದ ಇದೇ ಮಾರ್ಗವಾಗಿ ಮಂಗಳೂರಿಗೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ವೊಲ್ವೋ ಮಲ್ಟಿ‌ಆಕ್ಸಿಲ್ ಸಾರಿಗೆಯನ್ನು ಪ್ರಾರಂಭಿಸಲಾಗಿದೆ.

ಈ ಬಸ್ಸು ಮಂಗಳೂರು ಬಸ್ಸು ನಿಲ್ದಾಣದಿಂದ ಸಂಜೆ ೫ ಗಂಟೆಗೆ ಹೊರಟು ಉಡುಪಿ 6, ಕುಂದಾಪುರ 6.40, ಮಾರ್ಗವಾಗಿ ಪೂನಾಕ್ಕೆ ಬೆಳಿಗ್ಗೆ 7.45 ಗಂಟೆಗೆ ತಲುಪುವುದು ಹಾಗೂ ಮರು ಪ್ರಯಾಣದಲ್ಲಿ ಪೂನಾದಿಂದ ಸಂಜೆ 7.15 ಗಂಟೆಗೆ ಹೊರಟು ಕೊಲ್ಲಾಪುರ 10.35 , ಕುಂದಾಪುರ ಬೆಳಿಗ್ಗೆ 7, ಉಡುಪಿ 7.45 ಮಂಗಳೂರಿಗೆ 8.30ಕ್ಕೆ ತಲುಪುವುದು.

ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು ಸಾರ್ವಜನಿಕರು ಸದರಿ ಸಾರಿಗೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೆ‌ಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

Write A Comment