ಕನ್ನಡ ವಾರ್ತೆಗಳು

ಹಿರಿಯಡಕ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ; ಓರ್ವ ಸಾವು; ನಾಲ್ವರಿಗೆ ಗಾಯ

Pinterest LinkedIn Tumblr

ಉಡುಪಿ: ಬಸ್ಸನ್ನು ಓವರ್-ಟೇಕ್ ಮಾಡುವ ಭರದಲ್ಲಿ ವೇಗವಾಗಿ ಸಾಗಿದ ಕಾರು ಎದುರಿನಿಂದ ಬಂದ ಇನ್ನೊಂದು ಕಾರಿಗೆ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಓರ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆ ಹಿರಿಯಡಕ ಸಮೀಪದ ಕೊಂಡಾಡಿ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.

ಫೋರ್ಡ್ ಕಾರಿನಲ್ಲಿದ್ದ ಬೈಲೂರು ನಿವಾಸಿ ಸುರೇಶ್ ಭಟ್ ಸಾವನ್ನಪ್ಪಿದವರು. ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Hiriyadaka_Car accident_suresh bhat Death (6) Hiriyadaka_Car accident_suresh bhat Death (2) Hiriyadaka_Car accident_suresh bhat Death (5) Hiriyadaka_Car accident_suresh bhat Death (4) Hiriyadaka_Car accident_suresh bhat Death (1) Hiriyadaka_Car accident_suresh bhat Death (8) Hiriyadaka_Car accident_suresh bhat Death (3) Hiriyadaka_Car accident_suresh bhat Death (7)

ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ಅದೇ ಮಾರ್ಗದಲ್ಲಿ ತೆರಳುತ್ತಿದ್ದ ನಿಸಾನ್ ಕಾರು ಹಿಂದಿಕ್ಕುವ ಭರದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಫೋರ್ಡ್ ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ಪರಿಣಾಮ ಫೋರ್ಡ್ ಕಾರಿನಲ್ಲಿದ್ದ ಸುರೇಶ್ ಭಟ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರೊನಲ್ಲಿದ್ದ ನಾಲ್ವರಿಗೆ ಗಾಯಗಳಾಗಿದೆ. ಇನ್ನು ಬಸ್ಸು ಕೂಡ ರಸ್ತೆ ಸಮೀಪದ ಚರಂಡಿಗೆ ಹಾರಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.

ಹಿರಿಯಡಕ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Write A Comment