
ಮಂಗಳೂರು, ಎ 2: ಸ್ಕೋಡಾ ಕಾರೊಂದು ಸಾವಿರಾರು ಅಡಿ ಇರುವ ಹಲ್ಲಕ್ಕೆ ಬಿದ್ದರೂ ಕಾರು ಚಾಲಕ ಪವಾಡದೃಶ್ಯವಾಗಿ ಪರಾದ ಘಟನೆ ಮಂಗಳವಾರ ಬೆಳಗ್ಗೆ ಪದವಿನಂಗಡಿಯ ತೃಷ್ಣ ಹೊಟೇಲ್ ಬಳಿ ನಡೆದಿದೆ.
ಸ್ಕೋಡಾ ಕಾರು ವಿಮಾನ ನಿಲ್ದಾಣದಿಂದ ನಗರದತ್ತ ಬರುತ್ತಿದ್ದು , ಚಾಲಕನ ಅತೀವೇಗ ಚಾಲನೆ ಹಾಗೂ ತನ್ನ ಮೊಬೈಲ್ ಪೋನ್ ನಲ್ಲಿ ಮಾತನಾಡುತ್ತಿರುವುದೆ ಈ ದುರ್ಘಟನೆಗೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ .



ಈತನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಆದರೆ, ಕಾರು ಚಾಲಕನನ್ನು ಒಬ್ಬ ವೈದ ಎಂದು ಬಲ್ಲ ಮೂಲಗಳಿಂದ ತಿಳಿದಿದೆ.
ಪದವಿನಂಗಡಿಯಾ ಬಳಿ ತಿರುವು ಇದ್ದ ಕಾರಣ ಚಾಲಕ ತನ್ನ ನಿಯಂತ್ರಣ ಕಳೆದು ಕೊಂಡಿದ್ದ ಎಂದು ತಿಳಿದುಬಂದಿದೆ.
ಅದೃಷ್ಟವಶಾತ್, ಚಾಲಕನಿಗೆ ಯಾವುದೇ ಗಾಯವಾಗಿಲ್ಲ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಹೆಚ್ಚಿನ ವಿವರ ನಿರೀಕ್ಷಿಸಿರಿ…