ಕನ್ನಡ ವಾರ್ತೆಗಳು

ಧರ್ಮಪಾಲ ದೇವಾಡಿಗರಿಗೆ ಮಾತೃ ವಿಯೋಗ : ಶ್ರೀಮತಿ ಅಪ್ಪಿ ಉಮ್ಮಣ್ಣ ದೇವಾಡಿಗ ವಿಧಿವಶ

Pinterest LinkedIn Tumblr

Appi_devadiga_died_1

ಮುಂಬಯಿ, ಎ.01: ಮುಂಬಯಿ ಪ್ರಸಿದ್ಧ ಸಮಾಜ ಸೇವಕ, ಕೈಗಾರಿಕೋದ್ಯಮಿ, ದೇವಾಡಿಗರ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ, ಅಖಿಲ ಭಾರತ ತುಳು ಒಕ್ಕೂಟ ಹಾಗೂ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ಅವರ ಮಾತೃಶ್ರೀ ಶ್ರೀಮತಿ ಅಪ್ಪಿ ಉಮ್ಮಣ್ಣ ದೇವಾಡಿಗ (78) ಅವರು ಇಂದಿಲ್ಲಿ ( ಶುಕ್ರವಾರ 01.04.2016) ಅಪರಾಹ್ನ ಅಲ್ಪಕಾಲಿಕ ಅನಾರೋಗ್ಯದಿಂದ ಉಡುಪಿ ಕಾಪು ಅಲ್ಲಿನ ಶ್ರೀಸತ್ಯ ನಿವಾಸದ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಕಾಪು ದಿವಂಗತ ಉಮ್ಮಣ್ಣ ದೇವಾಡಿಗ ಅವರ ಧರ್ಮಪತ್ನಿಯಾಗಿದ್ದು, ನಾಲ್ಕು ಗಂಡು, ಮೂರು ಹೆಣ್ಣು ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದಿಲ್ಲಿ ಶುಕ್ರವಾರ ರಾತ್ರಿ ಸ್ವನಿವಾಸದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.

Appi_devadiga_died_2

ಶ್ರೀಮತಿ ಅಪ್ಪಿ ಉಮ್ಮಣ್ಣ ದೇವಾಡಿಗ ನಿಧನಕ್ಕೆ ನಾರಾಯಣ ದೇವಾಡಿಗ ದುಬಾಯಿ, ಎಸ್.ಕೆ ಶ್ರೀಯಾನ್, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ, ಭಾರತ್ ಬ್ಯಾಂಕ್‌ನ ಮಾಜಿ ಕಾರ್ಯಾಧ್ಯಕ್ಷ ವಿ.ಆರ್ ಕೋಟ್ಯಾನ್, ಪತ್ರಕರ್ತ ರೋನ್ಸ್ ಬಂಟ್ವಾಳ್, ಎಸ್.ಕೆ ಶ್ರೀಯಾನ್, ವಿಶ್ವನಾಥ್ ಯು.ಮಾಡಾ, ತೋನ್ಸೆ ಸಂಜೀವ ಪೂಜಾರಿ, ದೇವಾಡಿಗರ ಸಂಘ ಮುಂಬಯಿ ಅಧ್ಯಕ್ಷ ವಾಸು ಎಸ್.ದೇವಾಡಿಗ, ಹಿರಿಯಡ್ಕ ಮೋಹನ್‌ದಾಸ್, ಭಂಡಾರಿ ಮಹಾ ಮಂಡಲ ಸ್ಥಾಪಕ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕ ಅಧ್ಯಕ್ಷ ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಶಾಫಿ ವೆಲ್ಫೇರ್ ಎಸೋಸಿಯೇಶನ್ ಮುಂಬಯಿ ಅಧ್ಯಕ್ಷ ನ್ಯಾ| ಬಿ.ಮೊಹಿದ್ಧೀನ್ ಮುಂಡ್ಕೂರು, ಅಖಿಲ ಕರ್ನಾಟಕ ಜೈನ ಸಂಘದ ಅಧ್ಯಕ್ಷ ಬಿ. ಮುನಿರಾಜ್ ಜೈನ್, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗಾಣಿಗ ಸಮಾಜ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷ ಜಗನ್ನಾಥ ಎಂ. ಗಾಣಿಗ, ಉಪಾಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ. ಗಾಣಿಗ, ಭಂಡಾರಿ ಸೇವಾ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಬಾಲಕೃಷ್ಣ ಪಿ.ಭಂಡಾರಿ, ತೀಯಾ ಸಮಾಜ, ಮುಂಬಯಿ ಇದರ ಅಧ್ಯಕ್ಷ ಚಂದ್ರಶೇಖರ್ ಆರ್.ಬೆಳ್ಚಡ, ರಜಕ ಸಂಘ ಮುಂಬಯಿ ಇದರ ಅಧ್ಯಕ್ಷ ಸತೀಶ್ ಆರ್.ಸಾಲ್ಯಾನ್, ತುಳಸೀದಾಸ್ ಅಮೀನ್ ಸೇರಿದಂತೆ ಅನೇಕಾನೇಕ ಸಂಘ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಸಂತಾಪ ವ್ಯಕ್ತ ಪಡಿಸಿದ್ದಾರೆ.

Write A Comment