ರಾಷ್ಟ್ರೀಯ

ಭಾರಿ ಶ್ರೀಮಂತರಿಗೆ ಹೊಸ ‘ಐಟಿಆರ್‌’ ನಮೂನೆ

Pinterest LinkedIn Tumblr

july31ನವದೆಹಲಿ: ವಾರ್ಷಿಕ ₹50 ಲಕ್ಷಕ್ಕಿಂತ ಹೆಚ್ಚಿನ ವರಮಾನ ಹೊಂದಿರುವವರು ಮತ್ತು ಸ್ವಂತವಾಗಿ ಹೆಲಿಕಾಫ್ಟರ್‌, ವಿಲಾಸಿ ಬೋಟ್‌ ಅಥವಾ ದುಬಾರಿ ಆಭರಣಗಳನ್ನು ಹೊಂದಿರುವವರು ಇನ್ನು ಮುಂದೆ ಆದಾಯ ತೆರಿಗೆ ಲೆಕ್ಕಪತ್ರ ವಿವರ (ಐಟಿ ರಿಟರ್ನ್ಸ್‌ ) ಸಲ್ಲಿಸುವಾಗ ಈ ಸಂಪತ್ತಿನ ವಿವರಗಳನ್ನು ಪ್ರತ್ಯೇಕವಾಗಿ ಘೋಷಿಸಬೇಕು.
2016–17ನೇ ಸಾಲಿನ ಲೆಕ್ಕಚಾರ ವರ್ಷಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಹೊಸ ಅರ್ಜಿ ನಮೂನೆಯನ್ನು (ಐಟಿಆರ್‌) ಬಿಡುಗಡೆ ಮಾಡಿದೆ. ಇದರಲ್ಲಿ ‘ವರ್ಷಾಂತ್ಯಕ್ಕೆ ಹೊಂದಿರುವ ಸಂಪತ್ತು ಮತ್ತು ಸಾಲ’ ಎಂಬ ಆಯ್ಕೆಯನ್ನು ಹೊಸದಾಗಿ ನೀಡಲಾಗಿದೆ.
ವಾರ್ಷಿಕ ₹50 ಲಕ್ಷಕ್ಕಿಂತ ಹೆಚ್ಚಿನ ವರಮಾನ ಹೊಂದಿರುವವರಿಗೆ ಇದು ಅನ್ವಯ. ಇದರಲ್ಲಿ ತೆರಿಗೆದಾರ ತಾನು ಹೊಂದಿರುವ ಭೂಮಿ, ಕಟ್ಟಡ ಸೇರಿ ತನ್ನ ಸ್ಥಿರಾಸ್ತಿಯ ಒಟ್ಟು ಮೌಲ್ಯ ವನ್ನು ದಾಖಲಿಸಬೇಕು. ನಗದು, ಚಿನ್ನಾಭರಣ, ವಾಹನ, ವಿಲಾಸಿ ಬೋಟ್‌, ಹೆಲಿಕಾಫ್ಟರ್‌ ಸೇರಿ ಇನ್ನಿತರ ಚರಾಸ್ತಿಯ ಮಾಹಿತಿಯನ್ನೂ ಒದಗಿಸುವುದು ಕಡ್ಡಾಯ.
ಭಾರಿ ಶ್ರೀಮಂತರಿಂದ ತೆರಿಗೆ ವಂಚನೆ ತಪ್ಪಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.
ಇದಕ್ಕೆ ಸಂಬಂಧಿಸಿದಂತೆ ತೆರಿಗೆ ಇಲಾಖೆ ಮಾರ್ಚ್‌ 30ರಂದು ಅಧಿಸೂಚನೆ ಹೊರಡಿಸಿದೆ. ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಕೆಗೆ ಜುಲೈ 31 ಕೊನೆಯ ಗಡುವು.

Write A Comment