
ಹೆಬ್ರಿ .ಏ.01 : ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಜರುಗಿದ ಶತ ಕವಿ ಗೋಷ್ಠಿ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅದ್ಬುತ ಕೊಡುಗೆ. ಶೇಖರ ಅಜೆಕಾರು ನಡೆಸಿಕೊಟ್ಟ ಶತಮಾನದ ಮೊದಲ ಶತ ಕವಿ ಗೋಷ್ಠಿ ಎಂದು ಮಂಗಳೂರು ಆಕಾಶವಾಣಿ ನಿಲಯ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಕಾರ್ಕಳದ ಸಾಣೂರು ಮುರತಂಗಡಿಯ ಪ್ರಕೃತಿ ಶಿಕ್ಷಣ ಸಮೂಹ ಸಂಸ್ಥೆಗಳ ಬಯಲು ರಂಗ ಮಂಟಪದ ಕಯ್ಯಾರ ಕಿಂಞಣ್ಣ ರೈ ವೇದಿಕೆಯಲ್ಲಿ ಹುಣ್ಣಿಮೆಯ ದಿನ ಬುಧವಾರ ಶ್ರೀ ವಿದ್ಯಾ ಸಂಸ್ಥೆ ಮೂಡುಬಿದಿರೆ ಅರ್ಪಿಸಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ,ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮುರತಂಗಡಿಯ ಪ್ರಕೃತಿ ಶಿಕ್ಷಣ ಸಮೂಹ ಸಂಸ್ಥೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಕರ್ಣಾಟಕ ಬ್ಯಾಂಕ್ ಹಾಗೂ ಸರ್ವರ ಸಹಕಾರದಲ್ಲಿ ನಡೆದ ಅಖಿಲ ಕರ್ನಾಟಕ 7ನೇ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ವಿಶೇಷ ಆಕರ್ಷಣೆ ಶತ ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಸಾಹಿತಿ ಡಾ.ನಾ.ಮೊಗಸಾಲೆ ಕವಿ ಗೋಷ್ಠಿ ಉದ್ಘಾಟಿಸಿದರು. ಡಾ.ವಸಂತ ಕುಮಾರ್ ಪೆರ್ಲ ತನ್ನ ಕುಟುಂಬದ ಐವರು ಸದಸ್ಯರು ಮತ್ತು ಭವ್ಯಾ ಹರೀಶ್ ದಂಪತಿಗಳು ಕವಿ ಕುಟುಂಬವಾಗಿ ಕವಿತೆ ವಾಚಿಸಿ ಗಮನ ಸೆಳೆದರು. ತುಳು, ಕನ್ನಡ, ಹಿಂದಿ, ಉರ್ದು, ಕೊಂಕಣಿ,ಅರೆಭಾಷೆ,ಕುಂದಾಪ್ರ ಕನ್ನಡ ಭಾಷೆಯ 113 ಕವಿಗಳು ಶತಕವಿಗೋಷ್ಠಿಯಲ್ಲಿ ಕವಿತೆ ವಾಚನ ಮಾಡಿದರು. ಕವಯಿತ್ರಿ ಜ್ಯೋತಿ ಗುರುಪ್ರಸಾದ್ ಉದ್ಘಾಟನಾ ಕವಿತೆ ವಾಚಿಸಿದರು. ಸಮ್ಮೇಳನದ ಸಂಘಟಕರಾದ ಸಮ್ಮೇಳನ ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು ಬೆಳದಿಂಗಳ ಸಾಹಿತ್ಯ ಸಮ್ಮೇಳನ ಮತ್ತು ನಿರಂತರ ಕನ್ನಡ ಹಾಗೂ ಸಾಹಿತ್ಯ ಸೇವೆಯನ್ನು ನಡೆಸುತ್ತಾ ಹೋಗುವುದಾಗಿ ತಿಳಿಸಿದರು.
ಉಡುಪಿ ನಾದ ವೈಭವಂನ ವಾಸುದೇವ ಭಟ್, ಸುಮ ಸೌರಭ ಪತ್ರಿಕೆ ಸಂಪಾದಕ ಎಂ.ಜೆ.ರಾವ್ ಅತಿಥಿಗಳಾಗಿದ್ದರು. ವಿಜಾಪುರ, ಮುಂಬಯಿ, ಬಾಗಲಕೋಟೆ, ಬೆಂಗಳೂರು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ ಉಡುಪಿ ಜಿಲ್ಲೆಗಳ ಕವಿಗಳು ರಾತ್ರಿ 10 ರಿಂದ ಬೆಳಗ್ಗೆವರೆಗೆ ಕವಿಗೋಷ್ಠಿ ನಡೆಯಿತು.
ಬೆಳದಿಂಗಳ ಸಾಹಿತ್ಯ ಸಮ್ಮೇಳನ : ಸಾಧಕರಿಗೆ ಪ್ರಶಸ್ತಿ ಪ್ರದಾನ ಕನ್ನಡ ಬೆಳೆಸುವುದು ಎಲ್ಲರ ಕರ್ತವ್ಯ : ಗೋಪಾಲ ಭಂಡಾರಿ
ಕನ್ನಡ ಬೆಳೆಸುವುದು ಎಲ್ಲರ ಕರ್ತವ್ಯವಾಗಬೇಕು, ಸಮಾಜ ಮತ್ತು ಸರ್ಕಾರ ಮನಸ್ಸು ಮಾಡಿದರೆ ಇದು ಸಾಧ್ಯವಾಗುತ್ತದೆ, ಕನ್ನಡದ ಜೊತೆಯಲ್ಲೇ ಇಂಗ್ಲೀಷ್ ಕಲಿಸಿದರೆ ಕನ್ನಡದ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ ಎಂದು ಕಾರ್ಕಳದ ಮಾಜಿ ಶಾಸಕ ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಎಚ್.ಗೋಪಾಲ ಭಂಡಾರಿ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರಧಾನ ಮಾಡಿದರು. ಕರ್ನಾಟಕ ದಂಪತಿ ರತ್ನ ಗೌರವವನ್ನು ಬಿ.ಶ್ರೀನಿವಾಸ ರಾವ್ ಮತ್ತು ಸಾವಿತ್ರಿ ಎಸ್ ರಾವ್ ದಂಪತಿಗಳು ಸ್ವೀಕರಿಸಿದರು.
ಕೇಮಾರು ಈಶ ವಿಠಲದಾಸ ಸ್ವಾಮೀಜಿ ಅವರಿಗೆ ಕರ್ನಾಟಕ ಧರ್ಮ ರತ್ನ, ಹುರ್ಲಾಡಿ ರಘುವೀರ್ ಶೆಟ್ಟಿ-ಕರ್ನಾಟಕ ಸಮಾಜ ರತ್ನ, ಪಾದೆಕಲ್ಲು ವಿಷ್ಣು ಭಟ್- ಕರ್ನಾಟಕ ವಿದ್ವತ್ ರತ್ನ, ಮೂಡುಬಿದಿರೆ ಡಾ.ಜಿ.ಎಸ್.ಚಂದ್ರಶೇಖರ್- ವೈದ್ಯ ರತ್ನ, ಅಂಶುಮಾಲಿ-ಸಾಹಿತ್ಯ ರತ್ನ, ಯಶವಂತಿ ಸುವರ್ಣ ನಕ್ರೆ ಮಹಿಳಾ ರತ್ನ, ರಾಧಾಕೃಷ್ಣ ಉಳಿಯತಡ್ಕ-ಹೊರನಾಡ ಕನ್ನಡ ರತ್ನ, ರಾಘವೇಂದ್ರ ಮಯ್ಯ-ಯಕ್ಷಸಂಗೀತ ರತ್ನ, ಗಂಗಯ್ಯ ಪರವ -ಜನಪದ ರತ್ನ, ಉಗ್ಗಪ್ಪ ಪೂಜಾರಿ-ತುಳುವ ರತ್ನ, ಎಡ್ವರ್ಡ್ ತಾಕೋಡೆ-ಕೃಷಿಕ ರತ್ನ ಮತ್ತು ವಿಜಯ ಕುಮಾರ್ ಹೆಗ್ಡೆ- ಕರ್ನಾಟಕ ಸಂಶೋಧನಾ ರತ್ನ ಹಸನಬ್ಬ ಮೂಡಬಿದಿರೆ- ಕರ್ನಾಟಕ ಬ್ಯಾರಿ ಕಲಾ ರತ್ನ ಗೌರವ ಸ್ವೀಕರಿಸಿದರು.

ಹೆಬ್ರಿ ಕೆ.ವಿ.ಸುರೇಶ್-ಶಿಕ್ಷಣ ರತ್ನ, ಕಿಶೋರ್ ಡಿ.ಶೆಟ್ಟಿ-ರಂಗ ರತ್ನ, ಪಂಜು ಗಂಗುಲಿ ಮುಂಬಯಿ-ಕಾರ್ಟೂನ್ ಕಲಾ ರತ್ನ, ಕೃಪಾ ಅಮರ್ ಆಳ್ವ, ಅನಿತಾ ಕಾಮತ್ -ಮಹಿಳಾ ರತ್ನ ಮತ್ತು ಹರಿನಾರಾಯಣ ಅಸ್ರಣ್ಣ-ಕರ್ನಾಟಕ ಕಲಾ ರತ್ನ, ತಿರುವೈಲುಗುತ್ತು ನವೀನ್ ಚಂದ್ರ ಆಳ್ವ-ಕಂಬಳ ರತ್ನ, ವಲೇರಿಯನ್ ಕ್ವಾಡ್ರಸ್-ಕೊಂಕಣಿ ರತ್ನ, ಅಮರನಾಥ ಶೆಟ್ಟಿ-ರಾಜಕೀಯ ರತ್ನ ಗೌರವವಿತ್ತು. ವಿವಿಧ ಕ್ಷೇತ್ರಗಳ ಯುವ ಸಾಧಕರಾದ ಬೆಳುವಾಯಿ ದೇವಾನಂದ ಭಟ್, ಮೂಡುಬಿದಿರೆ ರತ್ನಾಕರ ದೇವಾಡಿಗ,ಅಪುಲ್ ಇರಾ ಮಂಗಳೂರು, ಭವ್ಯಶ್ರೀ ಮಂಡೆಕೋಲು, ಅಜೆಕಾರು ರಮೇಶ್ ಸುವರ್ಣ, ಪದ್ಮಿನಿ ಶ್ರೀನಾಥ್ ಕಾರ್ಕಳ , ನದೀಂ ಮೂಡುಬಿದಿರೆ ಮತ್ತು ಇಂದ್ರ ಕುಮಾರ್ ದಸ್ತನವರ್ ಕರ್ನಾಟಕ ಯುವರತ್ನ ಗೌರವ ಸ್ವೀಕರಿಸಿದರು. ಸುಧಾಕರ ಜೈನ್, ಮಾಳ ಭಾಸ್ಕರ ಆಚಾರ್ಯ, ಉಡುಪಿ ವಿಲಾಸ್ ನಾಯಕ್, ಕಾಂತಾವರ ಉದಯ್ ಕುಮಾರ್ ಶೆಟ್ಟಿ ಅವರಿಗೆ ಕರ್ನಾಟಕ ಯುವ ರತ್ನ ಗೌರವವಿತ್ತು.
ಸಮ್ಮೇಳನದ ಸರ್ವಾಧ್ಯಕ್ಷ ಅಂಬಾತನಯ ಮುದ್ರಾಡಿಮತ್ತು ಶತ ಕವಿಗೋಷ್ಠಿಯ ಅಧ್ಯಕ್ಷ ಪೆರ್ಲ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಾಲು ಹಣತೆಗಳನ್ನು ಅತಿಥಿ ಗಣ್ಯರು, ಕವಿಗಳು, ಸಭಾಸದರು ಎಲ್ಲರೂ ಸೇರಿ ಬೆಳಗಿ ಬೆಳದಿಂಗಳ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.
ಹಳ್ಳಿಯ ಸುಂದರ ಪರಿಸರದಲ್ಲಿ ವಿಶಾಲ ಮೈದಾನದಲ್ಲಿ ನಡೆದ ಸಮ್ಮೇಳನದ ಸ್ಥಳದ ಅಯ್ಕೆಯ ಪರಿಸರದ ಬಗೆಗೂ ಪ್ರಶಂಸೆ ಕೇಳಿ ಬಂತು. 6 ನೇ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕುಂದಾಪುರದ ಎ.ಎಸ್.ಎನ್.ಹೆಬ್ಬಾರ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸಂಘಟಕ ಶೇಖರ ಅಜೆಕಾರು, ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಅಜೆಕಾರು ಡಾ.ಸಂತೋಷ ಕುಮಾರ್ ಶೆಟ್ಟಿ, ಸಮಿತಿಯ ಹೆಬ್ರಿ.ಟಿ.ಜಿ.ಆಚಾರ್ಯ, ಸುಕುಮಾರ್ ಮುನಿಯಾಲ್,ಕುರ್ಪಾಡಿ ರಮೇಶ್ ಆಚಾರ್ಯ, ಸೌಮ್ಯಶ್ರೀ ಅಜೆಕಾರು, ಕುರ್ಪಾಡಿ ಶಂಕರ ಆಚಾರ್ಯ, ಸುನಿಧಿ, ಮಂಜಪ್ಪ ಗೋಣಿ ಮತ್ತಿತರರು ಉಪಸ್ಥಿತರಿದ್ದರು.
ನಿಟ್ಟೆ ಮತ್ತು ಮಂಜುನಾಥ ಪೈ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ಯಶಸ್ಸಿಗೆ ಸಹಕರಿಸಿದರು.