ಕನ್ನಡ ವಾರ್ತೆಗಳು

ರಸ್ತೆ ಕಾಮಗಾರಿ ವಿಳಂಬ: ಸ್ಥಳೀಯರಿಂದ ಪ್ರತಿಭಟನೆ

Pinterest LinkedIn Tumblr

mcc_protest_photo_1

ಮಂಗಳೂರು,ಏ.01: ಮಣ್ಣಗುಡ್ಡೆಯಿಂದ ಬಾಲಾಜಿ ಟಾಕೀಸಿನವರೆಗಿನ ರಸ್ತೆ ಕಾಮಗಾರಿಯ ವಿಳಂಬ ನೀತಿಯನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳಿಂದ ಮ.ನ.ಪಾ ಮುಂದೆ ಜಾಗಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಕಳೆದ 6 ವರ್ಷಗಳಿಂದ ಮಣ್ಣಗುಡ್ಡೆಯಿಂದ ಬಾಲಾಜಿ ಟಾಕೀಸಿನವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಕಾಮಗಾರಿ ನಡೆಯುತ್ತಿದ್ದು ಇಂದಿನವರೆಗೆ ಅದೂ ಪೂರ್ಣಗೊಂಡಿಲ್ಲ. ಕಾಮಗಾರಿ ನಡೆಸಲು ಮರಳು ಇಲ್ಲವೆಂದು ಕಾರಣ ಹೇಳಿ ಕಾಮಗಾರಿಯನ್ನು ಅರ್ಧದಲ್ಲೇ ನಿಲ್ಲಿಸಿದ್ದಾರೆ.ಎಂದು ಸ್ಥಳೀಯ ನಿವಾಸಿ ವಿಜಯನಾಥ್ ಆರೋಪಿಸಿದ್ದಾರೆ.

mcc_protest_photo_2 mcc_protest_photo_3 mcc_protest_photo_4

ಈ ಬಗ್ಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿ ಹಾಗೂ ಮನಾಪ ಸದಸ್ಯರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಅದುದರಿಂದ ಜಾಗಟೆ ಬಾರಿಸುವ ಮೂಲಕ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

Write A Comment