ಕನ್ನಡ ವಾರ್ತೆಗಳು

ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ : ಕಿಮ್ಮನೆ ರತ್ನಾಕರ ರಾಜಿನಾಮೆಗೆ ಪೂಜಾರಿ ಅಗ್ರಹ.

Pinterest LinkedIn Tumblr

poojarry_press_meet_1

ಮಂಗಳೂರು,ಏ.01: ದ್ವಿತೀಯ ಪಿಯುಸಿಯ ರಸಾಯನ ಶಾಸ್ತ್ರದ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆಯೂ ಸೋರಿಕೆ ಆಗಿರುವುದರಿಂದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ರಾಜೀನಾಮೆ ಕೊಡದಿದ್ದರೆ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಲಿ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ ಆಗುವುದು ಇದು ಮೊದಲ ಬಾರಿ ಏನಲ್ಲ. 2001ರಿಂದ ಎಲ್ಲ ಸರಕಾರಗಳ ಕಾಲದಲ್ಲಿ ನಡೆಯುತ್ತಲೇ ಬಂದಿದೆ. ಅದುದರಿಂದ ಈ ವಿಚಾರದಲ್ಲಿ ಅಧಿಕಾರಿ ಅಥವಾ ಸಿಬಂದಿಗಳ ಅಮಾನತು ಈ ಸಮಸ್ಯೆಗೆ ಪರಿಹಾರವಾಗುವುದಿಲ್ಲ ಬದಲಿಗೆ ವಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಅವರು ಪ.ಪೂ. ಶಿಕ್ಷಣ ಇಲಾಖೆಯ ಅಧಿಕಾರಿ ಸುರೇಶ್‌ ತುಂಗ ಅವರನ್ನು ವಶಕ್ಕೆ ಪಡೆದು ಪ್ರಶ್ನಿಸಿದರೆ ವಿಷಯ ಗೊತ್ತಾಗ ಬಹುದೆಂದು ಪೂಜಾರಿ ಹೇಳಿದರು.

poojarry_press_meet_2

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ನಾಯಕರಾದ ಕಳ್ಳಿಗೆ ತಾರನಾಥ ಶೆಟ್ಟಿ, ಮೋಹನ್‌ ಮೆಂಡನ್‌, ಟಿ.ಕೆ. ಸುಧೀರ್‌, ವಿಶ್ವಾಸ್‌ ಕುಮಾರ್‌ ದಾಸ್‌, ಉಮೇಶ್ಚಂದ್ರ, ಫಾರೂಕ್‌ ಉಳ್ಳಾಲ, ರಮಾನಂದ ಪೂಜಾರಿ, ಕರುಣಾಕರ ಶೆಟ್ಟಿ, ನೀರಜ್‌ ಪಾಲ್‌, ಮನೀಶ್‌ ಬೋಳಾರ ಮೊದಲಾದವರು ಉಪಸ್ಥಿತರಿದ್ದರು.

Write A Comment