ಕನ್ನಡ ವಾರ್ತೆಗಳು

ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಂ. ಮಂಜುನಾಥ ಶೆಟ್ಟಿ ಅವರು ಈ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಪಡೆಯುತ್ತಿದ್ದಾರೆ.

Kundapura DYSP- Manjunatha shetty

ಕಳೆದ ಜನವರಿ ತಿಂಗಳಿನಿಂದ ಕುಂದಾಪುರ ಡಿವೈಎಸ್ಪಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಂಜುನಾಥ ಶೆಟ್ಟಿ ಅವರು ಎ.2 ರಂದು ಬೆಂಗಳೂರಿನಲ್ಲಿ ನಡೆಯುವ ಪೊಲೀಸ್ ಧ್ವಜ ದಿನದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಿನ್ನದ ಪದಕ ಪಡೆಯಲಿದ್ದಾರೆ.

ಮಂಜುನಾಥ ಶೆಟ್ಟಿ ಅವರ ಬಗ್ಗೆ……..
ಮಂಜುನಾಥ ಶೆಟ್ಟಿ ಅವರು ಬಾರ್ಕೂರಿನ ನ್ಯಾಶನಲ್ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದು ಬಳಿಕ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. 1990 ರಲ್ಲಿ ಪೊಲೀಸ್ ಇಲಾಖೆ ಸೇರಿದ ಅವರು ಉಪನಿರೀಕ್ಷಕರಾಗಿ 1992ರಲ್ಲಿ ಉಪ್ಪಿನಂಗಡಿ, ಸುಬ್ರಮಣ್ಯ, ಬೆಳ್ತಂಗಡಿ ಸೇರಿದಂತೆ ಮಂಗಳೂರಿನ ಹಲವೆಡೆ ಸಲ್ಲಿಸಿದ್ದರು. ಬಳಿಕ 2001 ರಲ್ಲಿ ಇನ್ಸ್‌ಪೆಕ್ಟರ್ ಆಗಿ ಬಡ್ತಿ ಹೊಂದಿದ ಅವರು ಸಿ.ಐ.ಡಿ.ಯಲ್ಲಿ 3 ವರ್ಷ, ಇಮಿಗ್ರೇಶನ್ ವಿಭಾಗದಲ್ಲಿ ಮೂರು ವರ್ಷ ಹಾಗೂ ಮಂಗಳೂರಿನಲ್ಲಿ ಟ್ರಾಫಿಕ್ ಇನ್ಸ್‌ಪೆಕ್ಟರ್ ಆಗಿದ್ದರು. 2012 ಅಕ್ಟೋಬರ್ ತಿಂಗಳಿನಲ್ಲಿ ಡಿವೈ‌ಎಸ್ಪಿ ಆಗಿ ಬಡ್ತಿ ಹೊಂದಿದ ಅವರು ಉಡುಪಿಯ ಕರಾವಳಿ ಕಾವಲು ಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಹೀಗೆ ಸುದೀರ್ಘ 25 ವರ್ಷಕ್ಕೂ ಅಧಿಕ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸದ್ಯ ಒಂದು ವರ್ಷ ಮೂರು ತಿಂಗಳಿನಿಂದ ಕುಂದಾಪುರ ಡಿವೈ‌ಎಸ್ಪಿ ಆಗಿದ್ದಾರೆ.

Write A Comment