ಕನ್ನಡ ವಾರ್ತೆಗಳು

ಇಂದಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭ : : ದ.ಕ., ಉಡುಪಿ – 49,925 ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ

Pinterest LinkedIn Tumblr

sslc_exam_start_1

ಮಂಗಳೂರು ಮಾರ್ಚ್.30 : ರಾಜ್ಯಾದ್ಯಂತ ಇಂದಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭಗೊಂಡಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಅಂತಿಮ ಸಿದ್ದತೆ ಮಾಡುತ್ತಿರುವುದು ಕಂಡು ಬಂದಿದೆ.

ಈ ಬಾರಿ ನಡೆಯಲಿರುವ 2015-16 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಜಿಲ್ಲೆಯಲ್ಲಿ 17,672 ಬಾಲಕರು ಮತ್ತು 16179 ಬಾಲಕೀಯರು ಸೇರಿದಂತೆ ಒಟ್ಟು 33851 ವಿದ್ಯಾರ್ಥಿಗಳು ಪರೀಕ್ಷಾರ್ಥಿಗಳಾಗಿದ್ದಾರೆ. 1203 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

ಜಿಲ್ಲೆಯ 496 ಶಾಲೆಗಳ 103 ಪರೀಕ್ಷಾ ಕೇಂದ್ರಗಳಲ್ಲಿ ಇಂದಿನಿಂದ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಸುಗಮವಾಗಿ ನಡೆಯಲು ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.

sslc_exam_start_2 sslc_exam_start_3 sslc_exam_start_4 sslc_exam_start_5 sslc_exam_start_6 sslc_exam_start_7 sslc_exam_start_8 sslc_exam_start_9

sslc_exam_start_11 sslc_exam_start_12 sslc_exam_start_13 sslc_exam_start_14 sslc_exam_start_15 sslc_exam_start_16 sslc_exam_start_17 sslc_exam_start_18 sslc_exam_start_19 sslc_exam_start_20 sslc_exam_start_21 sslc_exam_start_22

ದ.ಕ ಜಿಲ್ಲೆಯಲ್ಲಿ 103 ಪರೀಕ್ಷಾ ಕೇಂದ್ರಗಳಿದ್ದು, 33,851 ವಿದ್ಯಾರ್ಥಿಗಳು ನೊಂದಾಯಿಸಿದ್ದು, 17,672 ವಿದ್ಯಾರ್ಥಿಗಳು ಹಾಗೂ 16179 ವಿದ್ಯಾರ್ಥಿನಿಯರ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ. ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಒಟ್ಟು 49,925 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

Write A Comment