ಕನ್ನಡ ವಾರ್ತೆಗಳು

ಗಂಗೊಳ್ಳಿ: ಲೇಡಿ ಡಾಕ್ಟರ್ v/s ಅಂಗನವಾಡಿ ಕಾರ್ಯಕರ್ತೆಯರು: ‘ಐ ಆಮ್ ಸಾರಿ-ನನ್ನ ಕ್ಷಮಿಸಿ’

Pinterest LinkedIn Tumblr

ಕುಂದಾಪುರ: ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಮಂಗಳವಾರ ಮಹಿಳೆಯರ ದಂಡು ನೆರೆದಿತ್ತು. ಎಲ್ಲರ ಮುಖದಲ್ಲಿಯೂ ಆಕ್ರೋಷಭರಿತ ಭಾವನೆ. ನ್ಯಾಯಕ್ಕಾಗಿ ಮೊರೆಯಿಟ್ಟ ಮಹಿಳೆಯರು ಆಸ್ಪತ್ರೆಯೆದುರು ಜಮಾಯಿಸಿ ಮೇಲಾಧಿಕಾರಿಗಳಿಗೆ ಕಂಪ್ಲೇಂಟ್ ನೀಡಿದ್ರು. ಅಷ್ಟಕ್ಕೂ ಅವರೆಲ್ಲರೂ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಆರೋಗ್ಯ ಸಹಾಯಕಿ ವಿರುದ್ಧ ಸಿಟ್ಟಿಗೆದ್ದಿದ್ದರು.

ಅಂಗನವಾಡಿ ಕಾರ್ಯಕರ್ತೆಯರ ಆರೋಪವೇನು?
ಮಾರ್ಚ್26 ರಂದು ಅಂಗನವಾಡಿ ಕಾರ್ಯಕರ್ತೆಯರು ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಾಡಿಗೆ ಕಟ್ಟದಲ್ಲಿ ವಲಯ ಸಭೆ ನಡೆಸುತ್ತಿದ್ದರು. ಅಂದು ಮಧ್ಯಾಹ್ನ ೩ ಗಂಟೆಗೆ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ. ಶ್ವೇತಾ ಹಾಗೂ ಇನ್ನೋರ್ವ ಸಿಬ್ಬಂದಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗಂಗೊಳ್ಳಿ ವಲಯದ ಮೇಲ್ವಿಚಾರಕಿ ಪ್ರಭಾವತಿ ಶೆಟ್ಟಿ ಎನ್ನುವರಿಗೆ ಅವ್ಯಾಚವಾಗಿ ನಿಂದಿಸಿದ್ದು ಮಾತ್ರವಲ್ಲದೇ ಕೋಣೆ ಬಾಗಿಲು ಹಾಕಿದ್ದಾರೆಂಬ ಆರೋಪವನ್ನು ಮಾಡಲಾಗಿದೆ. ಪ್ರತಿ ತಿಂಗಳು ವಲಯ ಸಭೆ ವೇಳೆಯಲ್ಲಿ ಇದೇ ರೀತಿಯಾದ ದುರ್ನಡತೆ ಮಾಡುತ್ತಿದ್ದು ಇವರೊಂದಿಗೆ ಆರೋಗ್ಯ ಸಹಾಯಕಿ ಅರ್ಪಿತಾ ಎನ್ನುವವರ ಬಗ್ಗೆಯೂ ಅಂಗನವಾಡಿ ಕಾರ್ಯಕರ್ತೆಯರು ಮುನಿಸಿಕೊಂಡಿದ್ದಾರೆ.

GangollI_Hospital_Protest (2) GangollI_Hospital_Protest (6)

GangollI_Hospital_Protest (9)

GangollI_Hospital_Protest (5)

GangollI_Hospital_Protest (10)

GangollI_Hospital_Protest (4)  GangollI_Hospital_Protest (7) GangollI_Hospital_Protest (3) GangollI_Hospital_Protest (1)

GangollI_Hospital_Protest  (1) GangollI_Hospital_Protest  (2)

GangollI_Hospital_Protest (11)

GangollI_Hospital_Protest (8)

ಆಸ್ಪತ್ರೆಯೆದುರು ಪ್ರತಿಭಟನೆ
ಆರೋಗ್ಯಾಧಿಕಾರಿ ಹಾಗೂ ಆರೋಗ್ಯ ಸಹಾಯಕಿಯಿಂದ ದೌರ್ಜನ್ಯ ನಡೇದಿದೆಯೆಂದು ಆರೋಪಿಸಿ ಕುಂದಾಪುರ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘ (ರಿ.) ವತಿಯಿಂದ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಜಮಾಯಿಸಿದ ನೂರಾರು ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಕೈಯರು ಬ್ರಹತ್ ಪ್ರತಿಭಟನೆ ನಡೆಸಿದರು. ವೈದ್ಯಾಧಿಕಾರಿ ಹಾಗೂ ಸಹಾಯಕಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಮುಂದಿನ ದಿನಗಳಲ್ಲಿ ಈ ರೀತಿ ವರ್ತನೆ ನಡೆಯದಂತೆ ಸಂಬಂದಪಟ್ಟ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

‘ಐ ಆಮ್ ಸಾರಿ’ ಎಂದ ಡಾಕ್ಟರ್
ಆಸ್ಪತ್ರೆಯೆದುರು ಅಂಗನವಾಡಿ ಕಾರ್ಯಕರ್ತೆಯರು ಜಮಾಯಿಸಿ ಪ್ರತಿಭಟಿಸಿ ಮೇಲಧಿಕಾರಿಗಳ ಬಳಿ ತಮ್ಮ ಸಮಸ್ಯೆ ತೋಡಿಕೊಳ್ಳುತ್ತಿದ್ದಂತೆಯೇ ಆಗಮಿಸಿದ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅವರು ಮಾತನಾಡಿ, “ನಾನು ಬಾಗಿಲು ಹಾಕಿಲ್ಲ. ಅದು ಡಬ್ಬಲ್ ಡೋರ್ ಆದ ಕಾರಣ ನಾನು ಬಾಗಿಲು ಎಳೆದಾಗ ಅದು ಮುಚ್ಚಿಕೊಂಡಿದ್ದು ಹೊರತು ತಾನು ಉದ್ದೇಶಪೂರ್ವಕವಾಗಿ ಬಾಗಿಲು ಹಾಕಿದ್ದಲ್ಲ ಎಂದು ಸಮಜಾಯಿಷಿ ನೀಡಿದರು. ಆದರೇ ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಾಗ ಡಾಕ್ಟರ್ ಅವರು ‘‘ನಾಲ್ಕು ವರ್ಷದಿಂದ ನಾವೆಲ್ಲಾ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ, ಇನ್ನೂ ಮುಂದೆಯೂ ನಾವು ಒಟ್ಟಿಗೆ ಕೆಲಸ ಮಾಡಬೇಕು. ಈ ವಿಚಾರವನ್ನು ದೊಡ್ಡದು ಮಾಡುವುದು ಬೇಡ. ನನ್ನ ವರ್ತನೆ ನೋವಾಗಿದ್ದರೇ ನನ್ನನ್ನು ಕ್ಷಮಿಸಿ, ಎಲ್ಲವೂ ನನ್ನದೇ ತಪ್ಪು. ಇನ್ನು ಈ ರೀತಿ ಮರುಕಳಿಸುವುದಿಲ್ಲ” ಎಂದರು.

ವೈದ್ಯಾಧಿಕಾರಿಗಳು ‘ಸಾರಿ’ ಕೇಳುತ್ತಿದ್ದಂತೆಯೇ ಪ್ರತಿಭಟನಾ ಕಾರರು ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದಲ್ಲದೇ ಇನ್ನು ಮುಂದೆ ಈ ರೀತಿ ವರ್ತನೆ ಮರುಕಳಿಸಂತೆ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಮನವಿ ನೀಡಿದ್ರು.

ಇನ್ನು ಮುಂದೆ ಈ ವರ್ತನೆ ಮರುಕಳಿಸಿದರೇ ಜಿಲ್ಲಾಸಂಘದಿಂದಲೂ ಉನ್ನತ ಮಟ್ಟದ ಹೋರಾಟ ಮಾಡುತ್ತೇವೆ. ಇಷ್ಟೆಲ್ಲಾ ಸಮಸ್ಯೆಗಳಾದ ಮೇಲೂ ನಾವು ಮುಂದಿನ ದಿನಗಳಲ್ಲಿ ವಲಯ ಸಭೆಯನ್ನು ಗಂಗೊಳ್ಳಿ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಮಾಡುವುದಿಲ್ಲ. ಬದಲಾಗಿ ಅಂಗನವಾಡಿ ಕೇಂದ್ರದಲ್ಲಿಯೇ ಮಾಡುತ್ತೇವೆ. ವೈದ್ಯರು ಅಲ್ಲಿಗೆ ಹಾಜರಾಗಿ ಮಾಹಿತಿ ನೀಡಲಿ ಎಂದು ಕುಂದಾಪುರ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘ (ರಿ.) ಅಧ್ಯಕ್ಷೆ ಫಿಲೋಮಿನಾ ಹೇಳಿದ್ದಾರೆ.

ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ತಾಲೂಕು ಕಾರ್ಯದರ್ಶಿ ನಾಗರತ್ನ ಹವಲ್ದಾರ್, ಕೋಶಾಧಿಕಾರಿ ಶೋಭಾ, ಉಷಾ ಕುಂದಾಪುರ, ಕುಂದಾಪುರ ಸಿಡಿಪಿಓ ಲಕ್ಷ್ಮೀ, ಗಂಗೊಳ್ಳಿ ವಲಯದ ಮೇಲ್ವಿಚಾರಕಿ ಪ್ರಭಾವತಿ ಶೆಟ್ಟಿ, ಹಾಗೂ ಎಲ್ಲಾ ವಲಯಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Write A Comment