ಕನ್ನಡ ವಾರ್ತೆಗಳು

ಪದವಿ ಫಲಿತಾಂಶ ಗೊಂದಲ: ಎ.ಬಿ.ವಿ.ಪಿ. ನೇತೃತ್ವದಲ್ಲಿ ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

Pinterest LinkedIn Tumblr

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನಮಾನವಿದ್ದು ಆದರೇ ಇತ್ತೀಚೆಗೆ ವಿ.ವಿ.ಗೆ ಒಳಪಟ್ಟಿರುವ ಪದವಿ ವಿದ್ಯಾರ್ಥಿಗಳ 1, 3 ಮತ್ತು 5 ನೇ ಸೆಮಿಸ್ಟಾರ್ ಫಲಿತಾಂಶವು ಸಂಪೂರ್ಣ ಅಸ್ತವ್ಯಸ್ಥವಾಗಿದ್ದನ್ನು ಪ್ರತಿಭಟಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಕಾಲೇಜು ವಿದ್ಯಾರ್ಥಿಗಳು ಸೋಮವಾರ ತರಗತಿ ಬಹಿಷ್ಕರಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ಸೋಮವಾರ ಬೆಳಿಗ್ಗೆ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಕುಂದಾಪುರ ಚಿಕ್ಕನ್ ಸಾಲ್ ರಸ್ತೆಯ ಮೂಲಕ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿ ಬಂದು ಕುಂದಾಪುರ ಮಿನಿವಿಧಾನಸೌಧದ ಎದುರು ಪ್ರತಿಭಟಿಸಿದರು.

B.B. Hegde Colege_Student_Protest (12) B.B. Hegde Colege_Student_Protest (3) B.B. Hegde Colege_Student_Protest (2) B.B. Hegde Colege_Student_Protest (10) B.B. Hegde Colege_Student_Protest (11) B.B. Hegde Colege_Student_Protest (5) B.B. Hegde Colege_Student_Protest (4) B.B. Hegde Colege_Student_Protest (9) B.B. Hegde Colege_Student_Protest (8) B.B. Hegde Colege_Student_Protest (6) B.B. Hegde Colege_Student_Protest (7) B.B. Hegde Colege_Student_Protest (1)

ಈ ಸಂದರ್ಭ ಮಾಧ್ಯಮದೊಂದಿಗೆ ಎ.ಬಿ.ವಿ.ಪಿ. ಸರ್ವ ಕಾಲೇಜು ಉಡುಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಅಭಿಷೇಕ್ ಅಂಕದಕಟ್ಟೆ ಅವರು ಮಾತನಾಡಿ, ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ನಡೆಯುತ್ತಿರುವ ಈ ಗೊಂದಲಗಳು ವಿ.ವಿ. ಘನತೆಗೆ ಧಕ್ಕೆ ತರುತ್ತಿರುವುದು ಮಾತ್ರವಲ್ಲದೇ ಪರೀಕ್ಷೆಯ ಫಲಿತಾಂಶಗಳ ಅವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಇದು ವಿ.ವಿ. ಆಡಳಿತ ಮಂಡಲಿ ವೈಪಲ್ಯವನ್ನು ಎ.ಬಿ.ವಿ.ಪಿ. ತೀವ್ರವಾಗಿ ಖಂಡಿಸುತ್ತದೆ. ದೇಶ ಹಾಗೂ ವಿದೇಶಗಳಿಂದ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಗಳಿಗೆ ವ್ಯಾಸಂಗದ ಸಲುವಾಗಿ ವಿದ್ಯಾರ್ಥಿಗಳು ಬರುತ್ತಾರೆ. ಆದರೇ ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ಆಡಳಿತ ಹಾಗೂ ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಿದ್ದ ವಿ.ವಿ. ಫಲಿತಾಂಶದಂತಹ ಪ್ರಮುಖ ವಿಚಾರದಲ್ಲಿಯೇ ಎಡವಿರುವುದು ಸರಿಯಲ್ಲ. ಈ ಕೂಡಲೇ ಪದವಿ ಫಲಿತಾಂಶದ ಗೊಂದಲಗಳನ್ನು ಬಗೆಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ವಿ.ವಿ, ಎದುರು ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.

ಈ ಸಂದರ್ಭ ವಿದ್ಯಾರ್ಥಿಗಳು ಮಾತನಾಡಿ, ಪರೀಕ್ಷೆಗಳು ನಡೆದು ಎರಡು ತಿಂಗಳಾದರೂ ಕೂಡ ಫಲಿತಾಂಶ ಪ್ರಕಟಣೆಯಲ್ಲಿ ವಿಳಂಭ ಧೋರಣೆ ಅನುಸರಿಸಿದ್ದು ಬಳಿಕ ನಡೆದ ಪ್ರತಿಭಟನೆಯ ನಂತರ ಫಲಿತಾಂಶಗಳನ್ನು ಪ್ರಕಟಿಸಿದೆಯದರೂ ವಿ.ವಿ. ಪ್ರಕಟಿಸಿದ ಫಲಿತಾಂಶವೂ ಲೋಪದೋಷಗಳಿಂದ ಕೂಡಿದ್ದು ಕಳೆದ ಸೆಮಿಸ್ಟರ್‌ನಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ಬಾರೀ ಅನುತ್ತೀರ್ಣರಾಗಿದ್ದಾರೆ. ಪರೀಕ್ಷೆಯನ್ನೇ ಬರೆಯದೇ ಗೈರಾದ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇಷ್ಟೇ ಅಲ್ಲದೇ ಪ್ರಕಟಿಸಿದ ಫಲಿತಾಂಶವನ್ನು ವೆಬ್‌ಸೈಟ್‌ನಿಂದ ತೆಗೆದಿರುವುದು, ಒಂದೇ ತರಗತಿಯ ಎಲ್ಲರೂ ಅನುತ್ತೀರ್ಣರಾಗಿರುವುದು ಹಲವು ಲೋಪಗಳು ಆಗಿದೆ ಎಂದರು.

ಕೂಡಲೇ ಈ ಬಗ್ಗೆ ವಿ.ವಿ. ಎಚ್ಚೆತ್ತುಕೊಳ್ಳಬೇಕು. ಎಲ್ಲಾ ಲೋಪಗಳನ್ನು ಸರಿಪಡಿಸಿಕೊಂಡು ಸಮರ್ಪಕ ಫಲಿತಾಂಶವನ್ನು ಪ್ರಕಟಿಸಬೇಕು. ಸರಿಯಾದ ಫಲಿತಾಂಶವನ್ನು ಪ್ರಕಟಿಸುವವರೆಗೂ ಮರುಪರೀಕ್ಷೆ, ಮರುಮೌಲ್ಯಮಾಪನ ಸೇರಿದಂತೆ ಎಲ್ಲಾ ಶುಲ್ಕ ಪಾವತಿ ದಿನಾಂಕವನ್ನು ಮುಂದುಡಬೇಕಿದೆ. ಅಲ್ಲದೇ ಎಲ್ಲಾ ಲೋಪಗಳು ಹಾಗೂ ಗೊಂದಲಗಳಿಗೆ ವಿ.ವಿ. ಸ್ಪಷ್ಟನೆ ನೀಡಿ ಕಾರಣವನ್ನು ಬಹಿರಂಗಪಡಿಸಬೇಕು ಎಂಬ ಆಗ್ರಹ ಕೇಳಿಬಂತು.

ಇದೇ ಸಂದರ್ಭ ವಿದ್ಯಾರ್ಥಿಗಳು ಕುಂದಾಪುರ ಉಪತಹಶಿಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ಮುಖಂಡತ್ವವನ್ನು ಎ.ಬಿ.ವಿ.ಪಿ. ಕುಂದಾಪುರ ನಗರ ಕಾರ್ಯದರ್ಶಿ ವೈಭವ್, ಕಾರ್ಯಕರ್ತರಾದ ರಕ್ಷಿತ್, ಪುನೀತ್, ಸುಹಾಸ್, ಮೋಹನ್, ಅನೀಶ್, ಸಚಿನ್, ಸ್ವಾಗತ್, ನಿತಿನ್, ಸೂರ್ಯಪ್ರಕಾಶ್, ನಯನ್, ನವೀನ್, ಬಾಲಕ್ರಷ್ಣ ಮೊದಲಾದವರು ವಹಿಸಿದ್ದರು.

Write A Comment