ಕನ್ನಡ ವಾರ್ತೆಗಳು

ಕೊಲ್ಲೂರು: ಸಾಲಬಾಧೆಯಿಂದ ಕಂಗಾಲಾದ ರೈತ ವಿಷ ಸೇವಿಸಿ ಆತ್ಮಹತ್ಯೆ

Pinterest LinkedIn Tumblr

Kollur_Farmer_Death

ಕುಂದಾಪುರ: ಸಾಲಬಾಧೆಯಿಂದ ಕೃಷಿಕನೋರ್ವ ವಿಷಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಲ್ಲೂರು ಸಮೀಪದ ಹಾಲ್ಕಲ್ ಎಂಬಲ್ಲಿ ನಡೆದಿದೆ.

ಹಾಲ್ಕಲ್ ನಿವಾಸಿ ಮೂಲತಃ ಕೇರಳದವರಾದ ಥೋಮಸ್ (50) ಆತ್ಮಹತ್ಯೆಗೆ ಶರಣಾದವರು.

ಥಾಮಸ್ ಅವರು ಅಂದಾಜು ಎರಡು ಎಕರೆ ಕೃಷಿ ಭೂಮಿ ಹೊಂದಿದ್ದು ಅದರಲ್ಲಿ ರಬ್ಬರ್, ತೆಂಗಿನತೋಟ ಹಾಗೂ ನರ್ಸರಿ ಮೂಲಕ ಜೀವನ ಸಾಗಿಸುತ್ತಿದ್ದರು ರೂ 2 ಲಕ್ಷಕ್ಕೂಅಧಿಕ ಹಣವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದರು. ಸಾಲ ಮರುಪಾವತಿ ಮಾಡದ ಹಿನ್ನೆಲೆ ಥಾಮಸ್ ಅವರಿಗೆ ಬ್ಯಾಂಕ್ ನೋಟಿಸ್ ಜಾರಿಯಾಗಿತ್ತು. ಆದರೇ ಇತ್ತೀಚೆಗೆ ರಬ್ಬರ್ ಹಾಗೂ ತೆಂಗಿನ ಧಾರಣೆ ಗಣನೀಯ ಮಟ್ಟದಲ್ಲಿ ಕುಸಿತ ಕಂಡ ಪರಿಣಾಮ ಸಾಲ ಮರುಪಾವತಿ ಮಾಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.

ಎರಡು ತಿಂಗಳ ಹಿಂದಷ್ಟೇ ಇದೇ ಭಾಗದ ಜಡ್ಕಲ್ ನಿವಾಸಿ ರೈತರೊಬ್ಬರು ಸಾಲಬಾಧೆಯಿಂದ ಸಾವನ್ನಪ್ಪಿದ್ದರು.

ಥಾಮಸ್ ಅವರು ಪತ್ನಿ ಹಾಗೂ 10 ವರ್ಷದ ಪುತ್ರನನ್ನು ಅಗಲಿದ್ದಾರೆ.

ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.  ಸ್ಥಳಕ್ಕೆ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಭೇಟಿ ನೀಡಿದ್ದಾರೆ.

 

Write A Comment