ಕನ್ನಡ ವಾರ್ತೆಗಳು

ಲಿಂಗ ಸಮಾನತೆಯ ಸಂದೇಶ ಸಾರಲು ಜಾಲತಾಣದಲ್ಲಿ ಲೈಮ್‌ರೋಡ್ ಪ್ರಚಾರಾಂದೋಲನ

Pinterest LinkedIn Tumblr

social_media_symbol

ಬೆಂಗಳೂರು, ಮಾ.25 : ಲಿಂಗ ಸಮಾನತೆಯ ಸಂದೇಶ ಸಾರುವ ಉದ್ದೇಶದಿಂದ ಭಾರತದ ಮೂಂಚೂಣಿ ಸಾಮಾಜಿಕ ವ್ಯಾಪಾರ ವೇದಿಕೆಯಾಗಿರುವ ಲೈಮ್‌ರೋಡ್ ತನ್ನ “ಲೈಮ್‌ರೋಡ್‌ಚೇಂಜ್‌ದಿಸ್ಟೋರಿ” ಎಂಬ ಹೆಸರಿನ ಸಾಮಾಜಿಕ ಜಾಲತಾಣ ಪ್ರಚಾರಾಂದೋಲನದ ಪ್ರಾರಂಭಿಸಿದೆ.

ಈ ಮೂಲಕ ಲಿಂಗ ಸಮಾನತೆಯನ್ನು ಉತ್ತೇಜಿಸುವುದಕ್ಕಾಗಿ ಪ್ರತಿಯೊಬ್ಬರ ನವೀನ ಚಿಂತನೆಗಳನ್ನು ಮತ್ತು ಅಭಿಪ್ರಾಯಗಳನ್ನು ಸ್ವಾಗತಿಸಲಿದೆ. ಮುಂಬರುವ ಕಿ&ಕಾ ಎಂಬ ಹಿಂದಿ ಸಿನಿಮಾ ತಂಡದೊಂದಿಗೆ ಸಹಯೋಗಹೊಂದಿ, ಲಿಂಗ ಸಮಾನತೆಯ ಸಂದೇಶಗಳನ್ನು ನೀಡುವುದು ಮತ್ತು ಲಿಂಗ ಪಡಿಯಚ್ಚುಗಳನ್ನು ತೊಲಗಿಸುವ ಉದ್ದೇಶವನ್ನು ಹೊಂದಿದೆ ಎಂದು ಲೈಮ್‌ರೋಡ್‌ನ ಸಂಸ್ಥಾಪಕಿ ಹಾಗೂ ಸಿಇಒ ಮಿಸ್ ಸುಚಿ ಮುಖರ್ಜಿ ಹೇಳಿದ್ದಾರೆ.

ಲೈಮ್‌ರೋಡ್, ಲಿಂಗತ್ವದ ಸುತ್ತ-ಮುತ್ತಲಿನ ಕಲ್ಪನೆಗಳ ಮೇಲೆ ಮತ್ತು ಸಮಾಜವು ಮಹಿಳೆಯನ್ನು ಯಾವ ರೀತಿ ಕಾಣಲಾಗುತ್ತದೆ ಎಂಬುದನ್ನು ಸ್ವಲ್ಪ ಮಟ್ಟಿಗೆ ಫ್ರಭಾವಿಸುತ್ತಲೇ ಬಂದಿದೆ. ಕಳೆದ ವರ್ಷ ರಕ್ಷಾ ಬಂಧನದಂದು ಜನಪ್ರೀತಿ ಗಳಿಸಿದಂತಹ “ಒಪನ್ ಲೆಟರ್ ಟು ಆಲ್ ಬ್ರದರ್‍ಸ್” ಎಂಬ ಅಭಿಯಾನವು ಇಂತಹುದ್ದೇ ಒಂದು ಅಭಿಯಾನವಾಗಿತ್ತು.

ಈ ಪ್ರಚಾರಾಂದೋಲನದ ಮೂಲಕ, ಲಿಂಗ ಸಮಾನತೆಯ ಸುತ್ತಮುತ್ತಲಿನ ತಪ್ಪುಕಲ್ಪನೆಗಳನ್ನು ಬದಲಾಯಿಸಲು ಮತ್ತು ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದರ ಬಗ್ಗೆ ನವೀನ ಚಿಂತನೆಗಳನ್ನು ಮತ್ತು ಅಭಿಪ್ರಾಯಗಳನ್ನು ತನ್ನ ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಹಂಚಿಕೊಳ್ಳಲು ದೇಶದ ಜನರನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

Write A Comment