ಕನ್ನಡ ವಾರ್ತೆಗಳು

ಮಂಗಳೂರಿಗೆ ಬಂದಿದೆ ಸಾಯನ್ಸ್ ಎಕ್ಸ್‌ಪ್ರೆಸ್ ರೈಲು : ಇಂದಿನಿಂದ 4 ದಿನ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶ

Pinterest LinkedIn Tumblr

Science_majn_exbitin_1

ಮ೦ಗಳೂರು, ಮಾರ್ಚ್. 25: ವಿಜ್ಞಾನದ ವಿವಿಧ ಕೌತುಕಗಳನ್ನು ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಒದಗಿಸುವ ಸಾಯನ್ಸ್ ಎಕ್ಸ್‌ಪ್ರೆಸ್ ರೈಲು ಶುಕ್ರವಾರ ಮಂಗಳೂರಿಗೆ ಆಗಮಿಸಿದೆ.ನಗರದ ಪಡೀಲ್‌ನಲ್ಲಿರುವ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಮಾರ್ಚ್ 25ರಿಂದ 28ರವರೆಗೆ ಈ ರೈಲು ತಂಗಲಿದೆ.

ವಿಜ್ಞಾನಕ್ಕೆ ಸಂಬಂಧಪಟ್ಟ ಹಲವಾರು ಕುತೂಹಲಕರ, ಸಂಶೋಧನೆಗಳ ಜಾಗೃತಿ ಮೂಡಿಸುವ ಈ ರೈಲು ಸಂಚಾರಿ ವಿಜ್ಞಾನ ಪ್ರದರ್ಶನವನ್ನು ಹೊಂದಿದೆ. ಮುಖ್ಯವಾಗಿ ಹವಾಮಾನ ಬದಲಾವಣೆ ಕುರಿತು ಸಾರ್ವಜನಿಕರಿಗೆ ಹೆಚ್ಚು ಜಾಗೃತಿ ಮೂಡಿಸಲು ವೈಜ್ಞಾನಿಕವಾಗಿ ಮಾಹಿತಿಯನ್ನು ಈ ರೈಲಿನಲ್ಲಿ ನೀಡಲಾಗುತ್ತಿದೆ.

16 ಬೋಗಿಗಳನ್ನು ಹೊಂದಿರುವ ಈ ಎಸಿ ರೈಲಿನ ಪ್ರತಿಯೊಂದು ಬೋಗಿಯೂ ಒಂದಕ್ಕೊಂದು ವಿಭಿನ್ನ ಪ್ರದರ್ಶನವನ್ನೊಳಗೊಂಡಿದೆ. ವಿಜ್ಞಾನದದ ಚಟುವಟಿಕೆಗಳು, ವೈಜ್ಞಾನಿಕ ಆಟಗಳು, ಪ್ರಯೋಗಾಲಯ, ಪರಿಸರ, ತಾಪಮಾನದ ಬದಲಾವಣೆ, ಮಾಲಿನ್ಯ ನಿಯಂತ್ರಣ, ದೈನಂದಿನ ಜೀವನದಲ್ಲಿ ವಿಜ್ಞಾನದ ಪಾತ್ರ, ಹುಲಿ ಸಂರಕ್ಷಣೆ ಮತ್ತಿತರ ವಿಷಯಗಳನ್ನು ಈ ರೈಲಿನಲ್ಲಿ ಕಂಡು ಅರಿಯಬಹುದಾಗಿದೆ.

Science_majn_exbitin_2 Science_majn_exbitin_3 Science_majn_exbitin_4 Science_majn_exbitin_5 Science_majn_exbitin_6 Science_majn_exbitin_7 Science_majn_exbitin_8

ಮಾರ್ಚ್ 28ರವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ ಈ ಸಾಯನ್ಸ್ ಎಕ್ಸ್‌ಪ್ರೆಸ್ ರೈಲು ಸಾರ್ವಜನಿಕ ವೀಕ್ಷಣೆಗೆ ಲಭ್ಯವಿದೆ.

2007ರ ಅಕ್ಟೋಬರ್ 30ರಂದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಜರ್ಮನ್ ಚಾನ್ಸೆಲರ್ ಆ್ಯಂಗೆಲಾ ಮೆರ್ಕಲ್ ಅವರಿಂದ ಚಾಲನೆ ಪಡೆದಿದ್ದ ಈ ರೈಲು, ಕಳೆದ ಏಳು ವರ್ಷಗಳಿಂದ ದೇಶದ ಉದ್ದಗಲಕ್ಕೂ ಸಂಚಾರ ನಡೆಸಿದೆ. ಈವರೆಗೆ ರೈಲು 1,22,000 ಕಿ.ಮೀ.ಗಳನ್ನು ಸಂಚರಿಸಿದ್ದು, 1.33 ಕೋಟಿಗೂ ಅಧಿಕ ವೀಕ್ಷಕರು ರೈಲಿನ ಈ ಪ್ರದರ್ಶನವನ್ನು ವೀಕ್ಷಿಸಿದ್ದಾರೆ. 1,404 ದಿನಗಳಲ್ಲಿ ಈ ರೈಲು 391 ರೈಲ್ವೇ ಜಂಕ್ಷನ್‌ಗಳಲ್ಲಿ ವಾಸ್ತವ್ಯಹೂಡಿ ಪ್ರದರ್ಶನವನ್ನು ನೀಡಿದೆ.

ಪ್ರಸಕ್ತ ಪ್ರಯಾಣದಲ್ಲಿ ಈ ಸಾಯನ್ಸ್ ಎಕ್ಸ್‌ಪ್ರೆಸ್ ರೈಲು 30 ರಾಜ್ಯಗಳ 64 ಕಡೆಗಳಲ್ಲಿ ಪ್ರದರ್ಶನ ನೀಡಲಿದೆ. ಒಟ್ಟು 19,800 ಕಿ.ಮೀ. ಸಂಚಾರದ ಮೂಲಕ ಹವಾಮಾನ ಬದಲಾವಣೆಯ ಕುರಿತು ಸಂದೇಶವನ್ನು ನೀಡಲಿದೆ ಎಂದು ದಕ್ಷಿಣ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

Write A Comment