ಕನ್ನಡ ವಾರ್ತೆಗಳು

ಮಲೆಯಾಳಂ ನಟ ಜಿಷ್ಣು ರಾಘವನ್ ವಿಧಿವಶ.

Pinterest LinkedIn Tumblr

Jishnu_ragavan_pic

ಕೊಚ್ಚಿ, ಮಾ. 25: ಮಲಯಾಳಂ ಚಲನಚಿತ್ರ ನಟ ಜಿಷ್ಣು ರಾಘವನ್(35 ) ಇಂದು ನಿಧನರಾಗಿದ್ದಾರೆ. ಬಹಳ ಸಮಯದಿಂದ ಹಿಂದೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಅವರು ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಿಗ್ಗೆ ಕೊಚ್ಚಿ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ.

ಜಿಷ್ಣು, ಹಳೆತಲೆಮಾರಿನ ನಟ ರಾಘವನ್ ಅವರ ಪುತ್ರ. ಅವರು ಪತ್ನಿ ಧನ್ಯ ರಾಜನ್, ಬಂಧುಮಿತ್ರರು, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

1987 ರಲ್ಲಿ ಕಿಳಿಪಾಟ್ ಎಂಬ ಸಿನೆಮಾದಲ್ಲಿ ಬಾಲನಟನಾಗಿ ಅವರು ಮಳೆಯಾಳಂ ಸಿನಿರಂಗವನ್ನು ಪ್ರವೇಶಿಸಿದ್ದರು. ಆನಂತರ ಕಮಲ್‌ರ ನಮ್ಮಲ್ ಎಂಬ ಸಿನೆಮಾದೊಂದಿಗೆ ಅವರು ಸಿನೆಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಮಳೆಯಾಳಂ ತಮಿಳ್ ಸಹಿತ ಇಪ್ಪತ್ತೈದರಷ್ಟು ಸಿನೆಮಾಗಳಲ್ಲಿ ಜಿಷ್ಣು ಅಭಿನಯಿಸಿದ್ದಾರೆ. ಸಿನೆಮಾದಲ್ಲಿ ಸಕ್ರಿಯರಾಗಿದ್ದ ಸಂದರ್ಭದಲ್ಲಿಯೇ ಅವರಿಗೆ ಅರ್ಬುದ ರೋಗವಿರುವುದಾಗಿ ಪತ್ತೆಯಾಗಿತ್ತು. ಇಡಪಳ್ಳಿ ಅಮೃತ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದರು.

ತಂದೆ ರಾಘವನ್ ಮತ್ತು ಬಂಧುಗಳು ಜಿಷ್ಣು ನಿಧನರಾಗುವ ಸಮಯದಲ್ಲಿ ಸಮೀಪ ಇದ್ದರು. ಮಾರ್ಚ್ 5ರಂದು ಜಿಷ್ಣುರ ರೋಗ ಉಲ್ಬಣಿಸಿತ್ತು. ಆನಂತರ ಎರ್ನಾಕುಲಂ ಅಮೃತ ಆಸ್ಪತ್ರೆಗೆ ಸೇರಿಸಲಾಗಿತ್ತು. ಕಳೆದ ದಿವಸ ಮತ್ತೆ ಆರೋಗ್ಯ ಸ್ಥಿತಿ ಗಂಭೀರವಾದ್ದರಿಂದ ಮತ್ತೆ ಐಸಿಯುಗೆ ಸೇರಿಸಲಾಗಿತ್ತು.. ಬಹಳ ದಿನಗಳಿಂದ ಜಿಷ್ಣು ಕ್ಯಾನ್ಸರ್ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಜಿಷ್ಣುವಿಗೆ ಆಸ್ಪತ್ರೆಯಲ್ಲಿ ಏನೋ ತೊಂದರೆ ಆಗಿದೆ ಎಂಬ ಊಹಾಪೋಹಗಳು ಹರಡಿದ್ದವು ಅದಕ್ಕೆಲ್ಲ ಸ್ವಯಂ ಜಿಷ್ಣು ಫೇಸ್ ಬುಕ್ ಮೂಲಕ ಉತ್ತರಿಸಿ ತಾನು ಒಂದು ಬಿಡುವಿನ ನಂತರ ಸಿನೆಮಾರಂಗಕ್ಕೆ ಮರಳಲಿದ್ದೇನೆಂದು ಅಭಿಮಾನಿಗಳಿಗೆ ತಿಳಿಸಿದ್ದರು.

ಚೂಂಡಾ, ಫ್ರೀಡಂ, ಪರಯಾಂ, ನೇರರಿಯಾನ್ ಸಿಬಿಐ, ಪೌರನ್, ಚಕ್ಕರ ಮಧು ಮುಂತಾದ ಪ್ರಸಿದ್ಧ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಕೇರಳ ಫಿಲಂ ಕ್ರಿಟಿಕ್ಸ್ ಅವಾರ್ಡ್‌ಗೂ ಅವರು ಪಾತ್ರರಾಗಿದ್ದರು.

ಉಹಾಪೋಹಗಳನ್ನು ನಿರಾಕರಿಸಿ ಜಿಷ್ಣುವಿನ ಕೆಲವು ಗೆಳೆಯರು ಮೊದಲು ರಂಗಪ್ರವೇಶಿಸಿದ್ದರು. ಆನಂತರ ಜಿಷ್ಣು ಸ್ವಯಂ ಫೇಸ್‌ಬುಕ್ ಸ್ಟೇಟಸ್ ಹಾಕಿದ್ದರು. ಆನಂತರ ಅಭಿಮಾನಿಗಳು ಅವರ ರೋಗಗುಣಮುಖರಾಗಲು ಪ್ರಾರ್ಥಿಸ ತೊಡಗಿದ್ದರು. ಇದರ ನಡುವೆ ಜಿಷ್ಣು ನಿಧನ ಸುದ್ದಿ ಅನಿರೀಕ್ಷಿತವಾಗಿ ಹೊರಬಂದಿದೆ ಎಂದು ವರದಿಗಳು ತಿಳಿಸಿವೆ.

Write A Comment