ಕನ್ನಡ ವಾರ್ತೆಗಳು

ರಾಷ್ಟ್ರೀಯ ಮಾನವ ಹಕ್ಕುಗಳ ಕೇಂದ್ರ : ನೂತನ ಅಧ್ಯಕ್ಷರಾಗಿ ಬಿ. ನಾರಾಯಣ ಎಮ್. ಶೆಟ್ಟಿ ಆಯ್ಕೆ

Pinterest LinkedIn Tumblr

National_women_rights

ಮುಂಬಯಿ : 2015 ರ ಡಿಸೆಂಬರ 4 ರಂದು ನಿಧನಹೊಂದಿದ ರಾಷ್ಟ್ರೀಯ ರಾಷ್ಟ್ರೀಯ ಮಾನವ ಹಕ್ಕುಗಳ ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷರಾಗಿದ್ದ ಶಂಕರ ವಿ. ಶೆಟ್ಟಿ ಯವರ ಅಗಲಿಕೆಯ ನಂತರ ಆ ಸ್ಥಾನದಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು ಮಾ. 20 ರಂದು ಬೊರಿವಲಿ ಪಶ್ಚಿಮದ ಹೋಟೇಲು ವೆಜ್ ಟ್ರೀಟ್ ನಲ್ಲಿ ವಿಶೇಷ ಸಭೆಯನ್ನು ಕರೆಯಲಾಗಿದ್ದು, ಬಿ. ನಾರಾಯಣ ಎಮ್. ಶೆಟ್ಟಿ ಯವರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಕೇಂದ್ರ ದ ನೂತನ ಅಧ್ಯಕ್ಷರನ್ನಾಗಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಇವರು ಕಳೆದ ಹಲವಾರು ವರ್ಷಗಳಿಂದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ಈ ಸಂದರ್ಭದಲ್ಲಿ ಸಮಿತಿಯ ಎಲ್ಲಾ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದ್ದು ಶ್ರೀಮತಿ ಮೊನಿಕಾ ಕೆ. ಡಿ’ಸೋಜಾ ಅವರು ಉಪಾಧ್ಯಕ್ಷರಾಗಿ ಮತ್ತು ಮಕ್ಕಳ ಹಾಗೂ ಮಹಿಳಾ ಕ್ಷೇಮಾಭಿವೃದ್ದಿ ನಿರ್ದೇಶಕಿಯಾಗಿ ಆಯ್ಕೆಯಾಗಿದ್ದಾರೆ. ದಯಾನಂದ ಕೆ. ಶೆಟ್ಟಿಯವರು ಪ್ರಧಾನ ಕಾರ್ಯದರ್ಶಿಯಾಗಿ, ನವೀನ್ ಎಸ್. ಪಾಂಡೆ ರಾಷ್ಟೀಯ ನಿರ್ವಾಹಕ ಕಾರ್ಯದರ್ಶಿಯಾಗಿ, ಟಿ. ಕೆ. ಕೋಟ್ಯಾನ್ ರಾಷ್ಟೀಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಉದ್ಯಮಿ ಪ್ರಭಾಕರ ಆರ್. ಶೆಟ್ಟಿ (ಕಾನೂನು ಮತ್ತು ಸಂಶೋಧನಾ ನಿರ್ದೇಶಕ), ಆನಂದ ಮಾಡ (ಆರೋಗ್ಯ ಮತ್ತು ಸಂಕಷ್ಟ ಪರಿಯಾರ ನಿರ್ದೇಶಕ), ಪ್ರಭಾಕರ ಬಿ. ಶೆಟ್ಟಿ (ಅಪರಾಧ ಮತ್ತು ಎಚ್ಚರಿಕೆ ನಿರ್ದೇಶಕ), ಪತ್ರಕರ್ತ ಪ್ರೇಮನಾಥ ಶೆಟ್ಟಿ, ಮುಂಡ್ಕೂರು (ಮಾಧ್ಯಮ ಮತ್ತು ಪ್ರಚಾರ ನಿರ್ದೇಶಕ), ಪತ್ರಕರ್ತ ಈಶ್ವರ ಎಂ. ಐಲ್ (ಪಿ.ಆರ್.ಓ.), ಲಕ್ಷಣ ಪೂಜಾರಿ (ರಾಷ್ಟ್ರೀಯ ಸುರಕ್ಷಾ ಮತ್ತು ತಿಳುವಳಿಕೆ ನಿರ್ದೇಶಕ ಹಾಗೂ ರಾಜ್ಯಾಧ್ಯಕ್ಷ), ಸ್ಟಿಫನ್ ರಾಣೆ (ಮಾಹಿತಿ ನಿರ್ದೇಶಕ), ಶಿವರಾಮನ್ ಐಯರ್ (ಕಾನೂನು ಸಲಹೆಗಾರ) ಮತ್ತು ರಾಜ್ಯ ಮಟ್ಟದ ಇತರ ಕೆಲವು ಅಧಿಕಾರಿಗಳನ್ನು ನೇಮಿಸಲಾಯಿತು.

ನೂತನ ಅಧ್ಯಕ್ಷರಾಗಿ ಆಯ್ಕೆಯಾಗುದಕ್ಕೆ ಮೊದಲು ಬಿ. ನಾರಾಯಣ ಎಮ್. ಶೆಟ್ಟಿ ಅವರು ಎಲ್ಲರನ್ನು ಸ್ವಾಗತಿಸಿ ಸ್ಥಾಪಕ ಅಧ್ಯಕ್ಷರಾಗಿದ್ದ ದಿ. ಶಂಕರ ವಿ. ಶೆಟ್ಟಿ ಯವರ ಸಾಧನೆಯನ್ನು ಬಣ್ಣಿಸಿದರು. ಉಪಧ್ಯಕ್ಷೆ ಶ್ರೀಮತಿ ಮೊನಿಕಾ ಕೆ. ಡಿ’ಸೋಜಾ ಅವರು ಮಾತನಾಡುತ್ತಾ ನಿಸ್ವಾರ್ಥ ಸೇವೆಯೆ ನಮ್ಮ ಸಂಘಟನೆಯ ಮೂಲ ಗುರಿಯಾರಿದ್ದು ಅದನ್ನು ಎಲ್ಲರೂ ಪಾಲಿಸುದರೊಂದಿಗೆ ಅನ್ಯಾಯದ ವಿರುದ್ದ ನಾವೆಲ್ಲರೂ ಹೋರಾಡಬೇಕಾಗಿದೆ ಎಂದು ತಿಳಿಸಿದರು. ಸ್ಟಿಫನ್ ರಾಣೆ ಸಭೆಯನ್ನು ನಿರ್ವಹಿಸಿದರು.

Write A Comment