ಉಡುಪಿ: ಮಾನವನ ಜೀವನದ ಸಂಸ್ಕಾರಗಳಲ್ಲಿ ವಿವಾಹ ಕಾರ್ಯವೂ ಕೂಡ ಅತ್ಯಮೂಲ್ಯವಾಗಿದ್ದು, ತಮ್ಮ ಜೀವನ ಸಂಗಾತಿಗಳನ್ನು ಹುಡುಕಿಕೊಳ್ಳಲು ಹಾಗೂ ಉತ್ತಮ ಜೀವನ ನಡೆಸಲು ಸಮರ್ಪಕ ವೇದಿಕೆ ನಿರ್ಮಿಸುವ ನಿಟ್ಟಿನಲ್ಲಿ ದೇವಾಡಿಗ ಸಮಾಜದವರಿಗಾಗಿ ಭಾನುವಾರ ಸಂಜೆ ಬಾರಕೂರಿನ ಶ್ರೀ ಏಕನಾಥೇಶ್ವರಿ ದೇವಸ್ಥಾನ ವಠಾರದಲ್ಲಿ ಶ್ರೀ ಏಕನಾಥೇಶ್ವರಿ ವಧುವರಾನ್ವೇಷಣೆ ವೇದಿಕೆ ಉದ್ಘಾಟಿಸಲಾಯಿತು.

ಈ ಸಂದರ್ಭ ದೇವಾಡಿಗ ಸಂಘ ಮುಂಬೈಯ ಗೌರವ ಜೊತೆ ಕಾರ್ಯದರ್ಶಿ ಗಣೇಶ್ ಶೇರಿಗಾರ್ ಮುಂಬೈ ಪ್ರಾಸ್ತಾವಿಕವಾಗಿ ಮಾತನಾಡಿ, ಸೂಕ್ತ ವಧು ಹಾಗೂ ವರರ ಅನ್ವೇಷಣೆಗೆ ದೇವಾಡಿಗ ಸಮಾಜ ಬಂಧುಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಸಮಾಜದ ಚಿಂತಕರ ನಿರ್ದೇಶನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ವಧು-ವರರ ವಿಚಾರಗಳ ಬಗ್ಗೆ ಪರಸ್ಪರ ಮುಕ್ತ ಚರ್ಚೆಗೆ ಅವಕಾಶಗಳಿದ್ದು ದೇವಾಡಿಗ ಸಮಾಜದ ಆಸಕ್ತರು ಇದರ ಸಧುಪಯೋಗವನ್ನು ಪಡೆದುಕೊಳ್ಳಬೇಕೆಂದು ಅವರು ಈ ಸಂದರ್ಭ ವಿವರಿಸಿದರು.ಅಲ್ಲದೇ ಸ್ಥಳೀಯ ಸಂಘಗಳು ಈ ಬಗ್ಗೆ ಆಸಕ್ತರ ಹಾಗೂ ಅಗತ್ಯವುಳ್ಳವರ ಗಮನಕ್ಕೆ ತರುವ ಕೆಲಸ ನಿರ್ವಹಿಸಬೇಕೆಂದರು.


ರವಿ ದೇವಾಡಿಗ ತಲ್ಲೂರು ಮಾತನಾಡಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ವಧು ವರರು ನೀಡಿರುವ ಅರ್ಜಿಯಲ್ಲಿ ಸ್ವವಿವರಗಳನ್ನು ಬರೆದು ತಮ್ಮ ಭಾವಚಿತ್ರ ಹಾಗೂ ಜಾತಕಗಳನ್ನು ಅರ್ಜಿಯೊಂದಿಗೆ ಲಗ್ಗತ್ತಿಸಬೇಕು. ಸಂಬಂಧಗಳು ಏರ್ಪಟ್ಟ ತರುವಾಯದ ಎಲ್ಲಾ ತೀರ್ಮಾನಗಳು ಹೆತ್ತವರು ಮತ್ತು ಪೋಷಕರಾಗಿದ್ದು ಯಾವುದೇ ಮಧ್ಯವರ್ತಿಗಳಿಗೆ ಆಸ್ಪದ ನೀಡಲಾಗಿಲ್ಲ. ಅರ್ಜಿ ಸಲ್ಲಿಕೆಗೆ ಎ.30 ಕೊನೆ ದಿನ ಎಂದು ಮಾಹಿತಿ ನೀಡಿದರು.
ವಧುವರರ ಸಮಾವೇಶವನ್ನು ಮೇ ತಿಂಗಳ 22 ರಂದು ಬಾರಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನದಲ್ಲಿಯೇ ಹಮ್ಮಿಕೊಳ್ಳುವದು ಮತ್ತು ಈ ಸಮಾವೇಶದ ಪ್ರಾಯೋಜಕತ್ವಕ್ಕಾಗಿ ಶ್ರೀ ಏಕನಾಥೇಶ್ವರೀ ದೇವಸ್ಥಾನ ನಿರ್ಮಾಣ ಸಮಿತಿ ಸಹಕರಿಸುವುದು. ಕಾರ್ಯಕ್ರಮವನ್ನು ಎಲ್ಲರಿಗೂ ತಲಪುವ ನಿಟ್ಟಿನಲ್ಲಿ ವಾಟ್ಸಾಪ್ ಸೇರಿದಂತೆ ಸಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪ್ರಚಾರ ಕಾರ್ಯ ಮಾಡುವ ಬಗ್ಗೆಯೂ ಒಮ್ಮತದ ಅಭಿಪ್ರಾಯವನ್ನು ಮಂಡಿಸಲಾಯಿತು. ಅಲ್ಲದೇ ಶ್ರೀ ಏಕನಾಥೇಶ್ವರಿ ವಧುವರಾನ್ವೇಷಣೆ ವೇದಿಕೆಯ ಪದಾಧಿಕಾರಿಗಳ ತಾತ್ಕಾಲಿಕ ಸಮಿತಿ ರಚಿಸಲಾಯಿತು.

ಇದೇ ಸಂದರ್ಭ ವಧು-ವರರ ಮಾಹಿತಿ ಬಗೆಗಿನ ಅರ್ಜಿಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾರಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನ ವಿಶ್ವಸ್ಥ ಮಂಡಳಿ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ವಿಶ್ವಸ್ಥರಾದ ಹಿರಿಯಡಕ ಮೋಹನದಾಸ್, ನರಸಿಂಹ ದೇವಾಡಿಗ, ಜನಾರ್ಧನ ದೇವಾಡಿಗ ಉಪ್ಪುಂದ, ಜನಾರ್ಧನ ದೇವಾಡಿಗ ಬಾರ್ಕೂರು ಮೊದಲಾದವರು ಉಪಸ್ಥಿತರಿದ್ದರು.
ಸಮಿತಿ ರಚನೆ: ಶ್ರೀ ಏಕನಾಥೇಶ್ವರಿ ವಧುವರಾನ್ವೇಷಣೆ ವೇದಿಕೆ ಅಧ್ಯಕ್ಷರಾಗಿ ನಾರಾಯಣ ದೇವಾಡಿಗ ಕುಂದಾಪುರ, ಗೌರವಾಧ್ಯಕ್ಷರಾಗಿ ಜನಾರ್ಧನ ದೇವಾಡಿಗ ಉಪ್ಪುಂದ, ಕಾರ್ಯದರ್ಶಿಯಾಗಿ ರವಿ ದೇವಾಡಿಗ ತಲ್ಲೂರು, ಉಪಾಧ್ಯಕ್ಷರುಗಳಾಗಿ ಬ್ರಹ್ಮಾವರದಿಂದ ಮುರ್ಡೇಶ್ವರ ತನಕದ ಎಲ್ಲಾ ದೇವಾಡಿಗ ಸಂಘಗಳ ಅಧ್ಯಕ್ಷರು, ಗೌರವ ಸಲಹೆಗಾರರಾಗಿ ಗಣೇಶ್ ಶೇರಿಗಾರ್ ಮುಂಬೈ, ಶಂಕರ ಅಂಕದಕಟ್ಟೆ, ಪುರುಷೋತ್ತಮ ಉಪ್ಪುಂದ, ನಾಗರಾಜ ದೇವಾಡಿಗ ಹಂಗಾರಕಟ್ಟೆ, ಮಹೇಶ್ ದೇವಾಡಿಗ ಹಟ್ಟಿಯಂಗಡಿ, ರಾಘವೇಂದ್ರ ದೇವಾಡಿಗ ಬೈಂದೂರು, ಶೇಖರ ದೇವಾಡಿಗ ಬ್ರಹ್ಮಾವರ,ಚಂದ್ರ ದೇವಾಡಿಗ ಬೆಂಗಳೂರು ಇವರುಗಳನ್ನು ಜೊತೆಕಾರ್ಯದರ್ಶಿಗಳಾಗಿ, ಪ್ರಚಾರ ಸಂಪರ್ಕ ಯೋಗೀಶ್ ಕುಂಭಾಸಿ ಅವರನ್ನು ಆಯ್ಕೆ ಮಾಡಲಾಯಿತು.
ಸಂಪರ್ಕಕ್ಕಾಗಿ: ಆಸಕ್ತರು ಸಮಿತಿ ಅಧ್ಯಕ್ಷರು ಅಥವಾ ಬ್ರಹ್ಮಾವರದಿಂದ ಮುರ್ಡೇಶ್ವರ ತನಕದ ಎಲ್ಲಾ ದೇವಾಡಿಗ ಸಂಘದ ಅಧ್ಯಕ್ಷರು ಮತ್ತು ಜೊತೆಕಾರ್ಯದರ್ಶಿಗಳನ್ನು ಸಂಪರ್ಕಿಸಬಹುದು. ಗಣೇಶ ಶೇರಿಗಾರ್ ಮುಂಬೈ-9004130192, ರವಿ ದೇವಾಡಿಗ ತಲ್ಲೂರು -9008994045, ಶಂಭು ಶೇರಿಗಾರ್-9449068658,ನಾರಾಯಣ ದೇವಾಡಿಗ ಕುಂದಾಪುರ-9448548806, ರಾಘವೇಂದ್ರ ದೇವಾಡಿಗ ಬೈಂದೂರು-9449754929, ದಿನೇಶ್ ದೇವಾಡಿಗ ನಾಗೂರು- 9739055141, ಸತೀಶ ಎಮ್ ಬಿಜೂರು-9964586122, ನಾಗರಾಜ ಶಂಕರನಾರಾಯಣ-9964215394, ಚಂದ್ರ ದೇವಾಡಿಗ ಕೋಟೇಶ್ವರ-9480433218, ನರಸಿಂಹ ದೇವಾಡಿಗ ಕೋಟ-9980946587, ಮಂಜುನಾಥ ಚಿತ್ತೂರು-9686684567,ಪುರುಷೋತ್ತಮದಾಸ್ ಉಪ್ಪುಂದ- 9742019893, ಜೆ.ಪಿ. ಬಡಾಕೆರೆ- 9964095305, ಚಂದ್ರ ದೇವಾಡಿಗ ಬೆಂಗಳೂರು- 9342688388, ಶಂಕರ ಅಂಕದಕಟ್ಟೆ-9620450111, ಪ್ರಚಾರ ಸಂಪರ್ಕ- ಯೋಗೀಶ್ ಕುಂಭಾಸಿ- 9964062625.