ಕನ್ನಡ ವಾರ್ತೆಗಳು

ಪ್ಲಾಸ್ಟಿಕ್ ಬಳಕೆಯನ್ನು ಎ.15 ರೊಳಗೆ ಸ್ಥಗೀತಗೊಳಿಸಲು ಉತ್ಪನ್ನಕಾರರಿಗೆ ಜಿಲ್ಲಾಧಿಕಾರಿ ಸೂಚನೆ .

Pinterest LinkedIn Tumblr

Dc_meet_photo_1

ಮಂಗಳೂರ,ಮಾ.19: ಕರ್ನಾಟಕ ರಾಜ್ಯ ಪತ್ರದ ಮೂಲಕ ರಾಜ್ಯದಲ್ಲಿ ನಿಷೇದಿಸಲಾಗಿರುವ ಪ್ಲಾಸ್ಟಿಕ್‌ಗಳ ಉತ್ಪಾದನೆಯನ್ನು ಇಂದಿನಿಂದಲೇ ಸ್ಥಗೀತಗೊಳಿಸುವಂತೆ ಉತ್ಪಾದಕರಿಗೆ ಸೂಚನೆ ನೀಡಿರುವ ದ.ಕ ಜಿಲ್ಲಾಧಿಕಾರಿ ಎ.ಬಿ ಇಬ್ರಾಹೀಂ ಎಪ್ರೀಲ್ 15ರಿಂದ ಇದು ಕಟ್ಟುನಿಟ್ಟಾಗಿ ಜಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಕರು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಸರಕಾರೇತರ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಭೆ ನಡೆಸಲಾಯಿತು, ಮಾತ್ರವಲ್ಲದೆ ಈಗಾಗಲೇ ತಯಾರಾಗಿರುವ ಈ ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಮಾರ್ಚ್‌ 31ರೊಳಗೆ ಮಾರಾಟ ಮಾಡಿ ಮುಗಿಸಬೇಕು. ಏಪ್ರಿಲ್ 15ರಿಂದ ಜಿಲ್ಲೆಯಲ್ಲಿ ಈ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ ಹಾಗೂ ಮಾರಾಟ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲಾಧಿಕಾರಿ ಸೂಚನೆ ನೀಡಿದರು.

Dc_meet_photo_2 Dc_meet_photo_3 Dc_meet_photo_4 Dc_meet_photo_5 Dc_meet_photo_6 Dc_meet_photo_7 Dc_meet_photo_8 Dc_meet_photo_9 Dc_meet_photo_10

ಅತೀ ಕಡಿಮೆ ಅವಧಿಯಲ್ಲಿ ಈಗಾಗಲೇ ಉತ್ಪಾದನೆಯಾಗಿರುವ ವಸ್ತುಗಳನ್ನು ಖಾಲಿ ಮಾಡಲು ಅಸದ್ಯ, ಕನಿಷ್ಠ ಮೂರು ತಿಂಗಳ ಕಾಲಾವಕಾಶವನ್ನು ಒದಗಿಸಿದರೇ ಮಾತ್ರ ಉತ್ಪಾದನೆಯನ್ನು ಇಂದಿನಿಂದಲೇ ನಿಲ್ಲಿಸಲು ಬದ್ದ ಎಂದು ಮನವಿ ಮಾಡಿದರು.

ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಗಳಿಗೆ ಪರ್ಯಾಯವಾಗಿ ಬಟ್ತೆ , ಸೆಣಬು ಮೊದಲಾದ ಮಣ್ಣಿನಲ್ಲಿ ಕರಗಬಲ್ಲ ಕೈಚೀಲಗಳನ್ನು ತಯಾರಿಸುವ ಮೂಲಕ ಉದ್ಯೋಗವೂ ಸೃಷ್ಟಿಯಾಗಲಿದೆ ಎಂದು ಜಿಲ್ಲಾಧಿಕಾರಿ ನುಡಿದರು.

ದೇವಗಳಲ್ಲಿ 7 ದಿನಗಳಲ್ಲಿ ಬಟ್ಟೆಚೀಳಗಳನ್ನು ಪೊರೈಸಲು ಕ್ರಮ :
ಪ್ರಸ್ತುತ ದೇವಸ್ಥಾನಗಳಲ್ಲಿ ಪ್ರಸಾದ ನೀಡಲು ನಾನ್ ಓವನ್ ಕ್ಯಾರಿ ಬ್ಯಾಗ್ ಗಳನ್ನು ಬಳ್ಕಎ ಮಾಡಲಾಗುತ್ತಿದೆ. ಇದು ಕೂಡಾ ನಿಷೇದಿತ ಪ್ಲಾಸ್ಟಿಕ್ ಪದಾರ್ಥವಾಗಿದ್ದು, ಇದರ ಬದಲಿಗೆ ಬಟ್ಟೆ ಚೀಲಗಳನ್ನು ವಿತರಿಸಲು ಏಳು ಕ್ರಮ ಕೈಗೊಳ್ಳಲಾಗುವುದು. ಕೆಲವೊಂದು ದೇವಸ್ಥಾನಗಳಲ್ಲಿ ಈಗಾಗಲೇ ಬಟ್ಟೆ ಚೀಲಗಳ ಬಳಕೆಯಾಗುತ್ತಿದೆ ಎಂದು ಹೆಚ್ಚಿವರಿ ಜಿಲಾಧಿಕಾರಿ ಕುಮಾರ್ ತಿಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಮನಪಾ ಆಯುಕ್ತ ಡಾ. ಹೆಚ್.ಎನ್. ಗೋಪಾಲಕೃಷ್ಣ, ಜಂಟಿ ಆಯುಕ್ತ ಗೋಕುಲ್‌ದಾಸ್ ನಾಯಕ್, ಪುತ್ತೂರು ಸಹಾಯಕ ಆಯುಕ್ತ ರಾಜೇಂದ್ರ ಮೊದಲಾದವರು ಉಪಸ್ಥಿತರಿದ್ದರು.

Write A Comment