ಕನ್ನಡ ವಾರ್ತೆಗಳು

ಸ್ವ‌ಉದ್ಯೋಗ ಯೋಜನೆಯಡಿ ಫಲಾನುಭವಿಗಳಿಗೆ ಅಟೋರಿಕ್ಷಾ ಖರೀದಿಗೆ ಸಹಾಯಧನ ಹಾಗೂ ಪರವಾನಿಗೆ .

Pinterest LinkedIn Tumblr

autorickshaw_1

ಮ೦ಗಳೂರು ಮಾ.11 : ಮಂಗಳೂರು ನಗರದಲ್ಲಿ ಸ್ವ-ಉದ್ಯೋಗದ ಅಡಿಯಲ್ಲಿ ವಿವಿಧ ನಿಗಮಗಳಿಂದ ಮಂಜೂರಾಗಿರುವ ಆಟೋರಿಕ್ಷಾಗಳು ನಿಯಮ ಬಾಹಿರವಾಗಿ ಸಂಚರಿಸುತ್ತಿರುವುದಾಗಿ ದೂರು ಬರುತ್ತಿವೆ.

ಸ್ವ-ಉದ್ಯೋಗ ಯೋಜನೆಯಡಿಯಲ್ಲಿ ಆಟೋರಿಕ್ಷಾ ಖರೀದಿಗಾಗಿ ಸರ್ಕಾರದಿಂದ ಸಹಾಯ ಧನ ಅಥವಾ ಸಾಲ ಮಂಜೂರಾದ ಫಲಾನುಭವಿಗಳಿಗೆ ಅನುಕೂಲವಾಗುವಂತೆ ನಗರ ವ್ಯಾಪ್ತಿಯಲ್ಲಿ ಸಂಚರಿಸಲು ಆಟೋರಿಕ್ಷಾ ಪರವಾನಿಗೆ ನೀಡಲಾಗುತ್ತಿದೆ.

ಯಾರು ಸ್ವ-ಉದ್ಯೋಗದಡಿ ಆಟೋರಿಕ್ಷಾ ಪರವಾನಿಗೆ ಪಡೆದಿರುತ್ತಾರೋ ಅವರೇ ಅದನ್ನು ದುಡಿಯಬೇಕೆಂಬ ಷರತ್ತಿನೊಂದಿಗೆ ನೀಡಲಾಗುತ್ತಿದೆ. ಕಾನೂನು ಬಾಹಿರವಾಗಿ ಸಂಚರಿಸುತ್ತಿರುವ ಇಂತಹ ಆಟೋರಿಕ್ಷಾಗಳನ್ನು ತಪಾಸಣೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಉಪ ಪ್ರಾದೇಶಿಕ ಆಯುಕ್ತ ಜಿ.ಎಸ್. ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Write A Comment