ಉಡುಪಿ: ದೇವಾಡಿಗ ಯುವ ವೇದಿಕೆ (ರಿ.) ಇವರ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಉಡುಪಿಯ ಶಾರದಾ ಕಲ್ಯಾಣ ಮಂಟಪದಲ್ಲಿ ದೇವಾಡಿಗ ಸಮ್ಮೇಳನ ಕಾರ್ಯಕ್ರಮ ನಡೆಯಿತು.
ವೇಣಿ ಮರೋಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾವೆಶದಲ್ಲಿ ಸಮಾಜದ ಅಭಿವ್ರದ್ಧಿಗಾಗಿ ಹಾವಾರು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಹಲವು ವರ್ಷಗಳಿಂದ ದೇವಸ್ಥಾನದ ಕೆಲಸ ಕಾರ್ಯಗಳಲ್ಲಿ ಸೇವೆಯನ್ನು ಮಾಡುತ್ತಾ ಬಂದಿರುವ ಕುಟುಂಬಕ್ಕೆ ಆರ್ಥಿಕ ಭದ್ರತೆ, ಕುಟುಂಬ ಸದಸ್ಯರಿಗೆ ವಿಮೆ, ವೈದ್ಯಕೀಯ ಹಾಗೂ ಶೈಕ್ಷಣಿಕ ಸವಲತ್ತು ದೊರಕುವ ಸಲುವಾಗಿ ಸರಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. ಅಲ್ಲದೇ ಸಮಾಜದವರು ವಾಸಿಸುವ ಕುಗ್ರಾಮಕ್ಕೂ ಸಂಪರ್ಕಿಸಿ ಅವರ ಕಷ್ಟಸುಖಗಳನ್ನು ಅರಿಯಲು ಸಹಕಾರಿಯಾಗುವಂತೆ ಮತ್ತು ಎಲ್ಲರೂ ಸಮಾಜದ ಒಡನೆ ನಿಕಟ ಸಂಪರ್ಕವನ್ನು ಹೊಂದಲು ಸಾಧ್ಯವಾಗುವಂತೆ ವಿಶ್ವ ದೇವಾಡಿಗ ಒಕ್ಕೂಟ ಸ್ಥಾಪನೆಗಾಗಿ ಈಗಾಗಲೇ ಮಂಗಳೂರು, ಉಡುಪಿ, ಮೂಡುಬಿದಿರೆ ಹಾಗೂ ಮುಂಬೈಗಳಲ್ಲಿ ಸಭೆ ನಡೆಸಿದ್ದು ಇದಕ್ಕಾಗಿ ಈ ಸಮಾವೇಶದಲ್ಲಿ ಅರ್ಹ ಸಮಿತಿ ರಚಿಸಲಾಯಿತು.






ಸಾಧಕರಿಗೆ ಸನ್ಮಾನ
ಸಮಾರಂಭದಲ್ಲಿ ಸುವರ್ಣಾ ನ್ಯೂಸ್ ಕವರ್ ಸ್ಟೋರಿ ವಿಭಾಗದ ವಿಜಯಲಕ್ಷ್ಮಿ ಶಿಬರೂರು ಅವರಿಗೆ ದೇವಾಡಿಗ ಯುವ ಸಾಧಕಿ-೨೦೧೬ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಅಲ್ಲದೇ ಚುನಾವಣೆಯಲ್ಲಿ ಗೆದ್ದ ದೇವಾಡಿಗ ಸಮಾಜದ ಜಿಲ್ಲಾಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ತಾ.ಪಂ. ಸದಸ್ಯರಾದ ರಾಜು ದೇವಾಡಿಗ ತ್ರಾಸಿ, ಕೇಶವ ಮೊಯ್ಲಿ, ಸುಜಾತಾ ದೇವಾಡಿಗ, ಪ್ರಮೀಳಾ, ಜಗದೀಶ್ ದೇವಾಡಿಗ, ಜೀವನಪ್ರಕಾಶ್ ಅವರನ್ನು ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರು ದೇವಾಡಿಗ ಸಂಘದ ರಜನಿಕಾಂತ್ ಕುಡ್ಪಿ, ಬಿ.ಎಸ್. ಶೇರಿಗಾರ್, ಪ್ರೇಮಾ ಎಸ್. ದೇವಾಡಿಗ, ಕುಂದಾಪುರದಿಂದ ಶಶಿಕಲಾ ಎನ್ ದೇವಾಡಿಗ, ಶ್ರೀದರ್ ದೇವಾಡಿಗ, ಕಾರ್ಕಳ ಸಂಘದ ರವೀಂದ್ರ ಮೊಯ್ಲಿ, ಮೂಡುಬಿದ್ರೆಯ ರತ್ನಾಕರ ಮೊಯ್ಲಿ, ಬ್ರಹ್ಮಾವರದ ಶಂಭು ಶೇರಿಗಾರ್, ಬೈಂದೂರು ಗಿರೀಶ್ ದೇವಾಡಿಗ, ಬೆಳ್ಮಣ್ ವಸಂತಕುಮಾರ್ ನಿಟ್ಟೆ, ಬಾರುಕೂರಿನ ಸುರೇಶ್ ಕುಮಾರ್, ಶ್ರೀ ಏಕನಾಥೇಶ್ವರೀ ದೇವಸ್ಥಾನ ಸಮಿತಿಯ ಜನಾರ್ಧನ ದೇವಾಡಿಗ, ನರಸಿಂಹ ದೇವಾಡಿಗ, ಹಿರಿಯಡ್ಕದ ನಾರಾಯಣ ಶೇರಿಗಾರ್, ಕೋಟೇಶ್ವರದ ಚಂದ್ರ ದೇವಾಡಿಗ, ಕಟಪಾಡಿಯ ಮನೋಹರ್ ದೇವಾಡಿಗ, ಬೆಂಗಳೂರಿನಿಂದ ಚರಣ್ ಬೈಂದೂರು ಮೊದಲಾದವರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ವಾಮನ ಮರೋಳಿ ಮಂಗಳೂರು, ನಾರಾಯಣ ದೇವಾಡಿಗ ಕುಂದಾಪುರ, ಶ್ರೀ ಏಕನಾಥೇಶ್ವರೀ ದೇವಸ್ಥಾನ ಸಮಿತಿಯ ಅಧ್ಯಕ್ಷ ಅಣ್ಣಯ್ಯ ಸೇರಿಗಾರ್, ನಿವೃತ್ತ ಪ್ರಾಂಶುಪಾಲೆ ಡಾ| ಮಾಧವಿ ಭಂಡಾರಿ, ನ್ಯಾಯವಾದಿ ಹಾಗೂ ಉಚ್ಛ ನ್ಯಾಯಾಲಯದ ಶಿಕ್ಷಣ ಇಲಾಖೆಯ ಕಾನೂನು ಅಧಿಕಾರಿ ವನಿತಾ ಯು.ಎಮ್. ಬೆಂಗಳೂರು ಇವರುಗಳು ಉಪಸ್ಥಿತರಿದ್ದರು.
ಯುವ ವೇದಿಕೆ ಅಧ್ಯಕ್ಷ ಕಾರ್ತಿಕ್ ಕುಮಾರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ದೇವಾಡಿಗ ವರದಿ ಮಂಡಿಸಿದರು. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿ, ಯುವವೇದಿಕೆ ಕೋಶಾಧಿಕಾರಿ ಪ್ರವೀಣ್ ಕುಮಾರ್ ವಂದಿಸಿದರು
ವಿಶ್ವ ದೇವಾಡಿಗ ಮಹಿಳಾ ದಿನಾಚರಣೆ
ದೇವಾಡಿಗ ಯುವ ವೇದಿಕೆಯ ವತಿಯಿಂದ ಉಡುಪಿ ಶಾರದಾ ಮಂಟದದಲ್ಲಿ ಜರಗಿದ ವಿಶ್ವ ದೇವಾಡಿಗ ಮಹಿಳಾ ವಿಚಾರ ಸಂಕಿರಣ ಮತ್ತು ದೇವಾಡಿಗ ಸಮ್ಮೇಳನವನ್ನು ನಿವೃತ್ತ ಪ್ರಾಂಶುಪಾಲೆ ಡಾ| ಮಾಧವಿ ಭಂಡಾರಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ದೇಶೀಯ ಮತ್ತು ಪಾಶ್ಚಾತ್ಯ ಮಹಿಳೆಯರ ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರದಲ್ಲಿರುವ ವ್ಯತ್ಯಾಸಗಳನ್ನು ಗುರುತಿಸಿಕೊಳ್ಳುವ ಅಗತ್ಯವಿದೆ. ಇಂದು ದುಡಿಯುವ ಮಹಿಳೆಯರು ಸೇರಿದಂತೆ ಸಮಸ್ತ ಮಹಿಳೆಯರಿಗಾಗಿ ಇಂತಹ ಆಚರಣೆಗಳ ಅವಶ್ಯಕತೆ ಇದೆ ಎಂದರು. ಭ್ರೂಣ ಹತ್ಯೆ, ಮಕ್ಕಳೊಂದಿಗೆ ಸೇರಿ ತಾಯಿ ಆತ್ಮಹತ್ಯೆಮಾಡಿಕೊಳ್ಳುವ ವಿಚಾರವು ಅತ್ಯಂತ ಖೇದರಕರವೆಂದು ತಿಳಿಸಿದ ಅವರು ಈ ಬಗ್ಗೆ ಮಹಿಳೆಯರು ಜಾಗೃತರಾಗಬೇಕು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಿವಿಧ ದೇವಾಡಿಗ ಸಂಘಗಳ ಪ್ರತಿನಿಧಿಗಳಾದ ಗೀತಾ ಕಲ್ಯಾಣಪುರ, ವೇಣಿ ಮರೋಳಿ, ಸಾವಿತ್ರಿ ರಾಮದೇವಾಡಿಗ, ಲಲಿತಾ ಮುದ್ದಣ್ಣ, ಗೀತಾ ಬಾರಕೂರು, ಜ್ಯೋತಿ ಪ್ರಶಾಂತ್, ವನಿತಾ ಬೆಂಗಳೂರು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸ್ಮಿತಾ ಸ್ವಾಗತಿಸಿದರು.