ಕನ್ನಡ ವಾರ್ತೆಗಳು

ಅಸಲಿ – ನಕಲಿ : ಭಾರತಕ್ಕೂ ರಪ್ತು ಅಗಲಿದೆ ಚೀನಾದ ಮೊಟ್ಟೆ

Pinterest LinkedIn Tumblr

eggs_image

ನವದೆಹಲಿ, ಮಾ.05 : ಅಸಲಿಯನ್ನೇ ಹೋಲುವ ನಕಲಿ ವಸ್ತುಗಳನ್ನು ತಯಾರಿಸುವಲ್ಲಿ ಸದಾ ಮುಂದಿರುವ ಚೀನಾ ದೇಶ ಸದ್ಯ ನಕಲಿ ಮೊಟ್ಟೆಗಳನ್ನು ಭಾರತಕ್ಕೆ ರಫ್ತು ಮಾಡುವ ತರಾತುರಿಯಲ್ಲಿದೆ. ದೇಶದ ಕೆಲವು ಭಾಗಗಳಲ್ಲಿ ಈಗಾಗಲೇ ನಕಲಿ ಮೊಟ್ಟೆಗಳ ಮಾರಾಟ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆಯಾದರೂ ಅದಿನ್ನೂ ಖಚಿತಪಟ್ಟಿಲ್ಲ. ಆದರೆ ಚೀನಾದಲ್ಲಿ ಈ ಮೊಟ್ಟೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದನೆ ಮಾಡಲಾಗುತ್ತಿದ್ದು ಸಖತ್ ಡಿಮ್ಯಾಂಡ್ ಪಡೆದುಕೊಂಡಿದೆಯಂತೆ.

ನಕಲಿ ಮೊಟ್ಟೆ ತಯಾರಾಗೋದು ಹೀಗೆ: ಜಿಪ್ಸಂ ಮಿಶ್ರಣ, ಕ್ಯಾಲ್ಸಿಯಂ ಕಾರ್ಬೊನೇಟ್, ತೈಲಯುಕ್ತ ಮಿಶ್ರಣದಿಂದ ಮೊಟ್ಟೆಯ ಹೊರಗಿನ ಕವಚವನ್ನು ತಯಾರು ಮಾಡಲಾಗುತ್ತದೆ. ಇನ್ನು ಮೊಟ್ಟೆಯ ಒಳಗಿನ ಹಳದಿ ಬಣ್ಣದ ಭಾಗವನ್ನು ಜಿಲೆಟಿನ್, ಸೋಡಿಯಂ ಎಲ್ಗಿನಾಯಿಟ್, ಅಲ್ಯೂಮ್ ಮತ್ತು ಕ್ಯಾಲ್ಸಿಯಂ ಬಳಸಿಕೊಂಡು ತಯಾರಿಸಲಾಗುತ್ತದೆ. ಮನುಷ್ಯನಿಗೆ ಎಷ್ಟು ಅವಶ್ಯವೋ ಅಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಅನ್ನು ಬಳಕೆ ಮಾಡಲಾಗುತ್ತದೆ. ಇನ್ನು ಮೊಟ್ಟೆಗೆ ಅಸಲಿ ಬಣ್ಣವನ್ನೇ ನೀಡುವ ಉದ್ದೇಶದಿಂದ ಫುಡ್ ಕಲರ್ ಅನ್ನೂ ಬಳಕೆ ಮಾಡಲಾಗುತ್ತಿದ್ದು, ಇವುಗಳು ಮೇಲ್ನೊಟಕ್ಕೆ ಅಸಲಿಯಂತೆಯೇ ಗೋಚರಿಸುತ್ತವೆ. ನೀರಿಗೆ ಸೋಡಿಯಂ ಎಲ್ಗಿನಾಯಿಟ್ ಮಿಶ್ರಣ ಮಾಡಲಾಗುತ್ತದೆ. ಬಳಿಕ ಜಿಲೆಟಿನ್, ಬೆಂಜೋಯಿಕ್ ಆಮ್ಲ, ಅಲ್ಯೂಮ್ ಹಾಗೂ ಇತರ ವಸ್ತುಗಳನ್ನು ಬಳಸಿ ಮೊಟ್ಟೆಯನ್ನು ತಯಾರು ಮಾಡಲಾಗುತ್ತದೆ.

ಆನಂತರ ಆ ಮಿಶ್ರಣಕ್ಕೆ ಲಿಂಬೆರಸ ಮಿಶ್ರಣ ಮಾಡಿ ಕೊನೆಗೆ ಮೊಟ್ಟೆಯ ರೂಪ ಬರಲು ಕ್ಯಾಲ್ಸಿಯಂ ಕ್ಲೋರೈಡ್ ಅನ್ನು ಉಪಯೋಗಿಸಲಾಗುತ್ತದೆ. ನಕಲಿ ಮೊಟ್ಟೆಗಳಿಗೆ ಚೀನಾದಲ್ಲಿ ಸಾಕಷ್ಟು ಡಿಮ್ಯಾಂಡ್ ಇದ್ದು, ಗ್ರಾಹಕರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರಂತೆ. ಭಾರತರ ಮಾರುಕಟ್ಟೆಗೂ ಸದ್ಯದಲ್ಲೇ ಈ ಮೊಟ್ಟೆಗಳು ಬರಲಿದ್ದು, ಗ್ರಾಹಕರು ಖರೀದಿ ಮಾಡುವ ಮೊಟ್ಟೆಗಳು ಅಸಲಿಯೋ, ನಕಲಿಯೋ ಎಂದು ತಿಳಿಯದಿದ್ದರೆ ಆರೋಗ್ಯ ಹದಗೆಡೋದಂತೂ ಗ್ಯಾರಂಟಿ.

Write A Comment