ಕನ್ನಡ ವಾರ್ತೆಗಳು

ಮೆಶೀನ್ ಖರೀದಿಸಲು 25 ಲಕ್ಷ ಸಾಲ ಮಾಡಿ ಬ್ಯಾಂಕಿಗೆ ವಂಚಿಸಿದ ವಂಚಕ ಅಂದರ್

Pinterest LinkedIn Tumblr

ಉಡುಪಿ: ಕುಂದಾಪುರ ತಾಲೂಕಿನ ಬೆಳ್ವೆ ಕೆನರಾ ಬ್ಯಾಂಕ್‌ನಿಂದ ರಿಸೋಲ್ ಟ್ರೇಡರ್ಸ್ ಮೆಶೀನನ್ನು ಖರೀದಿ ಮಾಡುವರೇ 25 ಲಕ್ಷ ರೂ. ಸಾಲ ಪಡೆದು ಮೆಶೀನ್ ಖರೀದಿಸದೆ ಸಾಲದ ಹಣ ಸರಿಯಾಗಿ ಪಾವತಿ ಮಾಡದೆ ಬ್ಯಾಂಕಿಗೆ ಮೋಸ ಮಾಡಿದ ವಂಚಕನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

Udp_Bank_420

ಬೆಳ್ವೆ ಗ್ರಾಮದ ರವಿರಾಜ್ ಎಸ್. ಎಂಬಾತನೇ ವಂಚಿಸಿ ಸದ್ಯ ಜೈಲು ಪಾಲಾದಾತ.

ಮೆಶೀನ್ ಚೆಕ್ ಮಾಡಲು ಹೋದಾಗ ಆರೋಪಿಯು ತಮ್ಮ ಗಮನಕ್ಕೆ ಬಾರದ ರೀತಿಯಲ್ಲಿ ಮೆಶೀನ್ ಮಾರಾಟ ಮಾಡಿ ಬ್ಯಾಂಕಿಗೆ ಮೋಸ ಮಾಡಿರುತ್ತಾನೆ ಎಂದು ಬ್ಯಾಂಕಿನ ಶಾಖಾಧಿಕಾರಿ ಶಂಕರನಾರಾಯಣ ಠಾಣೆಯಲ್ಲಿ ದೂರು ನೀಡಿದ್ದರು. ಸತತ ಕಾರ್ಯಾಚರಣೆ ಮೂಲಕ ಶಂಕರನಾರಾಯಣ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

Write A Comment