ಕನ್ನಡ ವಾರ್ತೆಗಳು

ನ್ಯಾಯಲಯದ ರಸ್ತೆಯಲ್ಲಿ ಹೂ, ಬಾಳೆಹಣ್ಣು,ತೆಂಗಿನ ಕಾಯಿ, ಕುಂಕುಮ,ಅಗರಬತ್ತಿ ಪತ್ತೆ : ವಾಮಾಚಾರ ಶಂಕೆ..!

Pinterest LinkedIn Tumblr

court_road_vamachar_1

ಮಂಗಳೂರು :ನಗರದ ನ್ಯಾಯಾಲಯಕ್ಕೆ ಹೋಗವ ರಸ್ತೆಯಲ್ಲಿ ವಿದ್ಯುತ್ ಕಂಬದ ಅಡಿಯಲ್ಲಿ ತೆಂಗಿನ ಕಾಯಿ ಒಡೆದು ಬಾಳೆಹಣ್ಣುಗಳನ್ನು ಸುಳಿದು ವಿವಿಧ ಬಣ್ಣದ ಹೂಗಳನ್ನು ಹಾಕಿ ಅದರ ಮೇಲೆ ಅರಸಿನ ಕುಂಕಮವನ್ನು ಹಾಕಿ ಅಗರಬತ್ತಿಯನ್ನು ಉರಿಸಿಟ್ಟಿರುವುದು ಕಂಡು ಬಂದಿದ್ದು, ಇದೊಂದು ವಾಮಾಚಾರ ಪ್ರಕರಣವಿರಬೇಕೆಂದು ಸಾವ೯ಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ.

ಇಂದು ಬೆಳಿಗ್ಗೆ ನ್ಯಾಯಾಲಯಕ್ಕೆ ಹೋಗವ ರಸ್ತೆ ಬದಿಯಲ್ಲಿ ವಿದ್ಯುತ್ ಕಂಬದ ಅಡಿಯಲ್ಲಿ ತೆಂಗಿನ ಕಾಯಿ ಒಡೆದು ಬಾಳೆಹಣ್ಣುಗಳನ್ನು ಸುಳಿದು ಬಣ್ಣಬಣ್ಣದ ಹೂಗಳನ್ನು ಹಾಕಿ,ಮೇಲೆ ಅರಸಿನ ಕುಂಕಮ ಹಾಕಿ ಅಗರಬತ್ತಿ ಉರಿಸಿಟ್ಟಿರುವುದು ಕಂಡ ಸಾರ್ವಜನಿಕರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

court_road_vamachar_2 court_road_vamachar_3 court_road_vamachar_4 court_road_vamachar_6 court_road_vamachar_7 court_road_vamachar_8

ಕೂಡಲೇ ಸ್ಥಳಕ್ಕೆ ಆಗಮಿಸಿದ ಇಂಟಲಿಜನ್ಸಿ ಪೋಲಿಸರು ಇದನ್ನು ಸ್ಥಳದಿಂದ ತೆರವುಗೂಳಿಸಿದ್ದಾರೆ. ಸುಮಾರು 10.ಘಂಟಟಯಿಂದ 10.30 ಘಂಟೆಯ ಹೂತ್ತಿಗೆ ವಾಮಾಚಾರ ನಡೆದಿರಬಹುದಾದ ಶಂಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ಇದು ನ್ಯಾಯಾಲಯಕ್ಕೆ ಮಾಡಿದ ವಾಮಾಚಾರವೋ… ಅಥಾವ ವಿದ್ಯುತ್ ಕಂಬದ ಅಡಿಯಲ್ಲಿ ವಾಮಾಚಾರ ಮಾಡಿದ್ದರಿಂದ ಇತ್ತೀಚೆಗೆ ಸುಳ್ಯದಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ಈ ರೀತಿ ವಾಮಾಚಾರ ನಡೆದಿರ ಬಹುದೇ ಎಂಬ ಸಂಶಯ ವ್ಯಕ್ತವಾಗಿದೆ.

Write A Comment