ಅಂತರಾಷ್ಟ್ರೀಯ

ಫೆಬ್ರವರಿ ಒಂದೇ ತಿಂಗಳಲ್ಲಿ 1.57 ಕೋಟಿ ವೌಲ್ಯದ ಚಿನ್ನ ಮತ್ತು 4ಲಕ್ಷ ರೂ ವೌಲ್ಯದ ವಿದೇಶಿ ಸಿಗರೇಟ್‌ ವಶ

Pinterest LinkedIn Tumblr

psmec27airport

ಮಂಗಳೂರು,ಮಾ.3: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ತಿಂಗಳಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 1.57 ಕೋಟಿ ವೌಲ್ಯದ 5.5 ಕೆ.ಜಿ ಚಿನ್ನ ಮತ್ತು 4ಲಕ್ಷ ರೂ ವೌಲ್ಯದ ವಿದೇಶಿ ಸಿಗರೇಟ್‌ನ್ನು ಕಸ್ಟಮ್ ಇಲಾಖೆ ವಶಪಡಿಸಿಕೊಂಡಿದೆ.

ಚಿನ್ನವನ್ನು ಟೈಗರ್ ಬಾಮ್ ಬಾಟಲ್, ಓಟ್ಸ್ ಟಿನ್, ಮೊಬೈಲ್ ಪೋನ್ ಪ್ಯಾಕೆಟ್ , ಪವರ್ ಬ್ಯಾಂಕ್, ಸೋಲಾರ್ ಪವರ್ ಇನ್‌ವರ್ಟರ್, ಇಸ್ತ್ರಿ ಪೆಟ್ಟಿಗೆ, ಮಿಕ್ಸರ್, ಸ್ಪೀಕರ್,ಓವನ್ ಮುಂತಾದವುಗಳ ಒಳಗೆ ಅಡಗಿಸಿಟ್ಟು ತರುತ್ತಿದ್ದ ಸಂದರ್ಭದಲ್ಲಿ ಪತ್ತೆ ಹಚ್ಚಲಾಗಿದೆ.
ಪ್ರಯಾಣದ ವೇಳೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಚಿನ್ನದ ಸರ, ಬಳೆ, ಗೆಜ್ಜೆಗಳನ್ನು ಅಡಗಿಸಿಟ್ಟು ತರುತ್ತಿದ್ದುದನ್ನು ಅಧಿಕಾರಿಗಳು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.

ಚಿನ್ನದ ಜೊತೆಗೆ 4 ಲಕ್ಷ ರೂ. ವೌಲ್ಯದ 232 ಕಾರ್ಟೂನ್ ವಿದೇಶಿ ನಿರ್ಮಿತ ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ವರ್ಷ ವಶಪಡಿಸಿಕೊಳ್ಳಲಾದ 46.72 ಕೆ.ಜಿ ಚಿನ್ನವನ್ನು ಬ್ಯಾಂಕ್‌ಗಳಿಗೆ ಮಾರಾಟ ಮಾಡಿ ಅದರಿಂದ ಬಂದ 14.25 ಕೋಟಿ ಹಣವನ್ನು ಸರಕಾರದ ಬೊಕ್ಕಸಕ್ಕೆ ಜಮೆ ಮಾಡಲಾಗಿದೆ ಎಂದು ಕಸ್ಟಮ್ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

Write A Comment