ಕನ್ನಡ ವಾರ್ತೆಗಳು

ರೈಲಿನಲ್ಲಿ ಅಕ್ರಮ ಗಾಂಜಾ ಸಾಗಾಟ : ಆರೋಪಿ ಪರಾರಿ.

Pinterest LinkedIn Tumblr

ganja_sale_photo

ಮಂಗಳೂರು,ಮಾರ್ಚ್.02: ಕೇರಳದಿಂದ ರೈಲಿನಲ್ಲಿ ಅಕ್ರಮವಾಗಿ ಸಾಗಣಿಕೆ ಮಾಡುತ್ತಿದ್ದ  22.08 ಕೆಜಿ ಗಾಂಜಾವನ್ನು ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದ ಬಳಿ
ಅಬಕಾರಿ  ಇಲಾಖೆ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ದಾಳಿ ವೇಳೆ ಆರೋಪಿಗಳು ಪಾರಾರಿಯಾಗಿದ್ದಾನೆ.

ರೈಲ್ವೆ ಸುರಕ್ಷ ದಳದ ಉಪ ನಿರೀಕ್ಷಕರಾದ ಪುರೋಷೋತ್ತಮ್ ಪೂಜಾರಿ ಮತ್ತು ಸಿಬ್ಬಂದಿಗಳ ಸಹಕಾರದೊಂದಿಗೆ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್‌ರವರ ಕಚೇರಿಯ ಅಬಕಾರಿ ನಿರೀಕ್ಷಕ ಕೆ.ರತ್ನಾಕರ್ ರೈ ಇವರ ನೇತೃತ್ವದಲ್ಲಿ ಉಪ ನಿರೀಕ್ಷಕರಾದ ಜಗನ್ನಾಥ್ ನಾಯ್ಕಾ ಮತ್ತು ಮಂಗಳೂರು ಉಪವಿಭಾಗ -1  ಅಬಕಾರಿ ನಿರೀಕ್ಷಕರಾದ ಚೇತನ್ ಕುಮಾರ್ ಮತ್ತು ಚಾಲಕರಾದ ಯೋಗೀಶ್ ಕುಮಾರ್ ಇವರುಗಳು ದಾಳಿಯಲ್ಲಿ ಭಾಗವಹಿಸಿದ್ದರು.

ಈ ಕುರಿತು ಮೊಕದ್ದಮೆ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ವಶಪಡಿಸಿಕೊಂಡ ಗಾಂಜಾದ ಮೌಲ್ಯ 6 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದಂತೆ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ರೈಲ್ವೆ ಸುರಕ್ಷಾ ದಳದ ಉಪ ನಿರೀಕ್ಷಕ ಪುರುಷೋತ್ತಮ್ ಪೂಜಾರಿ ಮತ್ತು ಸಿಬ್ಬಂದಿ ಸಹಕಾರದೊಂದಿಗೆ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್ ಕಚೇರಿಯ ಅಬಕಾರಿ ನಿರೀಕ್ಷಕ ಕೆ. ರತ್ನಾಕರ್ ರೈ ನೇತೃತ್ವದಲ್ಲಿ ಉಪ ನಿರೀಕ್ಷಕ ಜಗನ್ನಾಥ್ ನಾಯ್ಕ್ ಮತ್ತು ಮಂಗಳೂರು ಉಪವಿಭಾಗ-1ರ ಅಬಕಾರಿ ನಿರೀಕ್ಷಕ ಚೇತನ್ ಕುಮಾರ್ ಮತ್ತು ಚಾಲಕ ಯೋಗೀಶ್ ಕುಮಾರ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Write A Comment