ಕನ್ನಡ ವಾರ್ತೆಗಳು

ವೆನ್ಲಾಕ್ ಆಸ್ಪತ್ರೆ ಆಧುನೀಕರಣಕ್ಕೆ ಕೆ.ಎಂ.ಸಿ. ಉತ್ಸುಕತೆ

Pinterest LinkedIn Tumblr

dc_wenlock_kmc_1

ಮ೦ಗಳೂರು ಫೆ.29: 167 ವರ್ಷಗಳ ಹಳೆಯದಾದ ಮಂಗಳೂರು ನಗರದಲ್ಲಿ ಕಾರ್ಯಾಚರಿಸುತ್ತಿರುವ ವೆನ್ಲಾಕ್ ಸರ್ಕಾರಿ ಜಿಲ್ಲಾಸ್ಪತ್ರೆಯನ್ನು ಆಧುನೀಕರಣಗೊಳಿಸಲು ಆಸ್ಪತ್ರೆಯ ನೆರವನ್ನು ಪಡೆಯುತ್ತಿರುವ ಕಾಸ್ತೂರು ಬಾ ವೈದ್ಯಕೀಯ ಕಾಲೇಜು ಉತ್ಸುಕವಾಗಿದೆ ಎಂದು ಕೆ.ಎಂ.ಸಿ.ಯ ಡಾ: ಆನಂದ್ ಅವರು ತಿಳಿಸಿದ್ದಾರೆ.

ಅವರು  ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಡಾ: ಆನಂದ್ ತಿಳಿಸಿದರು.

dc_wenlock_kmc_3

ವೆನ್ಲಾಕ್ ಆಸ್ಪತ್ರೆಯ ಈಗಿರುವ ಆಪರೇಷನ್ ಥಿಯೇಟರ್, ವಾರ್ಡ್‌ಗಳು, ಪ್ಲಂಬಿಂಗ್ ಕಾರ್ಯ, ನೀರು ಸರಬರಾಜು ವ್ಯವಸ್ಥೆ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಕೈಗೊಂಡು ಆಸ್ಪತ್ರೆಗೆ ಹೈಟೆಕ್ಸ್ ಸ್ಫರ್ಶ ನೀಡುವುದಾಗಿ ಅವರು ತಿಳಿಸಿದರು.

ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಸರ್ಕಾರ ಮಂಜೂರು ಮಾಡಿರುವುದು 31 ಹಿರಿಯ ವೈದ್ಯರು ಆದರೆ ಕಾರ್ಯ ನಿರ್ವಹಿಸುತ್ತಿರುವವರು 21 ವೈದ್ಯರು ಇವರಲ್ಲದೆ ಕೆ.ಎಂ.ಸಿ.ಎ 98 ಜನ ವೈದ್ಯರು ಕಾರ್ಯನಿರ್ವಹಿಸುತ್ತಿರುತ್ತಾರೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧಿಕ್ಷಕರು ಡಾ. ರಾಜೇಶ್ವರಿ ದೇವಿ ಅವರು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Write A Comment