ಕನ್ನಡ ವಾರ್ತೆಗಳು

ಉಡುಪಿ: ಕೊಲೆಯಾದ ಸ್ಥಿತಿಯಲ್ಲಿ ವೃದ್ಧನ ಶವ ಪತ್ತೆ: ಪೊಲೀಸರಿಂದ ತನಿಖೆ ಚುರುಕು

Pinterest LinkedIn Tumblr

ಉಡುಪಿ: 65 ವರ್ಷ ಪ್ರಾಯದ ವೃದ್ಧರೋರ್ವರು ತಮ್ಮ ವಾಸದ ಶೆಡ್‌ನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶನಿವಾರ ಉಡುಪಿ ಉದ್ಯಾವರದ ಪಿತ್ರೋಡಿ ಎಂಬಲ್ಲಿ ನಡೆದಿದೆ.

ಉದ್ಯಾವರ ಪಿತ್ರೋಡಿ ನಿವಾಸಿ ಲಕ್ಷ್ಮಣ್ (65) ಎನ್ನುವವರೇ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯಾಗಿದ್ದಾರೆ.

Udupi_Udyavara_Old man_Murder (1) Udupi_Udyavara_Old man_Murder (3) Udupi_Udyavara_Old man_Murder (2)

ಘಟನೆ ವಿವರ: ಉದ್ಯಾವರ ಪಿತ್ರೋಡಿಯ ‘ಕೋಸ್ಟಲ್ ಐಸ್ ಪ್ಲಾಂಟ್’ ಎನ್ನುವಲ್ಲಿ ಕೆಲಸ ಮಾಡಿಕೊಂಡಿದ್ದ ಲಕ್ಷ್ಮಣ್ ಅವರು ಅಲ್ಲೇ ಸಮೀಪದ ಶೆಡ್ಡಿನಲ್ಲಿ ವಾಸವಿದ್ದರು. ಶನಿವಾರ ಇವರು ಕೆಲಸಕ್ಕೆ ಬಾರದಿದ್ದನ್ನು ಗಮನಿಸಿ ಶೆಡ್ ಸಮೀಪ ಬಂದಾಗ ಈ ಘಟನೆ ಬೆಳಕಿಗೆ ಬಂದಿದ್ದು ಶೆಡ್ ಒಳಗೆ ಇವರ ಶವ ದೊರೆತಿತ್ತು. ಮೇಲ್ನೋಟಕ್ಕೆ ಇದೊಂದು ಕೊಲೆ ಎನ್ನಲಾಗುತ್ತಿದ್ದು ಶವದ ಮೇಲೆ ಗಾಯದ ಗುರುತುಗಳು ಕಂಡುಬಂದಿದೆ ಎನ್ನಲಾಗಿದೆ. ಹೆಚ್ಚಿನ ತನಿಖೆಗಾಗಿ ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಶವವನ್ನು ರವಾನಿಸಲಾಗಿದೆ.

ಉಡುಪಿ ಎಸ್ಪಿ ಕೆ. ಅಣ್ಣಾಮಲೈ, ಕಾರ್ಕಳ ಎ.ಎಸ್ಪಿ ಸುಮನ್ ಹಾಗೂ ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ಮುಂದುವರಿದಿದೆ.

Write A Comment