
ಉಳ್ಳಾಲ,ಫೆ.22 : ಮಕ್ಕಳ ದೇಹ ಬೆಳವಣಿಗೆಯಾಗಬೇಕು ಎಂಬ ಅಸೆ ಎಲ್ಲಾ ತಾಯಂದಿರದ್ದು ಅದರೆ ಬೆಳವಣಿಗೆ ಜಾಸ್ತಿಯಾದರೆ ಯಾವ ಯಾವ ರೋಗಗಳು ಎದುರಾಗಬಹುದು ಎನ್ನುವುದನ್ನು ಯಾರೂ ಕೂಡಾ ಚಿಂತಿಸುವುದಿಲ್ಲ. ನಮ್ಮ ಊರಿನ ಸಂಘ ಸಂಸ್ಥೆಗಳು ಇಂತಹ ಶಿಬಿರಗಳನ್ನು ನಡೆಸಿದರೆ ರೋಗ ಬರುವುದರ ಬಗ್ಗೆ ಮತ್ತದರ ಮುಂಜಾಗ್ರತೆಯ ಕುರಿತು ಮಾಹಿತಿ ನೀಡಿ, ರೋಗಿಗಳಿಗೆ ಔಷದಿ ವಿತರಣೆ ಮಾಡುವ ಮೂಲಕ ರೋಗಗಳನ್ನು ತಡೆಯಲು ಸಾಧ್ಯ ಎಂದು ರಾಜ್ಯ ಅರೋಗ್ಯ ಸಚಿವ ಯು.ಟಿ ಖಾದರ್ ಅಭಿಪ್ರಾಯಪಟ್ಟರು.
ಅವರು ಎಸ್ಸೆಸ್ಸೆಫ್ ಬೆಳ್ಮ ರೆಂಜಾಡಿ ಶಾಖೆ 21ನೇ ವಾರ್ಷಿಕ ಪ್ರಯುಕ್ತ 21 ಕಾರ್ಯಕ್ರಮಗಳ ಪೈಕಿ 15ನೇ ಕಾರ್ಯಕ್ರಮವಾದ ಸಾರ್ವಜನಿಕ ಉಚಿತ ಆರೋಗ್ಯ ಶಿಬಿರವು ದೇರಳಕಟ್ಟೆ ಕಣಚೂರು ಅಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಣಚೂರು ಅಸ್ಪತ್ರೆ ಮತ್ತು ಸಂಶೋಧನಾ ಕೆಂದ್ರದ ನಿರ್ದೇಶಕ ಅಬ್ದುಲ್ ರಹಿಮಾನ್ ಮಾತನಾಡಿ ಈ ಶಿಬಿರದಲ್ಲಿ ಭಾಗವಹಿಸುವ ಎಲ್ಲಾ ರೋಗಿಗಳಿಗೆ ಫೆಬ್ರವರಿ 21ರಿಂದ ಮಾರ್ಚ್ 31ರ ತನಕ ಕಣಚೂರು ಅಸ್ಪತ್ರೆಯಲ್ಲಿ ಉಚಿತವಾಗಿ ತಪಾಸಣೆ, ಔಷದಿ ನೀಡಲಾಗುವುದು. ಎಲ್ಲರು ಇದರ ಸದುಪಯೋಗವನ್ನು ಪಡೆಯಬೇಕೆಂದು ಕೋರಿದರು.

ಬೆಳ್ಮ ಕೇಂದ್ರ ಜುಮಾ ಮಸೀದಿ ಖತೀಬ್ ಪಿ.ಎ ಉಸ್ಮಾನ್ ಮದನಿ ದುಅ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
೨೧ನೇ ವಾರ್ಷಿಕ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಎಚ್.ಎಚ್ ಕುಂಞ ಅಹ್ಮದ್ ಹಾಜಿ, ಬೆಳ್ಮ ಕೇಂದ್ರ ಜುಮ ಮಸೀದಿ ಅಧ್ಯಕ್ಷ ಬಿ.ಎಸ್ ಇಸ್ಮಾಯಿಲ್, ಬೆಳ್ಮ ಗ್ರಾ.ಪಂ ಉಪಾಧ್ಯಕ್ಷ ಅಬ್ದುಲ್ ಸತ್ತಾರ್, ಸದಸ್ಯರಾದ ಯೂಸುಫ್ ಬಾವ, ಎಂ.ಎ ಅಬ್ದುಲ್ಲ, ಶರ್ಮಿಳಾ, ಅಂಬ್ಲಮೊಗರು ಗ್ರಾ.ಪಂ ಸದಸ್ಯ ರಾಜೇಶ್ ಕಂಡಿಲ, ನಾಗಪ್ಪ ಬರಿಕೆ, ಪೊಸಭೂತ ಬಂಟ ದೇವಸ್ಥಾನದ ಅಧ್ಯಕ್ಷ ಅಶೋಕ್ ರೈ, ರೆಂಜಾಡಿ ಮಸೀದಿ ಮಾಜಿ ಖತೀಬ್ ಅಬ್ದುಲ್ ಖಾದರ್ ಮುಸ್ಲಿಯಾರ್, ಎಸ್ಸೆಸ್ಸೆಫ್ ದೇರಳಕಟ್ಟೆ ಅಧ್ಯಕ್ಷ ಸಿದ್ದೀಕ್ ಮದನಿ, ಕಾಯಾರ್ಕೇರ್ ಆಸ್ಪತ್ರೆಯ ಅಧ್ಯಕ್ಷ ಅಬ್ದುರ್ರಹ್ಮಾನ್, ಕಲ್ಪಾದೆ ಜುಮಾ ಮಸೀದಿಯ ಅಧ್ಯಕ್ಷ ಸತ್ತಾರ್ ಕಲ್ಪಾದೆ, ಎಸ್ವೈಎಸ್ ರೆಂಜಾಡಿ ಶಾಖಾ ಅಧ್ಯಕ್ಷ ಬಿ.ಎಸ್ ಬಾವುಂಞ, ಬೆಳ್ಮ ಕೇಂದ್ರ ಜುಮಾ ಮಸೀದಿ ಉಪಾಧ್ಯಕ್ಷ ಮೋನು ಬೋರಿಯ, ಸಮಾಜ ಸೇವಕ ಬಿ.ಅರ್ ಯೂಸುಫ್ ಬಡಕಬೈಲ್, ಎಸ್ಸೆಸ್ಸೆಫ್ ರೆಂಜಾಡಿ ಶಾಖಾಧ್ಯಕ್ಷ ಸ್ವಾಲಿಹ್ ಬಿ.ಆರ್, ಗೌರವ ಅಧ್ಯಕ್ಷ ಲತೀಫ್ ಬಿ,ಅರ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ರೆಂಜಾಡಿ ಶಾಖಾ ಪ್ರ.ಕಾರ್ಯದರ್ಶಿ ಯು.ಎ ಮುಹಮ್ಮದ್ ಸಫೀರ್ ಸ್ವಾಗತಿದರು. ಎಸ್ಸೆಸ್ಸೆಫ್ ರೆಂಜಾಡಿ ಕೋಶಾಧಿಕಾರಿ ಸ್ವಾಲಿಹ್ ಬಿ. ವಂದಿಸಿದರು.