ಕನ್ನಡ ವಾರ್ತೆಗಳು

ಕನ್ನಡದಲ್ಲಿ ನನಗೆ ಉತ್ತಮ ಹಾಡುಗಳನ್ನು ಹಾಡುವ ಭಾಗ್ಯ ಸಿಕ್ಕಿತ್ತು; ಗಾಯಕಿ ವಾಣಿ ಜಯರಾಂ (ಸಂದರ್ಶನ)

Pinterest LinkedIn Tumblr

ಕುಂದಾಪುರ: ಕಾಲಘಟಕ್ಕೆ ಹಾಗೂ ಸಿನಿಮಾ ಕಥೆಗಳ ಸಾಂದರ್ಭಿಕತೆಗೆ ಹೊಂದಿಕೊಂಡು ಸಿನೆಮಾ ಹಾಡುಗಳು ಹಿಂದಿಗಿಂತ ಇಂದು ಬದಲಾಗಿದೆ. ಆದರೇ ಅಂದು ನನಗೆ ಉತ್ತಮ ಹಾಡಿಗಳನ್ನು ಹಾಡುವ ಭಾಗ್ಯ ಸಿಕ್ಕಿದ್ದು ನನಗೆ ಮರೆಯಲಾಗದ ಅನುಭವ. ನನಗೆ ಪ್ರೋತ್ಸಾಹಿಸಿದ ಕನ್ನಡ ಸಿನೆಮಾ ಇಂಡಸ್ಟ್ರಿಗೆ ನಾನು ಎಂದಿಗೂ ಋಣಿಯಾಗಿರುವೆ.

ಹೀಗೆ ತನ್ನ ಸಂಗೀತ ಸಾಧನೆಯ ಬಗ್ಗೆ ಹಾಗೂ ಹಾಡುಗಳ ಬಗ್ಗೆ ಮಾತನಾಡಿದ್ದು ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ. ಕುಂದಾಪುರಕ್ಕೆ ಆಗಮಿಸಿದ್ದ ವೇಳೆ ಅವರು ಸ್ಥಳೀಯ ಸುದ್ದಿಗಾರರ ಜೊತೆ ತಮ್ಮ ಸಂಗೀತ ಅನುಭವವನ್ನು ಹಂಚಿಕೊಂಡರು.

VaniJayaram_Interview_Kundapur (3)

VaniJayaram_Interview_Kundapur (5)

ಸಂಗೀತ ಕ್ಷೇತ್ರಕ್ಕೆ ಬರಲು ಯಾರು ಪ್ರೇರಣೆ?
ಸಂಗೀತ ಕ್ಷೇತ್ರಕ್ಕೆ ಬಂದು ಗಾಯಕಿಯಾಗಿ ಗುರುತಿಸಿಕೊಳ್ಳಲು ತಾಯಿ ಪದ್ಮಾವತಿ ಅವರೇ ನನಗೆ ಪ್ರೇರಣೆಯಾಗಿದ್ದರು. ಅವರು ತೋರಿಸಿದ ದಾರಿಯಲ್ಲಿ ನಡೆದುಬಂದ ಕಾರಣ ಈ ಸಾಧನೆ ಮಾಡಲು ಸಾಧ್ಯವಾಯಿತು. ಕನ್ನಡ ಸಹಿತ 19 ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದೇನೆ. ಹಿಂದಿಯ ‘ಗುಡ್ಡಿ’ ನಾನು ಹಾಡಿದ ಮೊದಲ ಚಿತ್ರ.

ಕನ್ನಡದಲ್ಲಿ ತುಂಬಾ ಇಷ್ಟಪಟ್ಟ ಹಾಡುಗಳ್ಯಾವುದು?
ಇದಕ್ಕೆ ಉತ್ತರಿಸುವುದು ತುಂಬಾ ಕಷ್ಟ. ಎಲ್ಲಾ ಹಾಡುಗಳನ್ನು ಖುಷಿಪಟ್ಟು ಹಾಡಿರುವೆ. ಭಕ್ತಿಗೀತೆಗಳು ನನ್ನ ಫೆವರೇಟ್. ಸಿನೆಮಾ ಹಾಡುಗಳ ಪೈಕಿ ‘ಎಂದೆಂದೂ ನಿನ್ನನು ಮರೆತು..’, ‘ಹೋದೆಯಾ ದೂರ ಓ ಜೊತೆಗಾರ..’, ‘ಕನಸಲು ನೀನೆ..ಮನಸಲೂ ನೀನೆ..’, ‘ಪ್ರಿಯತಮ..ಕರುಣೆಯ ತೋರೆಯಾ..’, ‘ಏನೇನೋ ಆಸೆ’ ಬೆಸುಗೆ ಚಿತ್ರದ ಹಾಡುಗಳು ಇಂದಿಗೂ ಜನಪ್ರಿಯವಾಗಿದ್ದು, ಡಾ.ರಾಜಕುಮಾರ್, ಪಿ.ಬಿ. ಶ್ರೀನಿವಾಸ್, ಎಸ್.ಪಿ. ಬಾಲಸುಬ್ರಮಣ್ಯಂ ಜೊತೆಗೆ ಹಾಡಿದ್ದು ತುಂಬಾ ಖುಷಿಕೊಟ್ಟಿದೆ. ನಿರ್ದೇಶಕರಾದ ಪುಟ್ಟಣ್ಣ, ಜಿಜಯ ನರಸಿಂಹ, ದೊಡ್ಡರಂಗೇಗೌಡ, ವಿಜಯಭಾಸ್ಕರ್, ರಾಜನ್ ನಾಗೇಂದ್ರ ಮೊದಲಾದ ನಿರ್ದೇಶಕರು ಉತ್ತಮ ಅವಕಾಶಗಳನ್ನು ನೀಡಿದ್ದಾರೆ.

VaniJayaram_Interview_Kundapur (2) VaniJayaram_Interview_Kundapur (1)

ಯುವಜನಾಂಗಕ್ಕೆ ನಿಮ್ಮ ಕಿವಿಮಾತು?
‘ಆರ್ಟ್’ ಇರಬೇಕಾದರೇ ಅವರಲ್ಲಿ ‘ಹಾರ್ಟ್’ ಇರಬೇಕು. ಅಸೂಯೆಗಳು ಇರಬಾರದು. ಮಾನವೀಯತೆಯೊಂದಿಗೆ ಎಲ್ಲರಿಗೂ ಗೌರವ ನೀಡುವ ಉದಾರತೆ ಬೇಕು. ಶ್ರದ್ಧೆ ಭಕ್ತಿಯ ಮೂಲಕ ವಿನಯವನ್ನು ಬೆಳೆಸಿಕೊಂಡು ಕಲಾವಿದ್ಯೆ ಒಲಿಸಿಕೊಳ್ಳಬೇಕು. ನಮ್ಮ ಕಾಲದಲ್ಲಿ ಕೇವಲ ರೇಡಿಯೋ ಮಾತ್ರ ಇತ್ತು. ಆದರೇ ಇಂದು ಸಾಧನ ಸಲಕರಣೆಗಳು ಬದಲಾಗಿ ಹಾಡುಗಳನ್ನು ಕೇಳುವುದು ಮಾತ್ರವಲ್ಲ, ಹಾಡಿನ ಜೊತೆಗೆ ಚಿತ್ರಣವನ್ನು ನೋಡುವ ಆಧುನಿಕತೆಯತ್ತ ಬಂದಿದ್ದೇವೆ. ಫಾಸ್ಟ್ ಫುಡ್, ಫಾಸ್ಟ್ ಕಾಫಿ, ತ್ವರಿತಗತಿಯ ಜೀವನ ಕ್ರಮಕ್ಕನುಗುಣವಾಗಿ ತ್ವರಿತಗತಿ ಸಾಂಗ್ ಈಗಿನ ಕಾಲದಲ್ಲಿ ಪ್ರಚಲಿತವಾಗಿದೆ.

ಕುಂದಾಪುರದ ಬಗ್ಗೆ?
ಮಂಗಳೂರು ಹಾಗೂ ಉಡುಪಿಗೆ ಈ ಹಿಂದೆ ಬಂದಿದ್ದೆ. ಆದರೇ ಕುಂದಾಪುರಕ್ಕೆ ಆಗಮಿಸಿದ್ದು ಇದು ಮೊದಲ ಬಾರಿಗೆ. ತುಂಬಾ ಒಳ್ಳೆಯ ಸ್ಥಳಗಳು ಕುಂದಾಪುರದಲ್ಲಿರುವ ಬಗ್ಗೆ ಕೇಳಿ ತಿಳಿದಿರುವೆ.

VaniJayaram_Interview_Kundapur (4)

ಚಿತ್ರ,ವರದಿ- ಯೋಗೀಶ್ ಕುಂಭಾಸಿ

Write A Comment