ಮನೋರಂಜನೆ

ಎರಡೇ ದಿನದಲ್ಲಿ 12 ಕೋಟಿ ಬಾಚಿದ ನೀರಜಾ!

Pinterest LinkedIn Tumblr

sonam-neerja

ಮುಂಬೈ: 1986ರಲ್ಲಿ ನಡೆದ ಪಾನ್ ಆಮ್ ವಿಮಾನ ಹೈಜಾಕ್‍ನ ನೈಜ ಘಟನೆ ಆಧರಿತ ಚಿತ್ರ ನೀರಜಾ ಸೂಪರ್ ಹಿಟ್ ಆಗಿದೆ. ಸೋನಮ್ ಕಪೂರ್ ಅಭಿನಯದ ಚಿತ್ರ ರಿಲೀಸ್ ಆದ ಎರಡೇ ದಿನದಲ್ಲಿ 12 ಕೋಟಿ ರೂ. ಗಳಿಸಿದೆ.

ಚಿತ್ರದ ಆರಂಭದ ದಿನ ಕೇವಲ 4.70 ಕೋಟಿ ಮಾತ್ರ ಗಳಿಕೆಯಾಗಿತ್ತು. ಆದರೆ ಎರಡನೇ ದಿನ ಉತ್ತಮ ಚೇತರಿಕೆ ಕಂಡ ಚಿತ್ರ 7.60 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ.

ಭಾರತದಾದ್ಯಂತ ಒಟ್ಟು 700 ಸ್ಕ್ರೀನ್‍ಗಳಲ್ಲಿ ನೀರಜಾ ಚಿತ್ರ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೆ ಸೋನಮ್ ಕಪೂರ್ ಇದುವರೆಗೆ ಅಭಿನಯಿಸಿದ ಚಿತ್ರಗಳಲ್ಲಿ ಸೂಪರ್ ಚಿತ್ರ ನೀರಜಾ ಎಂದೇ ವಿಶ್ಲೇಷಿಸಲಾಗುತ್ತಿದೆ.

ಹೈಜಾಕ್ ವೇಳೆ 359 ಜನರನ್ನು ಕಾಪಾಡಿದ್ದ ನೀರಜಾ ಭಾನೋತ್ ಅವರ ಜೀವನ ಕಥೆ ಆಧರಿಸಿ ಚಿತ್ರದ ಕಥಾವಸ್ತುವನ್ನು ಹೆಣೆಯಲಾಗಿದೆ.

Write A Comment