ಕುಂದಾಪುರ : ಇಲ್ಲಿನ ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಸಿಬ್ಬಂದಿಯೋರ್ವ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ ಆತಂಕಕಾರಿ ಘಟನೆ ನಡೆದಿದ್ದು ಕೆಲ ದಿನಗಳ ಬಳಿಕ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಭಕ್ತರು ನೀಡಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೇವಾಲಯದ ಕೌಂಟರ್ ಸಿಬ್ಬಂದಿ ಶಿವರಾಮ್ ಎಂಬಾತ ಕಳವು ಮಾಡಿ ಪರಾರಿಯಾಗಿದ್ದಾನೆನ್ನಲಾಗಿದೆ.
ಕಾಣಿಕೆ ಚಿನ್ನ ಸ್ವ ಕಾರ್ಯಕ್ಕೆ..!?
ಹಲವು ವರ್ಷಗಳಿಂದ ದೇವಳದ ಸೇವಾ ಕೌಂಟರ್ ಒಂದರಲ್ಲಿ ರಶೀತಿ ನೀಡುವ ಕೆಲಸ ನಿರ್ವಹಿಸುತ್ತಿದ್ದ ಶಿವರಾಮ ಎಂಬಾತ ಭಕ್ತರು ಕಾಣಿಕೆ ರೂಪದಲ್ಲಿ ದೇವರಿಗೆ ನೀಡುವ ಚಿನ್ನಾಭರಣಗಳನ್ನು ದೇವಾಲಯದ ಖಜಾನೆಯಲ್ಲಿಡದೇ ಕೌಂಟರಿನಲ್ಲಿ ಇಟ್ಟು ಸ್ವಲ್ಪಸ್ವಲ್ಪವೇ ಎಗರಿಸಿದ್ದಾನೆ. ಅಂದಾಜು 4 ಲಕ್ಷದ 5 ಸಾವಿರ ಮೌಲ್ಯದ ಚಿನ್ನಾಭರಣ ಈತ ಲಪಟಾಯಿಸಿದ್ದಾನೆ ಎಂದು ಆರೋಪವಿದೆ. ಸ್ಥಳೀಯರು ದೇವಾಲಯದ ಆಡಳಿತಾಧಿಕಾರಿಯ ಬೇಜವಾಬ್ದಾರಿತನದಿಂದಲೇ ಚಿನ್ನಾಭರಣ ಕಳವಾಗಿದೆ ಎಂದು ಆರೋಪಿಸಿದ್ದಾರೆ.
ಆರೋಪಿ ಎಸ್ಕೇಪ್-ಹಣ ವಾಪಾಸ್
ಈತನ್ಮಧ್ಯೆ ಶಿವರಾಮ ಕಳೆದ ಏಳೆಂಟು ದಿನಗಳಿಂದ ಎಸ್ಕೇಪ್ ಆಗಿದ್ದಾನೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರುತ್ತಲೇ ಆತ ಅದ್ಯೆಗೋ ತನ್ನ ಪತ್ನಿ ಮೂಲಕ ನಾಲ್ಕು ಲಕ್ಷ ಹಣವನ್ನು ದೇವಸ್ಥಾನಕ್ಕೆ ವಾಪಾಸ್ಸು ನೀಡೀದ್ದಾನೆನ್ನಲಾಗಿದೆ. ಆರೋಪಿ ಎಸ್ಕೇಪ್ ಆಗುವ ಜೊತೆಗೆ ತನ್ನ ಕೌಂಟರಿನ ಖಜಾನೆ ಕೀಲಿಕೈ ಜೊತೆಗೆ ಕೊಂಡುಹೋಗಿದ್ದು ಅದರಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಇರುವ ಕಾರಣ ಇನ್ನಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ದೇವಳದ ಸಿಬ್ಬಂದಿಯೋರ್ವ ಖಜಾನೆ ಕೀಲಿಕೈ ಸಮೆತ ಕಾಣೆಯಾಗಿರುವ ಬಗ್ಗೆ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಆರೋಪಿ ಶಿವರಾಮ್ ಪತ್ತೆಗಾಗಿ ಬಲೆ ಬೀಸಿದ್ದಾರೆ.
(ಸಂಗ್ರಹ ಚಿತ್ರಗಳು)