ಕನ್ನಡ ವಾರ್ತೆಗಳು

ನಾಳೆ ಚುನಾವಣೆ : ದ.ಕ.ಜಿಲ್ಲೆಯಾದ್ಯಂತ ಬಿಗಿ ಭದ್ರತೆಯೊಂದಿಗೆ ಮತದಾನಕ್ಕೆ ಸಿದ್ದತೆ

Pinterest LinkedIn Tumblr

Elction_study_photo_1

ಮಂಗಳೂರು : ದ.ಕ.ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ನಾಳೆ ನಡೆಯಲಿರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿದೆ. ಮಂಗಳೂರಿನ ಬೊಂದೇಲ್‌ನಲ್ಲಿರುವ ಮಹಾತ್ಮ ಗಾಂಧಿ ಶಾಲೆಯಲ್ಲಿ ಮತಯಂತ್ರ ಹಾಗೂ ಮತದಾನಕ್ಕೆ ಬೇಕಾದ ಪರಿಕರಗಳನ್ನು ಮತಗಟ್ಟೆ ಅಧಿಕಾರಿಗಳಿಗೆ ವಿತರಿಸಲಾಯಿತು.

ಮತದಾನ ಮಾಡಲು ಕಾರ್ಮಿಕರಿಗೆ ರಜೆ :

ಮ೦ಗಳೂರು : ದ.ಕ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಸಾರ್ವತ್ರಿಕ ಸ್ಥಳೀಯ ಚುನಾವಣೆಗಳು ಫೆ. 20 ರಂದು ನಡೆಸಲು ಚುನಾವಣಾ ಆಯೋಗವು ಉದ್ದೇಶಿಸಿದ್ದು, ಮತದಾನದ ದಿನದಂದು ಮತ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು , ಕೈಗಾರಿಕಾ ಸಂಸ್ಥೆಗಳು ಹಾಗೂ ಇತರ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸಂವಿಧಾನಾತ್ಮಕ ಹಕ್ಕಾದ ಮತವನ್ನು ಚಲಾಯಿಸಲು ಸಾಧ್ಯವಾಗುವಂತೆ ರಜೆ/ ಅನುವು ಮಾಡಿಕೊಡಲು ಮಾಲೀಕರು / ನಿಯೋಜಕರಿಗೆ ಸೂಚಿಸಿ ಕಾರ್ಮಿಕ ಆಯುಕ್ತರು ಬೆಂಗಳೂರು, ಇವರು ಕಛೆರಿ ಆದೇಶವನ್ನು ಹೊರಡಿಸಿರುವುದರಿಂದ, ಚುನಾವಣಾ ಕಾರ್ಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಂಸ್ಥೆಗಳಲ್ಲಿನ ಕಾರ್ಮಿಕರಿಗೆ ರಜೆ / ಅನುವು ಮಾಡಿಕೊಡುವಂತೆ ಕಾರ್ಮಿಕ ಇಲಾಖೆ ಪ್ರಕಟಣೆ ತಿಳಿಸಿದೆ.

Elction_study_photo_2 Elction_study_photo_3 Elction_study_photo_4 Elction_study_photo_5 Elction_study_photo_6 Elction_study_photo_7

ನಗರದಲ್ಲಿ ಕರ್ತವ್ಯದಲ್ಲಿರುವ ಗ್ರಾಮೀಣ ಮತದಾರರಿಗೆ ಅರ್ಧ ದಿನ ರಜೆ

ಮ೦ಗಳೂರು :ನಾಳೆ ನಡೆಯಲಿರುವ ಜಿಲ್ಲಾ / ತಾಲೂಕು ಪಂಚಾಯತ್ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಕೇಂದ್ರ ಸರಕಾರಿ ಕಛೇರಿ, ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು, ಜೀವ ವಿಮಾ ನಿಗಮ ಕಚೇರಿಗಳಿಗೆ ಫೆ. 20 ರಂದು ಸಾರ್ವತ್ರಿಕ ರಜೆ ಘೋಷಿಸಿರುತ್ತದೆ.

ಆದರೆ ನಗರ ಪ್ರದೇಶಗಳಲ್ಲಿ ಕರ್ತವ್ಯದಲ್ಲಿರುವ ಮತ್ತು ಕೆಲಸ ಮಾಡುತ್ತಿರುವ ಸಿಬ್ಬಂದಿಗಳು, ನೌಕಕರಿಗೆ ಮತದಾನ ಮಾಡಲು ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಅಂತಹವರಿಗೂ ಅರ್ಧ ದಿನ ರಜೆ ನೀಡುವಂತೆ ಜಿಲ್ಲೆಯ ಎಲ್ಲಾ ಕಚೇರಿಗಳ ಮುಖ್ಯಸ್ಥರಿಗೆ, ಕಾರ್ಖಾನೆಗಳ ಮಾಲೀಕರಿಗೆ ಹಾಗೂ ಬ್ಯಾಂಕುಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಎ.ಬಿ. ಇಬ್ರಾಹಿಂ ಆದೇಶಿಸಿದ್ದಾರೆ.

Elction_study_photo_8 Elction_study_photo_9 Elction_study_photo_10 Elction_study_photo_11 Elction_study_photo_12 Elction_study_photo_13 Elction_study_photo_14

ವಿಟ್ಲ ಮತ್ತು ಕೋಟೆಕಾರ್ ಪ.ಪಂ. ವಾರ್ಡು ಮೀಸಲಾತಿ ಪ್ರಕಟ :

ಮ೦ಗಳೂರು :ಕರ್ನಾಟಕ ಸರ್ಕಾರದ ಕರ್ನಾಟಕ ಪುರಸಭೆ ಕಾಯ್ದೆ ಅನ್ವಯ ದ.ಕ ಜಿಲ್ಲೆಯ ವಿಟ್ಲ ಹಾಗೂ ಕೋಟೆಕಾರು ವಾರ್ಡ್‌ಗಳ ಮೀಸಲಾತಿಯನ್ನು ಪ್ರಕಟಿಸಿದೆ. ಮೀಸಲಾತಿ ಬಗ್ಗೆ ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ ಅದನ್ನು ಲಿಖಿತ ರೂಪದಲ್ಲಿ ಕಾರಣ ಸಹಿತ ದಾಖಲೆಗಳೊಂದಿಗೆ ದ.ಕ ಜಿಲ್ಲಾ ಜಿಲ್ಲಾಧಿಕಾರಿಗಳಿಗೆ ನಿಗದಿತ ಅವಧಿಯೊಳಗೆ ಸಲ್ಲಿಸಲು ಸೂಚಿಸಿದೆ.

ವಿಟ್ಲ ಪಟ್ಟಣ ಪಂಚಾಯತ್:

ವಿಟ್ಲ ವಾರ್ಡ್-೧ ಹಿಂದುಳಿದ ವರ್ಗ ಎ (ಮಹಿಳೆ), ವಾರ್ಡ್-೨ ಸಾಮಾನ್ಯ, ವಾರ್ಡ್-೩ ಸಾಮಾನ್ಯ, ವಾರ್ಡ್-೪ ಹಿಂದುಳಿದ ವರ್ಗ ಎ, ವಾರ್ಡ್-೫ ಸಾಮಾನ್ಯ (ಮಹಿಳೆ), ವಾರ್ಡ್ -೬ ಹಿಂದುಳಿದ ವರ್ಗ ಬಿ, ವಾರ್ಡ್-೭ ಪರಿಶಿಷ್ಟ ಪಂಗಡ, ವಾರ್ಡ್-೮ ಹಿಂದುಳಿದ ವರ್ಗ ಎ (ಮಹಿಳೆ), ವಾರ್ಡ್-೯ ಸಾಮಾನ್ಯ, ವಾರ್ಡ್-೧೦ ಸಾಮಾನ್ಯ, ವಾರ್ಡ್-೧೧ ಹಿಂದುಳಿದ ವರ್ಗ ಎ, ವಾರ್ಡ್-೧೨ ಸಾಮಾನ್ಯ (ಮಹಿಳೆ), ವಾರ್ಡ್-೧೩ ಪರಿಶಿಷ್ಟ ಜಾತಿ, ವಾರ್ಡ್-೧೪ ಹಿಂದುಳಿದ ವರ್ಗ ಎ (ಮಹಿಳೆ), ವಾರ್ಡ್-೧೫ ಸಾಮಾನ್ಯ, ವಾರ್ಡ್-೧೬ ಹಿಂದುಳಿದ ವರ್ಗ ಎ , ವಾರ್ಡ್-೧೭ ಸಾಮಾನ್ಯ (ಮಹಿಳೆ), ವಾರ್ಡ್-೧೮ ಸಾಮಾನ್ಯ (ಮಹಿಳೆ).

ಕೋಟೆಕಾರು ಪಟ್ಟಣ ಪಂಚಾಯತ್:

ಕೋಟೆಕಾರು ವಾರ್ಡ್-೧ ಹಿಂದುಳಿದ ವರ್ಗ ಎ (ಮಹಿಳೆ), ವಾರ್ಡ್-೨ ಸಾಮಾನ್ಯ, ವಾರ್ಡ್-೩ ಸಾಮಾನ್ಯ, ವಾರ್ಡ್-೪ ಪರಿಶಿಷ್ಟ ಜಾತಿ, ವಾರ್ಡ್-೫ ಹಿಂದುಳಿದ ವರ್ಗ ಎ, ವಾರ್ಡ್-೬ ಸಾಮಾನ್ಯ (ಮಹಿಳೆ), ವಾರ್ಡ್-೭ ಹಿಂದುಳಿದ ವರ್ಗ ಬಿ, ವಾರ್ಡ್-೮ ಹಿಂದುಳಿದ ವರ್ಗ ಎ (ಮಹಿಳೆ), ವಾರ್ಡ್-೯ ಸಾಮಾನ್ಯ, ವಾರ್ಡ್-೧೦ ಸಾಮಾನ್ಯ, ವಾರ್ಡ್-೧೧ ಹಿಂದುಳಿದ ವರ್ಗ ಎ, ವಾರ್ಡ್-೧೨ ಸಾಮಾನ್ಯ (ಮಹಿಳೆ), ವಾರ್ಡ್-೧೩ ಸಾಮಾನ್ಯ, ವಾರ್ಡ್-೧೪ ಹಿಂದುಳಿದ ವರ್ಗ ಎ, ವಾರ್ಡ್-೧೫ ಪರಿಶಿಷ್ಟ ಪಂಗಡ, ವಾರ್ಡ್-೧೬ ಸಾಮಾನ್ಯ (ಮಹಿಳೆ), ವಾರ್ಡ್-೧೭ ಸಾಮಾನ್ಯ (ಮಹಿಳೆ).

Write A Comment