
ವರದಿ : ಈಶ್ವರ ಎಂ. ಐಲ್
ಮುಂಬಯಿ: ಮಲಾಡ್ ಪೂರ್ವದ ಕುರಾರ್ ವಿಲೇಜ್ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿಯ ಶ್ರೀ ಶನೀಶ್ವರ ಮಂದಿರ ದಲ್ಲಿ ಫೆ. 13ರಂದು ವಾರ್ಷಿಕ ಶ್ರೀ ಶನೀಶ್ವರ ಮಹಾಪೂಜೆಯು ಜರಗಿತು.
ಬೆಳಗ್ಗಿನಿಂದ ಗಣಹೋಮ, ಶ್ರೀ ಶನಿ ದೇವರಿಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ಅನ್ನ ಸಂತರ್ಪಣೆ, ಅಪರಾಹ್ನ ಸಾಮೂಹಿಕ ಶ್ರೀ ಶನಿಪೂಜೆ, ಶನಿಗ್ರಂಥ ಪಾರಾಯಣ, ಮಹಾ ಮಂಗಳಾರತಿ ನೆರವೇರಿತು.

ಮಹಾಪೂಜೆಯ ಧಾರ್ಮಿಕ ವಿಧಿ ವಿಧಾನಗಳನ್ನು ಪ್ರಧಾನ ಅರ್ಚಕ ರಾಘವೇಂದ್ರ ತುಂಗಾ ಭಟ್ ಮತ್ತು ನಾರಾಯಣ ಭಟ್ ನೆರವೇರಿಸಿದರು.ಸದಸ್ಯರು ಮತ್ತು ಅವರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಮಲಾಡ್ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ, ಉಪಾಧ್ಯಕ್ಷ ನಾರಾಯಣ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಎಂ. ಡಿ. ಬಿಲ್ಲವ, ಜತೆ ಕಾರ್ಯದರ್ಶಿಗಳಾದ ನಿತ್ಯಾಂದ ಕೋಟ್ಯಾನ್, ಸಂತೋಷ್ ಶೆಟ್ಟಿ, ಗೌರವ ಪ್ರಧಾನ ಕೋಶಾಧಿಕಾರಿ ಹರೀಶ್ ಜೆ. ಸಾಲ್ಯಾನ್, ಜತೆ ಕೋಶಾಧಿಕಾರಿಗಳಾದ ದಿನೇಶ್ ಕುಲಾಲ್, ದಿನೇಶ್ ಕುಂಬ್ಳೆ, ಶಿವಾನಂದ ಎನ್. ದೇವಾಡಿಗ, ಸಲಹೆಗಾರರಾದ ಶ್ರೀಧರ್ ಆರ್. ಶೆಟ್ಟಿ, ಬಿ. ಎನ್. ಚಂದನ್, ಮಹಿಳಾ ವಿಭಾಗದ ಮುಖ್ಯಸ್ಥೆ ಶೀತಲ್ ಎನ್. ಕೋಟ್ಯಾನ್, ಆಡಳಿತ ಸಮಿತಿ ಸದಸ್ಯರು ಸಹಕರಿಸಿದರು.