ಕನ್ನಡ ವಾರ್ತೆಗಳು

ರಾಮಕೃಷ್ಣ ಮಿಷನ್ ನೇತೃತ್ವದ 40ವಾರಗಳ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನ

Pinterest LinkedIn Tumblr

Ramakrshn_claing_photo_1

ಮಂಗಳೂರು,ಫೆ.16: ರಾಮಕೃಷ್ಣ ಮಿಷನ್ ನೇತೃತ್ವದ 40ವಾರಗಳ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಅಭಿಯಾನದ ಕೊನೆಯ‌ ಅಭಿಯಾನವನ್ನು  ನಗರದ ಮಂಗಳಾದೇವಿ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿತ್ತು. 40ನೇ ಅಭಿಯಾನದ ಪ್ರಯುಕ್ತ ಸಮಾರಂಭವನ್ನು‌ಏರ್ಪಡಿಸಲಾಗಿತ್ತು.

ಪುಣೆಯ ರಾಮಕೃಷ್ಣ ಮಠದ‌ ಅಧ್ಯಕ್ಷರಾದ ಸ್ವಾಮಿ ಶ್ರೀಕಾಂತಾ ನಂದಜಿ ಮಹರಾಜ್ ಹಾಗೂ ಡಾ. ಪ್ರಭಾಕರ ಭಟ್‌ ಕಲ್ಲಡ್ಕ ಇವರುಗಳು ಮುಖ್ಯ ಅತಿಥಿಗಳಾಗಿದ್ದರು. ರಾಮಕೃಷ್ಣ ಮಿಷನ್ ಮಂಗಳೂರು ಕಾರ್ಯದರ್ಶಿಗಳಾದ ಸ್ವಾಮಿ ಜಿತಕಾಮಾನಂದಜಿ ಅತಿಥಿಗಳನ್ನು ಸ್ವಾಗತಿಸಿದರು. ಸ್ವಚ್ಛಮಂಗಳೂರು ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ 40 ವಾರಗಳ ಕಾಲ ಸ್ವಚ್ಛತಾ‌ ಅಭಿಯಾನ ಕುರಿತು ಮಾತನಾಡಿದರು.

ಸ್ವಾಮಿ ಶ್ರೀಕಾಂತಾನಂದಜಿ ಮಹರಾಜ್ ದೀಪ ಪ್ರಜ್ವಲನೆ ಮಾಡಿ ಮಾತನಾಡಿದರು. ಮಂಗಳೂರು ರಾಮಕೃಷ್ಣ ಮಿಷನ್‌ ಸನ್ಮಾನ್ಯ ಪ್ರಧಾನಿಗಳ ಸ್ವಚ್ಛ ಭಾರತದಕರೆಯನ್ನು‌ಅಕ್ಷರಶ: ಪಾಲಿಸಿ ದೇಶಕ್ಕೆ ಮಾದರಿಯಾಗಿದೆ. ಸ್ವಚ್ಛತೆಯತ್ತ ಗಮನ ಹರಿಸುವುದು ನಮ್ಮೆಲ್ಲರ‌ ಆದ್ಯ ಕರ್ತವ್ಯವಾಗಿದೆ. ಮಾತೃಭೂಮಿಯನ್ನು ಸ್ವಚ್ಛವಾಗಿಡುವುದು ಭಗವಂತನ ಪೂಜೆಗೆ ಸಮಾನವಾದುದೆಂದು ತಿಳಿಸಿದರು.

Ramakrshn_claing_photo_2 Ramakrshn_claing_photo_3 Ramakrshn_claing_photo_4 Ramakrshn_claing_photo_5 Ramakrshn_claing_photo_6 Ramakrshn_claing_photo_7 Ramakrshn_claing_photo_8 Ramakrshn_claing_photo_9 Ramakrshn_claing_photo_10

ಸ್ವಚ್ಛಮಂಗಳೂರು ಕುರಿತು ರಚಿಸಿದ ಕವನಗಳನ್ನು ವಾಚಿಸಿ ಸೇರಿದ್ದ ಸ್ವಯಂ ಸೇವಕರಿಂದ ಹಾಡಿಸಿದರು. ಮುಖ್ಯ‌ಅತಿಥಿಯಾಗಿ ಭಾಗವಹಿಸಿದ್ದ ಕಲ್ಲಡ್ಕಡಾ. ಪ್ರಭಾಕರ ಭಟ್ ಮಾತನಾಡಿದರು. ಪ್ರತಿವಾರ ಪೂಜಾ ಕೈಂಕರ್ಯದಂತೆ‌ ಅಭಿಯಾನವನ್ನು 40 ವಾರಗಳ ಕಾಲ ನಡೆಸಿಕೊಂಡು ಬಂದಿರುವ ರಾಮಕೃಷ್ಣ ಮಠದ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಯುವ ಜನತೆಯನ್ನು ಈ ಸ್ವಚ್ಛತಾ‌ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದೊಂದು ಮಹಾ ಸಾಧನೆಯೇ‌ ಆಗಿದೆ‌ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು. ಅಭಿಯಾನದ ಹಿರಿಯ ಕಾರ್ಯಕರ್ತ ಶ್ರೀ ಕೆ ವಿ ಸತ್ಯನಾರಾಯಣ ವಂದಿಸಿದರು, ಶ್ರೀ ಚೇತನ ಕುಮಾರ ಪಿಲಿಕುಳ ನಿರೂಪಿಸಿದರು.

ಮಂಗಳಾದೇವಿ ರಥಬೀದಿಯಲ್ಲಿ‌ ಆಯೋಜಿಸಲಾಗಿದ್ದ ಸಭಾಕಾರ್ಯಕ್ರಮದ ತರುವಾಯ 40ನೇ ಸ್ವಚ್ಛತಾ‌ ಅಭಿಯಾನಕ್ಕೆ ವಿಧ್ಯುಕ್ತವಾಗಿ ಡಾ. ಪ್ರಭಾಕರ ಭಟ್‌ ಕಲ್ಲಡ್ಕ‌ಇವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸ್ವಾಮಿಜಿತ ಕಾಮಾನಂದಜಿ, ಸ್ವಾಮಿ ಶ್ರೀಕಾಂತಾನಂದಜಿ, ಶ್ರೀ ಎಮ್‌ಆರ್ ವಾಸುದೇವ, ಶ್ರೀ ಸತೀಶರಾವ್, ಎಂಆರ್ ಪಿ‌ಎಲ್‌ಜನರಲ್ ಮನೇಜರ್ ಶ್ರೀ ಬಿ ಎಚ್ ವಿ ಪ್ರಸಾದ, ಶ್ರೀ ಸುರೇಶ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಸುಮಾರು800 ಜನ ಸ್ವಯಂಸೇವಕರನ್ನುಹನ್ನೊಂದು ತಂಡಗಳಾಗಿ ರೂಪಿಸಿ ಆಯಾ ತಂಡಗಳಿಗೆ ಸ್ವಚ್ಚತೆ ಮಾಡುವ ಬಗ್ಗೆ ಮಾಹಿತಿ ನೀಡಿ, ನಿಗದಿತ ಸ್ಥಳಗಳಿಗೆ ಕಳುಹಿಸಲಾಯಿತು.
1) ಎಂಸಿ‌ಎಫ಼್ ನೌಕರರು ನಿರ್ದೇಶಕರಾದ ಶ್ರೀ ಪ್ರಭಾಕರರಾವ್ ಮುಂದಾಳತ್ವದಲ್ಲಿ ಮಾರ್ನಮಿಕಟ್ಟೆಯಿಂದ ನಂದಿಗುಡ್ಡೆ ವೃತ್ತದವರೆಗೆ‌ ಇರುವ ರಸ್ತೆಯ ಇಕ್ಕೆಲಗಳನ್ನು ಶುಚಿಗೊಳಿಸಿದರು.
2)ಎಚ್ ಡಿ‌ಎಫ಼್ ಸಿ ಬ್ಯಾಂಕಿನ ಸಿಬ್ಬಂದಿಗಳ ತಂಡಶ್ರೀ ಪ್ರಶಾಂತ ಉಪರಂಗಳ ಮಾರ್ಗದರ್ಶನದಲ್ಲಿ ಕಾಸ್ಸಿಯಾ ಶಾಲೆಯಿಂದ ಮಾರ್ನಮಿಕಟ್ಟೆಯ ವರೆಗೆರಸ್ತೆಯ ಬದಿಗಳನ್ನು ಸ್ವಚ್ಛಗೊಳಿಸಿದರು.
3)ಶ್ರೀ ಶಿವು ಪುತ್ತೂರ ಮುಂದಾಳತ್ವದಲ್ಲಿ ಹಿಂದೂ ವಾರಿಯರ್ಸ್ ವಾಟ್ಸಾಪ್‌ ಗ್ರೂಪ್ನ ಸದಸ್ಯರು ಮಾರ್ನಮಿಕಟ್ಟೆರೈಲ್ವೇ ಸೇತುವೆಯ‌ ಅಕ್ಕಪಕ್ಕದ ಪ್ರದೇಶದಲ್ಲಿ ಕಸಕಿತ್ತು ಸ್ವಚ್ಛ ಮಾಡಿದರು.
4)ಕಲ್ಕಿ ಮಾನವಸೇವ ಸಮಿತಿಯ ಸದಸ್ಯರುಶ್ರೀ ಮನೋಹರ ಪ್ರಭು ಹಾಗೂ ಗಣೇಶ ಬಂಗೇರ ನೇತೃತ್ವದಲ್ಲಿ ಮಂಗಳಾ ನಗರದಲ್ಲಿ ಸ್ವಚ್ಛತೆಯನ್ನುಕೈಗೊಂಡರು.
5) ಸಹ್ಯಾದ್ರಿ‌ಇಂಜನಿಯರಿಂಗ್‌ ಕಾಲೆಜಿನ‌ ಉಪನ್ಯಾಸಕಿ ಶ್ರೀಮತಿ ಶ್ರೀಲತಾ ಜೊತೆಗೂಡಿ ಸಹ್ಯಾದ್ರಿ‌ ಇಂಜನೀಯರಿಂಗ್ ವಿದ್ಯಾರ್ಥಿಗಳು ಮಂಗಳಾದೇವಿ ರಸ್ತೆಯಲ್ಲಿ ಪೊರಕೆ ಹಿಡಿದು ಗೂಡಿಸಿದರು.
6) ಐಟಿ ಡೀಲರ್ಸ್ ಅಸೋಸಿಯೇಶನ್ ಸದಸ್ಯರು ಶ್ರೀ ಸಾಯಿ ರಾವ್‌ಜೊತೆಯಾಗಿ ಮಂಗಳಾದೇವಿ ರಸ್ತೆಯಿಂದ ರಾಮಕೃಷ್ಣ ಮಠದತ್ತ ತೆರಳುವ ರಸ್ತೆಯ ಬದಿಗಳನ್ನು ಶುಚಿಗೊಳಿಸಿದರು.
7) ಶಿಕ್ಷಕಿ ಶ್ರೀ ವಿಜಯಲಕ್ಷ್ಮಿ ಮಾರ್ಗದರ್ಶನದಲ್ಲಿ ನಿವೇದಿತ ಬಳಗ ಮಂಗಳಾದೇವಿ ದೇವಸ್ಥಾನದ‌ ಎದುರು ಸ್ವಚ್ಛತೆ ಮಾಡಿದರು.
8) ಪ್ರಾಧ್ಯಾಪಕ ಶ್ರೀ ಶೇಷಪ್ಪ ಅಮೀನ ನೇತೃತ್ವದಲ್ಲಿ ಸರಕಾರಿ ಪ್ರಥಮ ದರ್ಜೆಕಾಲೇಜಿನ ವಿದ್ಯಾರ್ಥಿಗಳು ಉಳಿದೆಲ್ಲ್ಲ ತಂಡಗಳು ಸಂಗ್ರಹಿಸಿದ ಕಸ ಹಾಗೂ ತ್ಯಾಜ್ಯವನ್ನು ಸಂಗ್ರಹಿಸಿ ಲಾರಿಗೆತುಂಬಿಸುವ ಕೆಲಸವನ್ನು ಮಾಡಿದರು.
9) ಭಗಿನಿ ಸಮಾಜದ ಹಿರಿಯ ಸದಸ್ಯರು ಶ್ರೀಮತಿ ವಜ್ರಾರಾವ್ ಮಾರ್ಗದರ್ಶನದಲ್ಲಿ ಜೆಪ್ಪು ಮಾರ್ಕೆಟ್ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛ ಮಾಡಿದರು.
10) ಶ್ರೀಮತಿ ರತ್ನಾ ಆಳ್ವ ಮಾರ್ಗದರ್ಶನದಲ್ಲಿ ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಜೆಪ್ಪು ಮಾರ್ಕೆಟ ರಸ್ತೆಯ‌ ಎರಡೂ ಬದಿಗಳನ್ನು ಗೂಡಿಸಿ ಶುಚಿಗೊಳಿಸಿದರು.
11) ಆರ್ಟ್‌ಆಫ್ ಲಿವಿಂಗ ಸದಸ್ಯರು ಶ್ರೀ ಸದಾಶಿವ ಕಾಮತ್ ನೇತೃತ್ವದಲ್ಲಿ ಮಂಗಳಾದೇವಿ ರಥಬೀದಿಯನ್ನು ಸ್ವಚ್ಛಗೊಳಿಸಿದರು.

ಇನ್ನುಳಿದಂತೆ ಸ್ವಚ್ಛ ಮಂಗಳೂರು ಪರಿವಾರದ 50 ಜನ ಹಿರಿಯಕಾರ್ಯಕರ್ತರು 11 ತಂಡಗಳ ಉಸ್ತುವಾರಿಯನ್ನು ನೋಡಿಕೊಂಡು‌ಅಲ್ಲಲ್ಲಿ ಬೇಕಾದ ಸಹಾಯ ಮಾಡುತ್ತಿದ್ದರು. 40ನೇ ಸ್ವಚ್ಛ ಮಂಗಳೂರು ಅಭಿಯಾನದ ಬಳಿಕ ಆಶ್ರಮದ‌ ಆವರಣದಲ್ಲಿ‌ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ನಂತರ‌ ಆಶ್ರಮದ ಸಭಾ ಭವನದಲ್ಲಿ ಜರುಗಿದ ಧನ್ಯವಾದ ಸಮರ್ಪಣಾ ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತರಾಗಿ ಈ ವರೆಗಿನ ಅಭಿಯಾನಗಳಲ್ಲಿ ಭಾಗವಹಿಸಿದ್ದ ಸಂಘಸಂಸ್ಥೆಗಳ ಮುಖ್ಯಸ್ಥರಿಗೆ ನೆನೆಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸನ್ಮಾನ್ಯಕೇಂದ್ರ ನಗರಾಭಿವೃದ್ಧಿ ಸಚಿವರಾದ ಶ್ರೀ ಎಂ ವೆಂಕಯ್ಯನಾಯ್ಡು ಸಂಸ್ಥೆಗಳ ಮುಖ್ಯಸ್ಥರಿಗೆ ನೆನಪಿನ ಕಾಣಿಕೆ ನೀಡಿದರು.

ಯಶಸ್ವಿಯಾದ ಸ್ವಚ್ಛ ಮಂಗಳೂರು ಪ್ರಾಯೋಗಿಕ ಹಂತ : ಕಳೆದ ನಲವತ್ತು ವಾರಗಳಿಂದ ಅಪೂರ್ವಜನಸ್ಪಂದನೆಯನ್ನು ಪಡೆದು ವಿನೂತನವಾಗಿ ನಡೆದುಕೊಂಡು ಬಂದ ಸ್ವಚ್ಛ ಮಂಗಳೂರು ಅಭಿಯಾನಕ್ಕೆ‌ಇಂದು ನಲವತ್ತರ ಸಂಭ್ರಮ. ಪ್ರಾಯೋಗಿಕವಾಗಿ ಪ್ರಾರಂಭಿಸಿದ್ದ ಈ ಅಭಿಯಾನಜನಮಾನಸವನ್ನು ಮುಟ್ಟಿ ಯಶಸ್ವಿಯಾದುದರ ಪರಿಣಾಮ ಮುಂದಿನ ಹಂತದಲ್ಲಿ ‌ಇದನ್ನು‌ಇನ್ನೂ‌ಉತ್ತಮವಾಗಿ ‌ಆಯೋಜಿಸಬೇಕೆಂಬ ಯೋಜನೆಯಿದೆ. ಈ ಯೋಜನೆಯನ್ನು ಮುಂದಿನ ಅಕ್ಟೋಬರ್ ತಿಂಗಳನಿಂದ ಜಾರಿಗೆತರಲು ಪ್ರಯತ್ನಿಸಲಾಗುವುದು.

ಅಭಿಯಾನಕ್ಕೆ ಕೈ ಜೋಡಿಸಿದವರು : ಈ ಕೊನೆಯ‌ಅಭಿಯಾನದಲ್ಲಿ‌ಅಭಿಯಾನದ ಪ್ರಮುಖರಾದ ಮನಪಾ ಸದಸ್ಯ ಶ್ರೀ ಪ್ರೇಮಾನಂದ ಶೆಟ್ಟಿ, ಶ್ರೀ ವಿಠಲದಾಸ್ ಪ್ರಭು, ಶ್ರೀ ಶುಭೋದಯ ಆಳ್ವ, ಶ್ರೀ ರಾಮಕುಮಾರ ಬೇಕಲ್, ಶ್ರೀ ಹರೀಶ‌ಅಚಾರ್, ಶ್ರೀ ಉಮಾನಾಥಕೋಟೆಕಾರ್, ಪ್ರಾಧ್ಯಪಕ ಶ್ರೀ ಮಹೇಶ ಕೆಬಿ, ಶ್ರೀ ಸುಜಿತ್ ಪ್ರತಾಪ್, ಅಭಿಯಾನದ ಸಂಯೋಜಕ ಶ್ರೀ ದಿಲ್ ರಾಜ್ ಆಳ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಅಭಿಯಾನಕ್ಕೆಮಹಾಪೋಷಕರಾಗಿ‌ಎಂಆರ್‌ಪಿ‌ಎಲ್ ಸಂಸ್ಥೆ ಧನಸಹಾಯ ನೀಡಿ ಪ್ರೋತ್ಸಾಹಿಸುತ್ತಿದೆ.

Write A Comment